For Quick Alerts
  ALLOW NOTIFICATIONS  
  For Daily Alerts

  ಹೊಸ ಕಥೆಯಲ್ಲಿ ಶ್ರೀ ರಾಮನಾದ ದೂದ್ ಪೇಡಾ ದಿಗಂತ್

  By Pavithra
  |

  'ಕಥೆಯೊಂದು ಶುರುವಾಗಿದೆ' ಸಿನಿಮಾ ಸಕ್ಸಸ್ ನಲ್ಲಿರುವ ನಟ ದಿಗಂತ್ ಅಭಿಮಾನಿಗಳಿಗೆ ತಮ್ಮ ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. 'ಕಥೆಯೊಂದು ಶುರುವಾಗಿದೆ' ಚಿತ್ರದ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿರುವ ಬೆನ್ನಲ್ಲೆ ದಿಗಂತ್ ಶ್ರೀ ರಾಮನಾಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.

  ಬಾಲಿವುಡ್ ನ ನಿರ್ದೇಶಕ ಕುನಾಲ್ ಕೊಹ್ಲಿ ರಾಮಾಯಣವನ್ನಿಟ್ಟುಕೊಂಡು ಹೊಸ ಸಿನಿಮಾ ಮಾಡುತ್ತಿದ್ದಾರೆ. 'ಫನಾ', 'ಹಮ್ ತುಮ್', ಸಿನಿಮಾ ನಿರ್ದೇಶಿಸಿದ್ದ ಕುನಾಲ್ ಕೊಹ್ಲಿ, ಈ ಬಾರಿ ಪೌರಾಣಿಕ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.

  ಕಥೆಯೊಂದು ಶುರುವಾಗಿದೆ ವಿಮರ್ಶಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿ ಆಯ್ತಾ? ಕಥೆಯೊಂದು ಶುರುವಾಗಿದೆ ವಿಮರ್ಶಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿ ಆಯ್ತಾ?

  ಶ್ರೀ ರಾಮನ ಪಾತ್ರಕ್ಕೆ ದಿಗಂತ್ ಸೂಕ್ತವಾದ ಆಯ್ಕೆ ಎಂದು ತಿಳಿದಿರುವ ನಿರ್ದೇಶಕರು ಈ ಬಗ್ಗೆ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಮಾಹಿತಿ ಹೊರ ಹಾಕಲಿದ್ದಾರಂತೆ.

  ಎರಡು ಭಾಗಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಶುರುವಾಗಲಿದ್ಯಂತೆ. ಈಗಾಗಲೇ ಬಾಲಿವುಡ್ ನ ಚಿತ್ರಗಳಲ್ಲಿ ಅಭಿನಯ ಮಾಡಿ ಭರವಸೆ ಮೂಡಿಸಿರುವ ದಿಗಂತ್ ರಾಮನ ಪಾತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವುದೇ ಅಭಿಮಾನಿಗಳ ಕುತೂಹಲ.

  English summary
  Kannada actor Diganth is doing Bollywood cinema. Diganth plays Rama in the movie. The film is directed by Kunal Kohli

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X