For Quick Alerts
  ALLOW NOTIFICATIONS  
  For Daily Alerts

  ದಿಗಂತ್ - ಐಂದ್ರಿತಾ ಮದುವೆ ಡೇಟ್ ಫಿಕ್ಸ್ : 3 ತಿಂಗಳ ಹಿಂದೆಯೇ ನಿಶ್ಚಿತಾರ್ಥ ಆಗಿತ್ತು

  |
  ತಮ್ಮ ಮದುವೆ ಬಗ್ಗೆ ರಹಸ್ಯ ಬಿಚ್ಚಿಟ್ಟ ಐಂದ್ರಿತಾ ರೇ | FILMIBEAT KANNADA

  ಬಾಲಿವುಡ್ ಜೋಡಿ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮದುವೆ ಸಂಭ್ರಮ ಮುಗಿಯುವ ಮುನ್ನವೇ ಕನ್ನಡದಲ್ಲಿ ಈಗ ಮತ್ತೊಂದು ತಾರ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧವಾಗಿದೆ.

  ಸಾಕಷ್ಟು ವರ್ಷಗಳಿಂದ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಪ್ರೇಮದ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಇತ್ತು. ಈ ವಿಷಯವನ್ನು ಈ ಜೋಡಿ ಕೂಡ ಒಪ್ಪಿಕೊಂಡಿದ್ದರು. ಕೆಲ ತಿಂಗಳುಗಳ ಹಿಂದೆ ದಿಗಂತ್ ನಟನೆಯ 'ಕಥೆಯೊಂದು ಶುರುವಾಗಿದೆ' ಸಿನಿಮಾದ ಪ್ರೀಮಿಯರ್ ಶೋ ನಲ್ಲಿ ಭಾಗಿಯಾದ ಸಂದರ್ಭದಲ್ಲಿ ಐಂದ್ರಿತಾ ಮದುವೆಯ ಬಗ್ಗೆ ಮಾತನಾಡಿದ್ದರು.

  ಮದುವೆ ಯಾವಾಗ ? ಅಂದ್ರೆ ಹೀಗೆ ಹೇಳಿದ್ರು ದಿಗಂತ್ - ಐಂದ್ರಿತಾ! ಮದುವೆ ಯಾವಾಗ ? ಅಂದ್ರೆ ಹೀಗೆ ಹೇಳಿದ್ರು ದಿಗಂತ್ - ಐಂದ್ರಿತಾ!

  ಅದೇ ರೀತಿ ಈ ಜೋಡಿಯ ವಿವಾಹದ ದಿನಾಂಕ ಈಗ ನಿಗದಿಯಾಗಿದೆ. ದಿಗಂತ್ ಹಾಗೂ ಐಂದ್ರಿತಾ ಕಲ್ಯಾಣೋತ್ಸವದ ಕುರಿತ ಕೆಲ ಮಾಹಿತಿಗಳು ಮುಂದಿವೆ ಓದಿ...

  ಡಿಸೆಂಬರ್ ನಲ್ಲಿ ಮದುವೆ

  ಡಿಸೆಂಬರ್ ನಲ್ಲಿ ಮದುವೆ

  ನಟ ದಿಗಂತ್ ಹಾಗೂ ಐಂದ್ರಿತಾ ರೇ ಮದುವೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 11 ಹಾಗೂ 12 ರಂದು ಈ ತಾರ ಜೋಡಿಯ ಕಲ್ಯಾಣೋತ್ಸವ ನಡೆಯಲಿದೆ. ಮೊದಲ ದಿನ ಅರಿಶಿಣ ಶಾಸ್ತ್ರ ಹಾಗೂ ಎರಡನೇ ದಿನ ಮಾಂಗಲ್ಯಧಾರಣೆ ಕಾರ್ಯಕ್ರಮಗಳು ಜರುಗಲಿದೆ.

  ದಿಗಂತ್- ಐಂದ್ರಿತಾ ಪ್ರೇಮಕಥೆ ಶುರುವಾಗಿದ್ದು ಹೀಗೆ ದಿಗಂತ್- ಐಂದ್ರಿತಾ ಪ್ರೇಮಕಥೆ ಶುರುವಾಗಿದ್ದು ಹೀಗೆ

  3 ತಿಂಗಳ ಹಿಂದೆ ನಿಶ್ಚಿತಾರ್ಥ

  3 ತಿಂಗಳ ಹಿಂದೆ ನಿಶ್ಚಿತಾರ್ಥ

  ಮೂರು ತಿಂಗಳ ಹಿಂದೆಯೇ ದಿಗಂತ್ - ಐಂದ್ರಿತಾ ರೇ ಜೋಡಿಯ ನಿಶ್ಚಿತಾರ್ಥ ಕಾರ್ಯಕ್ರಮಗಳ ನಡೆದಿದೆಯಂತೆ. ಸರಳವಾಗಿ ಬೆಂಗಳೂರಿನ ದಿಗಂತ್ ನಿವಾಸದಲ್ಲಿ ನಿಶ್ಚಿತಾರ್ಥ ನೆರವೇರಿದ್ದು, ಕುಟುಂಬ ಸದಸ್ಯರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಂತೆ. ಕುಟುಂಬದ ಹಿರಿಯ ಆಶೀರ್ವಾದದ ನಡುವೆ ಈ ಜೋಡಿ ಉಂಗುರ ಬದಲಿಸಿಕೊಂಡಿದೆ.

  'ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ' ಎಂದ ದಿಗಂತ್ - ಐಂದ್ರಿತಾ 'ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ' ಎಂದ ದಿಗಂತ್ - ಐಂದ್ರಿತಾ

  ಡೈಮಂಡ್ ಮತ್ತು ಡಿಂಪಲ್

  ನಿಶ್ಚಿತಾರ್ಥದ ಉಂಗುರದ ಫೋಟೋವನ್ನು ಅಂದ್ರಿತಾ ರೇ ತಮ್ಮ ಇನ್ಟಾಗ್ರಾಮ್ ಹಂಚಿಕೊಂಡಿದ್ದಾರೆ. ''ಇಷ್ಟು ದಿನ ಎಲ್ಲ ಸುದ್ದಿಗಳಿಗೆ ತೆರೆ ಎಳೆಯುತ್ತಿದ್ದೇವೆ. ಈಗ ನನ್ನ ಬಳಿ ಡೈಮಂಡ್ (ಉಂಗುರ) ಮ್ತು ಡಿಂಪಲ್ (ದಿಗಂತ್) ಎರಡು ಇದೆ'' ಎಂದು ಬರೆದುಕೊಳ್ಳುವ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

  ಎರಡೂ ಸಂಪ್ರದಾಯ ವಿವಾಹ

  ಎರಡೂ ಸಂಪ್ರದಾಯ ವಿವಾಹ

  ಎರಡು ಸಂಪ್ರದಾಯದಂತೆ ದಿಗಂತ್ - ಐಂದ್ರಿತಾ ಮದುವೆ ನಡೆಯಲಿದೆಯಂತೆ. ಕನ್ನಡ ಮತ್ತು ಬೆಂಗಾಲಿ ಸ್ಟೈಲ್ ನಲ್ಲಿ ವಿವಾಹದ ಕಾರ್ಯಕ್ರಮ ಜರುಗಲಿದೆಯಂತೆ. ಪರಿಸರ ಮತ್ತು ಪ್ರಾಣಿಗಳ ಬಗ್ಗೆ ಪ್ರೀತಿ ಹೊಂದಿರುವ ಈ ಜೋಡಿಯ ಮದುವೆ ಕೂಡ ಪರಿಸರ ಸ್ನೇಹಿಯಾಗಿ ಇರಲಿದೆಯಂತೆ.

  ಚಿತ್ರರಂಗದ ಗಣ್ಯರಿಗೆ ಪಾರ್ಟಿ

  ಚಿತ್ರರಂಗದ ಗಣ್ಯರಿಗೆ ಪಾರ್ಟಿ

  ಡಿಸೆಂಬರ್ 11, 12ರ ಮದುವೆಯ ನಂತರ ಚಿತ್ರರಂಗದ ಸ್ನೇಹಿತರಿಗಾಗಿ ಒಂದು ಪಾರ್ಟಿಯನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮ ಡಿಸೆಂಬರ್ 15 ರಂದು ನಡೆಯುವ ಸಾಧ್ಯತೆ ಇದೆ. ಕನ್ನಡ ಚಿತ್ರರಂಗದ ಬಹುತೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  ಎಂಟು ವರ್ಷದ ಪ್ರೀತಿ

  ಎಂಟು ವರ್ಷದ ಪ್ರೀತಿ

  'ಮನಸಾರೆ' ಸಿನಿಮಾದ ಮೂಲಕ 2009ರಲ್ಲಿ ದಿಗಂತ್, ಐಂದ್ರಿತಾ ಪರಸ್ಪರ ಪರಿಚಯ ಆದರು. ನಂತರ 2010ರ ವೇಳೆ ಗೆಳೆತನ ಪ್ರೀತಿಗೆ ಪರಿವರ್ತನೆಯಾಯ್ತು. ಇಬ್ಬರು ಪ್ರೀತಿಸುವ ನಿರ್ಧಾರಕ್ಕೆ ಬಂದರು. ಈಗ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಆಗುತ್ತಿದ್ದಾರೆ. 'ಮನಸಾರೆ' ಹಾಗೂ 'ಪಾರಿಜಾತ' ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದಾರೆ.

  English summary
  Kannada movie love birds Diganth and Aindrita Ray wedding ceremony will be held on December 12, 13 in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X