For Quick Alerts
  ALLOW NOTIFICATIONS  
  For Daily Alerts

  ಫೋಟೋಗಳು : ದಿಗಂತ್-ಐಂದ್ರಿತಾ ಜೋಡಿಯ ಅರಿಶಿಣ ಶಾಸ್ತ್ರ

  |

  ಸ್ಯಾಂಡಲ್ ವುಡ್ ನ ಮತ್ತೊಂದು ಕ್ಯೂಟ್ ಜೋಡಿಗೆ ಈಗ ಮದುವೆ ಸಂಭ್ರಮ ನಡೆಯುತ್ತಿದೆ. ಗುಳಿಕೆನ್ನೆ ಹುಡುಗ ದಿಗಂತ್ ಹಾಗೂ ಮುದ್ದು ಮುಖದ ಐಂದ್ರಿತಾ ರೇ ಈಗ ನಿಜ ಜೀವನದಲ್ಲಿಯೂ ಒಂದಾಗಿದ್ದಾರೆ.

  ಈ ಪ್ರೇಮ ಪಕ್ಷಗಳು ಇದೀಗ ವಿವಾಹ ಎನ್ನುವ ಅದ್ಬುತ ಲೋಕಕ್ಕೆ ಹಾರಿವೆ. ನಿನ್ನೆ ಹಾಗೂ ಇಂದು ಇವರ ಮದುವೆ ಕಾರ್ಯಕ್ರಮಗಳು ನಡೆಯುತ್ತಿದೆ. ನಿನ್ನೆಯಿಂದ ಸಂಭ್ರಮ ಶುರುವಾಗಿದ್ದು, ಅರಿಶಿಣ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಪ್ರಕೃತಿಯನ್ನು ಇಷ್ಟ ಪಡುವ ಈ ಜೋಡಿ ಇಬ್ಬರ ಆಸೆಯಂತೆ ಹಸಿರಿನ ನಡುವೆ ಮದುವೆ ಮಾಡಿಕೊಳ್ಳುತ್ತಿದ್ದಾರೆ.

  ಇಂದಿನಿಂದ ಶುರು ದಿಗಂತ್ - ಐಂದ್ರಿತಾ ಕಲ್ಯಾಣ ಸಂಭ್ರಮ

  ಅಂದಹಾಗೆ, ದಿಗಂತ್ ಹಾಗೂ ಐಂದ್ರಿತಾ ರೇ ಜೋಡಿಯ ಅರಿಶಿಣ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮದ ಫೋಟೋಗಳು ಮುಂದಿವೆ ನೋಡಿ...

  ಅರಿಶಿಣ ಶಾಸ್ತ್ರ

  ಅರಿಶಿಣ ಶಾಸ್ತ್ರ

  ಬೆಂಗಳೂರಿನ ನಂದಿ ಬೆಟ್ಟದ ರೆಸಾರ್ಟ್ ಒಂದರಲ್ಲಿ ದಿಗಂತ್ ಹಾಗೂ ಐಂದ್ರಿತಾ ವಿವಾಹ ನಡೆಯುತ್ತಿದೆ. ನಿನ್ನೆ ಅರಿಶಿಣ ಶಾಸ್ತ್ರ ಕಾರ್ಯಕ್ರಮ ನೆರವೇರಿದೆ. ನೀಲಿ ಬಣ್ಣದ ಶಾಲ್ ಹಾಗೂ ಬಿಳಿ ಪಂಚೆಯನ್ನ ಮದುಮಗ ದಿಗಂತ್ ಹಾಕಿದ್ದರು. ಹಳದಿ ಹಾಗೂ ಬಿಳಿ ಬಣ್ಣದ ಸೀರೆಯಲ್ಲಿ ಐಂದ್ರಿತಾ ಮಿಂಚಿದರು.

  ದಿಗಂತ್-ಐಂದ್ರಿತಾ ಮದುವೆ ಎಲ್ಲಿ ಮತ್ತು ಯಾವಾಗ.? ಸಂಪೂರ್ಣ ಮಾಹಿತಿ ಇಲ್ಲಿದೆ..

  ಸಂಗೀತ ಕಾರ್ಯಕ್ರಮ

  ಸಂಗೀತ ಕಾರ್ಯಕ್ರಮ

  ನಿನ್ನೆಯ ಕಾರ್ಯಕ್ರಮದ ಹೈಲೆಟ್ ಅಂದರೆ ಸಂಗೀತ ಕಾರ್ಯಕ್ರಮ. ಸಿನಿಮಾದಲ್ಲಿ ಒಟ್ಟಿಗೆ ಡ್ಯಾನ್ಸ್ ಮಾಡಿದ್ದ ಐಂದ್ರಿತಾ ದಿಗಂತ್ ತಮ್ಮ ಮದುವೆಯಲ್ಲಿಯೂ ಭರ್ಜರಿಯಾಗಿ ಡ್ಯಾನ್ಸ್ ಮಾಡಿದರು. ಒಬ್ಬರನ್ನೊಬ್ಬರು ತಬ್ಬಿಕೊಂಡು ಮಾಡಿದ ಡ್ಯಾನ್ಸ್ ಗೆ ಇಡೀ ಕುಟುಂಬ ಚೆಪ್ಪಾಳೆ ಹೊಡೆಯಿತು.

  ದಿಗಂತ್ - ಐಂದ್ರಿತಾ ಮದುವೆ ಡೇಟ್ ಫಿಕ್ಸ್ : 3 ತಿಂಗಳ ಹಿಂದೆಯೇ ನಿಶ್ಚಿತಾರ್ಥ ಆಗಿತ್ತು

  ರಾಗಿಣಿ ದ್ವಿವೇದಿ ಭಾಗಿ

  ರಾಗಿಣಿ ದ್ವಿವೇದಿ ಭಾಗಿ

  ನಿನ್ನೆ ಕಾರ್ಯಕ್ರಮಕ್ಕೆ ದಿಗಂತ್ ಹಾಗೂ ಐಂದ್ರಿತಾ ಅವರ ತೀರ ಹತ್ತಿರದ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ನಟಿ ರಾಗಿಣಿ ದ್ವಿವೇದಿ ಮದುವೆಯಲ್ಲಿ ಸಖತ್ ಏಂಜಾಯ್ ಮಾಡಿದರು. ನಿರ್ದೇಶಕ ಪನ್ನಗಭರಣ, ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ, ನಟಿ ಕೃಷಿ ತಾಪಂಡ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

  ಇಂದು ಕಲ್ಯಾಣ

  ಇಂದು ಕಲ್ಯಾಣ

  ಇಂದು ಸಂಜೆ 6 ಗಂಟೆಗೆ ಈ ಜೋಡಿಯ ಕಲ್ಯಾಣ ನಡೆಯಲಿದೆ. ಬೆಂಗಾಳಿ ಹಾಗೂ ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಲಿದೆ. ಇದೇ ತಿಂಗಳ 15 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇಲ್ಲಿಗೆ ಕನ್ನಡ ಚಿತ್ರರಂಗದ ಅನೇಕರು ಭಾಗಿಯಾಗಿ ನೂತನ ವಧು ವರರಿಗೆ ಶುಭ ಕೋರಲಿದ್ದಾರೆ.

  ನಿಮ್ಮ ಆಶೀರ್ವಾದ ಇರಲಿ

  ನಿಮ್ಮ ಆಶೀರ್ವಾದ ಇರಲಿ

  ಮದುವೆಯ ದಿನ ಮಾತನಾಡಿದ ದಿಗಂತ್ ಹಾಗೂ ಐಂದ್ರಿತಾ ಜೋಡಿ. ''ನಾವು ಮದುವೆ ಆಗುತ್ತಿದ್ದೇವೆ. ನಿಮ್ಮ ಆಶೀರ್ವಾದ, ಪ್ರೀತಿ, ವಿಶ್ವಾಸ ಸದಾ ಹೀಗೆ ಇರಲಿ. ಎಲ್ಲರಿಗೂ ಧನ್ಯವಾದ. ಎಂದು ತಮ್ಮ ಪ್ರೀತಿಯನ್ನ ಹಂಚಿಕೊಂಡಿದ್ದಾರೆ.

  English summary
  Photos: Kannada actor Diganth-Aindrita Ray haldi ceremony. Aindrita and Diganth getting married today in private resort, Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X