»   » ಪ್ರಜ್ವಲ್ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ದಿನಕರ್

ಪ್ರಜ್ವಲ್ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ದಿನಕರ್

Posted By:
Subscribe to Filmibeat Kannada
Dinakar Thoogudeepa Clarified About Prajwal Devaraj Incident | Filmibeat Kannada

ಸೆಪ್ಟೆಂಬರ್ 27 ರಾತ್ರಿ ಸೌಂತ್ ಎಂಡ್ ವೃತ್ತದಲ್ಲಿ ನಡೆದ ಅಪಘಾತದಲ್ಲಿ, ಉದ್ಯಮಿ ಆದಿಕೇಶವುಲು ಮೊಮ್ಮಗ ವಿಷ್ಣು ಅವರ ನಟ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಇದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಇದಕ್ಕೆ ಸ್ವತಃ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಸ್ಪಷ್ಟನೆ ನೀಡಿದ್ದರು. ದಿಗಂತ್ ಕನಕಪುರದಲ್ಲಿ ಚಿತ್ರವೊಂದರ ಶೂಟಿಂಗ್ ನಲ್ಲಿದ್ದರೇ, ಪ್ರಜ್ವಲ್ ಗೋವಾದಲ್ಲಿ 'ಲೈಫ್ ಜೊತೆ ಸೆಲ್ಫಿ' ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದ್ದರು.

ಇದೀಗ, ಈ ಪ್ರಕರಣ ಮತ್ತು ಇಬ್ಬರು ನಟರ ವಿರುದ್ಧ ಬಂದಿರುವ ಆರೋಪದ ಬಗ್ಗೆ ನಿರ್ದೇಶಕ ದಿನಕರ್ ತೂಗುದೀಪ್ ಮಾತನಾಡಿದ್ದಾರೆ. ಏನಂದ್ರು ಎಂದು ತಿಳಿಯಲು ಮುಂದೆ ಓದಿ.....

ಸೆಪ್ಟೆಂಬರ್ 26 ರಿಂದ ಗೋವಾದಲ್ಲಿದ್ದೀವಿ

ಸೆಪ್ಟೆಂಬರ್ 26 ರಿಂದ ನಾವೆಲ್ಲಾ ಗೋವಾದಲ್ಲಿ ಶೂಟಿಂಗ್ ಮಾಡುತ್ತಿದ್ದೀವಿ. ಅಕ್ಟೋಬರ್ 10ರ ವರೆಗೂ ಅಲ್ಲೇ ಚಿತ್ರೀಕರಣ ಮಾಡಲಿದ್ದೀವಿ ಎಂದು ನಿರ್ದೇಶಕ ದಿನಕರ್ ತೂಗುದೀಪ ತಿಳಿಸಿದ್ದಾರೆ.


ಅಪಘಾತ, ಡ್ರಗ್ಸ್ ಆರೋಪಕ್ಕೆ ಪ್ರಜ್ವಲ್ ದೇವರಾಜ್, ದಿಗಂತ್ ಸ್ಪಷ್ಟನೆ

ಪ್ರಜ್ವಲ್ ನನ್ನ ಜೊತೆಯಲ್ಲಿದ್ದರು

ಈ ಘಟನೆ ನಡೆದ ದಿನ ರಾತ್ರಿ 8 ಗಂಟೆವರೆಗೂ ಮತ್ತು ಬೆಳಿಗ್ಗೆ 10 ಗಂಟೆಯಿಂದ ನನ್ನ ಜೊತೆಯಲ್ಲೇ ಶೂಟಿಂಗ್ ನಲ್ಲಿದ್ದರು'' - ದಿನಕರ್ ತೂಗುದೀಪ್, ನಿರ್ದೇಶಕ

ಗೋವಾದಲ್ಲಿ ಶೂಟಿಂಗ್

ದಿನಕರ್ ತೂಗುದೀಪ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್, ನಟಿ ಹರಿಪ್ರಿಯಾ, ನಟ ಪ್ರಜ್ವಲ್ ದೇವ್ ರಾಜ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ದಿನಕರ್ ತೂಗುದೀಪ ಅವರು ಮಾತನಾಡಿರುವ ವಿಡಿಯೋ ಇಲ್ಲಿದೆ

English summary
Dinakar thoogudeepa clarifed about Kannada Actor Prajwal devaraj. ನಟ ಪ್ರಜ್ವಲ್ ದೇವರಾಜ್ ಅವರ ಮೇಲೆ ಬಂದಿರುವ ಆರೋಪಕ್ಕೆ ನಿರ್ದೇಶಕ ದಿನಕರ್ ತೂಗುದೀಪ ಅವರ ಸ್ಪಷ್ಟನೆ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada