»   » ಮಾಧ್ಯಮದವರು 'ರಾಜಕೀಯ'ದ ಪ್ರಶ್ನೆ ಕೇಳುವ ಮುನ್ನವೇ ಹೊರಟು ಹೋದ ದರ್ಶನ್

ಮಾಧ್ಯಮದವರು 'ರಾಜಕೀಯ'ದ ಪ್ರಶ್ನೆ ಕೇಳುವ ಮುನ್ನವೇ ಹೊರಟು ಹೋದ ದರ್ಶನ್

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್, ನಟಿ ರಮ್ಯಾ, ತಾರಾ, ಶ್ರುತಿ ಸೇರಿದಂತೆ ಚಿತ್ರರಂಗದ ಹಲವರು ರಾಜಕೀಯಕ್ಕೆ ಧುಮುಕಿದ್ದಾಯ್ತು. ಇತ್ತ 'ಪ್ರಜಾಕೀಯ'ಕ್ಕೆ ಉಪೇಂದ್ರ ನಾಂದಿ ಹಾಡಿದ್ದೂ ಆಯ್ತು. ಇವರೆಲ್ಲರ ಹಾದಿಯಲ್ಲಿಯೇ, ನಟ ದರ್ಶನ್ ಕೂಡ ರಾಜಕೀಯ ರಂಗಕ್ಕೆ ಕಾಲಿಡುತ್ತಾರಂತೆ ಎಂಬ ಅಂತೆ-ಕಂತೆ ಇಂದು ಬೆಳಗ್ಗಿನಿಂದ ಶುರು ಆಗಿದೆ.

ಸುಮ್ಮನೆ ಗಾಸಿಪ್ ಗಳಿಗೆ ಕಿವಿ ಕೊಡುವುದು ಯಾಕೆ.? ನೇರವಾಗಿ ಕ್ಲಿಯರ್ ಮಾಡಿಕೊಳ್ಳೋಣ ಅಂತ ದರ್ಶನ್ ಬಳಿ ಮಾತನಾಡಲು ತೆರಳಿದ ಮಾಧ್ಯಮದವರಿಗೆ ದರ್ಶನ್ ರಿಂದ ಪ್ರತಿಕ್ರಿಯೆ ಸಿಗಲೇ ಇಲ್ಲ. ಮುಂದೆ ಓದಿರಿ....

'ಲೈಫ್ ಜೊತೆ ಒಂದು ಸೆಲ್ಫಿ' ಮುಹೂರ್ತ ಸಮಾರಂಭ

ಇಂದು ಬೆಳಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ದಿನಕರ್ ತೂಗುದೀಪ ನಿರ್ದೇಶನದ 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರದ ಮುಹೂರ್ತ ಸಮಾರಂಭದ ಮುಖ್ಯ ಅತಿಥಿಯಾಗಿ ದರ್ಶನ್ ಪಾಲ್ಗೊಂಡಿದ್ದರು.

ದಿನಕರ್ ಗೆ ಶುಭ ಹಾರೈಸಿದ ದರ್ಶನ್

''ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾಗೆ ಹಾಗೂ ದಿನಕರ್ ಗೆ ಒಳ್ಳೆಯದ್ದಾಗಲಿ. ಎಲ್ಲರಿಗೂ ಆಲ್ ದಿ ಬೆಸ್ಟ್ ಹೇಳುತ್ತೇನೆ'' ಎಂದು ನಟ ದರ್ಶನ್ ಮಾಧ್ಯಮದವರ ಮುಂದೆ ಹೇಳಿದರು.

'ರಾಜಕೀಯ'ದ ಪ್ರಶ್ನೆ

ರಾಜಕೀಯಕ್ಕೆ ದರ್ಶನ್ ಎಂಟ್ರಿ ಕೊಡುವ ವಿಚಾರದ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳುವ ಮುನ್ನವೇ ಅಲ್ಲಿಂದ ದರ್ಶನ್ ಹೊರಟು ಬಿಟ್ಟರು.

ತಾಯಿ ಮೀನಾ ತೂಗುದೀಪ ಹೇಳಿದಿಷ್ಟು

''ದರ್ಶನ್ ರಾಜಕೀಯಕ್ಕೆ ಬರುವುದಾಗಲಿ, ಕಾಂಗ್ರೆಸ್ ಸೇರುವುದಾಗಲಿ, ಯಾವ ವಿಷಯವೂ ನನ್ನ ಗಮನಕ್ಕೆ ಬಂದಿಲ್ಲ. ದರ್ಶನ್ ರಾಜಕೀಯಕ್ಕೆ ಬರಬೇಕು ಎಂಬ ಇಚ್ಛೆ ನನಗೇನೂ ಇಲ್ಲ. ಅದು ಅವರ ವೈಯುಕ್ತಿಕ ವಿಷಯ'' ಎಂದು ಇದೇ ವೇಳೆ ತಾಯಿ ಮೀನಾ ತೂಗುದೀಪ ಹೇಳಿದರು.

ಹ್ಞೂಂ ಅಂತಿಲ್ಲ, ಊಹ್ಞೂಂ ಅಂತಿಲ್ಲ

ರಾಜಕೀಯಕ್ಕೆ ಕಾಲಿಡುವ ಸುದ್ದಿ ಸುಳ್ಳು ಅಂತ ದರ್ಶನ್ ಹೇಳಿಲ್ಲ. ಹಾಗೇ, ನಿಜ ಅಂತಲೂ ಒಪ್ಪಿಕೊಂಡಿಲ್ಲ. ಪ್ರತಿಕ್ರಿಯೆ ನೀಡಲು ದರ್ಶನ್ ತಯಾರಿಲ್ಲ.

English summary
Did Darshan avoid Media quizzing him about Politics entry.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada