»   » ವಿವಾದಿತ ಲೇಖಕ ಯೋಗೇಶ್ ಮಾಸ್ಟರ್ ಸೆಕೆಂಡ್ ಇನ್ನಿಂಗ್ಸ್

ವಿವಾದಿತ ಲೇಖಕ ಯೋಗೇಶ್ ಮಾಸ್ಟರ್ ಸೆಕೆಂಡ್ ಇನ್ನಿಂಗ್ಸ್

Posted By:
Subscribe to Filmibeat Kannada

ತಮ್ಮ 'ಢುಂಢಿ' ಕೃತಿಯ ಮೂಲಕ ವಿಘ್ನ ವಿನಾಶಕ ವಿಘ್ನೇಶ್ವರನನ್ನು ವಿಚಿತ್ರವಾಗಿ ಸೃಷ್ಟಿಸಿ ಕೋಟ್ಯಾಂತರ ಆಸ್ತಿಕರ ಪಾಲಿನ ವಿಲನ್ ಆದ ಯೋಗೇಶ್ ಮಾಸ್ಟರ್ ಅವರು ಇನ್ನೊಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಈ ಹಿಂದೆ ಅವರು 'ಪ್ರೀತಿ ಪ್ಯಾರ್ ಔರ್ ಲವ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಇದೀಗ 'ಮೂರು ಬಿಟ್ಟವರು ಊರಿಗೆ ದೊಡ್ಡವರು' ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಕೊಪ್ಪಳದಲ್ಲಿ ಈ ಚಿತ್ರದ ಮುಹೂರ್ತ ಶುಕ್ರವಾರ (ಫೆ.20) ನಡೆಯಿತು. [ಸ್ಯಾಂಡಲ್ ವುಡ್ ಗೆ 'ಢುಂಢಿ' ಯೋಗೇಶ್ ಮಾಸ್ಟರ್]

Yogesh Master

ಮೂರು ಬಿಟ್ಟವರು...ಚಿತ್ರದ ಮಾಧ್ಯಮ ಲೋಕದ ಕಥಾಹಂದರವನ್ನು ಒಳಗೊಂಡಿದೆ. ಇಂದಿನ ನ್ಯೂಸ್ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿರುವ ಸೆನ್ಸೇಷನಲ್ ಸುದ್ದಿಗಳ ಹಿಂದಿನ ಕಥೆ ಇದು. ಸಾಮಾಜಿಕ ಹಿನ್ನೆಲೆಯಲ್ಲಿ ಸಾಗುವ ಕಥೆ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ.

ಬಸವರಾಜ ಕೊಪ್ಪಳ ಅವರು ನಾಯಕ ನಟರಾಗಿ ಅಭಿನಯಿಸುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಚಿತ್ರದಲ್ಲಿ ಯೋಗೀಶ್ ಮಾಸ್ಟರ್ ಅವರು ಪೋಷಕ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ವರ್ಷಾಂತ್ಯಕ್ಕೆ ಚಿತ್ರದ ತೆರೆಕಾಣುವ ಸಾಧ್ಯತೆಗಳಿವೆ.

ಇನ್ನು ಪ್ರೀತಿ ಪ್ಯಾರ್ ಮತ್ತು ಲವ್ ಚಿತ್ರದ ವಿಚಾರಕ್ಕೆ ಬಂದರೆ, ಇದೊಂದು ಮೂರು ವೆರೈಟಿ ಪ್ರೀತಿಯ ಕಥೆ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಮೂರು ಯುವ ಜೋಡಿಗಳ ಮೂರು ಡಿಫೆರೆಂಟ್ ಲವ್ ಸ್ಟೋರಿ ಹೊಂದಿರುವ ಈ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಯೋಗೇಶ್ ಮಾಸ್ಟರ್ ಹಾಗೂ ಕೃಷ್ಣ ರಚಿಸಿದ್ದಾರೆ. (ಏಜೆನ್ಸೀಸ್)

English summary
Author of the controversial Kannada novel 'Dhundi', Yogesh Master, starts second innings in Sandalwood. 'Mooru Bittavaru Oorige Doddavaru' is Kannada feature film acted and directed by Basavaraj Koppal, in which Yogesh plays a character role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada