»   » ಡಿಂಪಲ್ ಸ್ಟಾರ್ ದಿಗಂತ್ 'ಒಂದೂರಲ್ಲಿ ಒಬ್ಬ ರಾಜ ಇದ್ದ'

ಡಿಂಪಲ್ ಸ್ಟಾರ್ ದಿಗಂತ್ 'ಒಂದೂರಲ್ಲಿ ಒಬ್ಬ ರಾಜ ಇದ್ದ'

Posted By:
Subscribe to Filmibeat Kannada
ತೂಗುದೀಪ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾದ 'ಬುಲ್ ಬುಲ್' ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಸಂಸ್ಥೆ 'ಒಂದೂರಲ್ಲಿ ಒಬ್ಬ ರಾಜ ಇದ್ದ' ಎಂಬ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದೆ. ಶ್ರಾವಣಮಾಸದ ವರಮಹಾಮಲಕ್ಷ್ಮೀ ಹಬ್ಬದ ಶುಭದಿನದಂದು ಈ ಚಿತ್ರ ಆರಂಭವಾಗಲಿದೆ.

ಮೀನಾತೂಗುದೀಪ ಶ್ರೀನಿವಾಸ್ ಈ ಚಿತ್ರದ ನಿರ್ಮಾಪಕರು. 'ಬುಲ್ ಬುಲ್' ಚಿತ್ರದ ಮೂಲಕ ತಂತ್ರಜ್ಞರನ್ನು ನಿರ್ಮಾಪಕರನಾಗಿ ಮಾಡಿದ ಖ್ಯಾತಿ ತೂಗುದೀಪ ಪ್ರೊಡಕ್ಷನ್ಸ್ ಸಂಸ್ಥೆಯದು. ಈ ಚಿತ್ರದ ಮೂಲಕ ಮಲ್ಲಿಕಾರ್ಜುನ್.ಬಿ.ಸಂಕನಗೌಡರ, ಚಿಂತನ್ ಹಾಗೂ ಶ್ರೀನಿವಾಸ್ ನಿರ್ಮಾಪಕರಾಗುತ್ತಿದ್ದಾರೆ.

'ಜೊತೆಜೊತೆಯಲಿ', 'ನವಗ್ರಹ' ಹಾಗೂ 'ಸಾರಥಿ'ಯಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ದಿನಕರ್ ತೂಗುದೀಪ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆಗಸ್ಟ್ ನಿಂದ ಆರಂಭವಾಗುವ ಈ ಚಿತ್ರಕ್ಕೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಡಿಂಪಲ್ ಸ್ಟಾರ್ ದಿಗಂತ್ ಈ ಚಿತ್ರದ ನಾಯಕರಾಗಿದ್ದು, ರಚಿತಾ ರಾಮ್ (ಬುಲ್ ಬುಲ್) ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ವಿ.ಹರಿಕೃಷ್ಣರ ಸಂಗೀತ ನಿರ್ದೇಶನವಿದೆ. ‌(ಬುಲ್ ಬುಲ್ ಚಿತ್ರ ವಿಮರ್ಶೆ ಓದಿ)

ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನಕಾರರಾಗಿದ್ದಾರೆ. ಮಲ್ಲಿಕಾರ್ಜುನ್.ಬಿ.ಸಂಕನಗೌಡರ ಸಹ ನಿರ್ದೇಶನವಿರುವ 'ಒಂದೂರಲ್ಲಿ ಒಬ್ಬ ರಾಜ ಇದ್ದ' ಚಿತ್ರಕ್ಕೆ ಚಿಂತನ್ ಸಂಭಾಷಣೆ ಬರೆಯುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Toogudeepa productions to start new film titled as 'Ondooralli Obba Raja Idda'. The film directed by Dinakar Toogudeepa. Dimple Star Diganth and 'Bul Bul' fame Rachita Ram are in the lead roles. V Harikrishna has composed the soundtrack.
Please Wait while comments are loading...