»   » ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಲಿಂಗದೇವರು ತಕರಾರು

ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಲಿಂಗದೇವರು ತಕರಾರು

Posted By:
Subscribe to Filmibeat Kannada

2015ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಹೊಸ ತಕರಾರು ಆರಂಭವಾಗಿದೆ.

ಕರ್ನಾಟಕ ಸರ್ಕಾರವು ಕನ್ನಡ ಮತ್ತು ಕರ್ನಾಟಕದ ಪ್ರಾದೇಶಿಕ ಭಾಷೆಗಳಲ್ಲಿ ಉತ್ತಮ ಚಲನಚಿತ್ರಗಳ ನಿರ್ಮಾಣಕ್ಕೆ ಒತ್ತಾಸೆಯಾಗುವ, ಚಲನಚಿತ್ರ ಮಾಧ್ಯಮದ ಸೃಜನಶೀಲತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಉತ್ತೇಜಿಸುವ ಹಾಗೂ ಸಮಾಜಮುಖಿಯಾದ ಸದಭಿರುಚಿಯ ಪ್ರಯತ್ನಗಳನ್ನು ಗುರುತಿಸುವ, ಸದುದ್ದೇಶದಿಂದ ಕರ್ನಾಟಕ ರಾಜ್ಯ ಚಲನಚಿತ್ರ ವಾರ್ಷಿಕ ಪ್ರಶಸ್ತಿಗಳನ್ನು ಸ್ಥಾಪಿಸಿದೆ.[ನಿರ್ದೇಶಕ ಬಿ.ಎಸ್.ಲಿಂಗದೇವರು ವಿಶೇಷ ಸಂದರ್ಶನ]

Director BS Lingadevaru's Letter to Information Department

ಪ್ರತೀ ಕ್ಯಾಲೆಂಡರ್ ವರ್ಷದಲ್ಲಿ ಅಂದರೆ ಜನವರಿ 1 ರಿಂದ ಡಿಸೆಂಬರ್ 31 ರೊಳಗಿನ ಅವಧಿಯಲ್ಲಿ ಪ್ರಾದೇಶಿಕ ಚಲನಚಿತ್ರ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆದ ಕನ್ನಡ ಮತ್ತು ಕರ್ನಾಟಕದ ಪ್ರಾದೇಶಿಕ ಭಾಷಾ ಚಿತ್ರಗಳು ಆಯಾ ವರ್ಷದ ಪ್ರಶಸ್ತಿಗಳಿಗೆ ಸ್ಪರ್ಧಿಸಲು ಅರ್ಹವಾಗಿರುತ್ತದೆ. ಹಾಗೂ, 2015ನೇ ಸಾಲಿನ ಕನ್ನಡ ಹಾಗು ಕರ್ನಾಟಕದ ಪ್ರಾದೇಶಿಕ ಭಾಷಾ ಚಲನಚಿತ್ರಗಳಿಗೆ ವಾರ್ಷಿಕ ಪ್ರಶಸ್ತಿಗಳನ್ನು ಆಯ್ಕೆ ಮಾಡಲು ಸಮಿತಿಯನ್ನು ನೇಮಿಸಿದೆ.

Director BS Lingadevaru's Letter to Information Department

ಸದರಿ ಸಮಿತಿಯು ಕನ್ನಡ ಹಾಗೂ ಕರ್ನಾಟಕದ ಪ್ರಾದೇಶಿಕ ಭಾಷಾ ಚಲನಚಿತ್ರಗಳನ್ನು ವೀಕ್ಷಿಸಲು ಆರಂಭಿಸಿದೆ. ಪ್ರಶಸ್ತಿ ನೀಡಲು ರಚಿಸಿರುವ ನೀತಿ-ನಿಯಮ ಮತ್ತು ಮಾರ್ಗಸೂಚಿಗಳ ಅನುಸಾರ, ಡಿಜಿಟಲ್ ಫಾರ್ಮೆಟ್ ನಲ್ಲಿ Digibeta (Mixed audio track) ಮೂಲಕ ಚಲನಚಿತ್ರಗಳ ವೀಕ್ಷಣೆ ಮಾಡಬೇಕು.

Director BS Lingadevaru's Letter to Information Department

ಆದರೆ, ಸದರಿ ಸಮಿತಿಯು BLURAY ಫಾರ್ಮೆಟ್ ನಲ್ಲಿ ಚಲನಚಿತ್ರ ವೀಕ್ಷಣೆ ಮಾಡುತ್ತಿರುವುದು ಮತ್ತು ನಿರ್ಮಾಪಕರು ಕೂಡ BLURAY ಫಾರ್ಮೆಟ್ ನಲ್ಲಿ ಅರ್ಜಿ ಸಲ್ಲಿಸಿರುವುದು 'ನಾನು ಅವನಲ್ಲ...ಅವಳು' [ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು'] ನಿರ್ದೇಶಕ ಬಿ.ಎಸ್.ಲಿಂಗದೇವರು ಗಮನಕ್ಕೆ ಬಂದಿದ್ದು, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

Director BS Lingadevaru's Letter to Information Department

ಕರ್ನಾಟಕ ಸರ್ಕಾರವು ರೂಪಿಸಿರುವ ನೀತಿ-ನಿಯಮ ಮತ್ತು ಮಾರ್ಗಸೂಚಿಗಳ ಉಲ್ಲಂಘನೆಯಾಗಿರುವ ಕಾರಣ, ತಕ್ಷಣ ಚಲನಚಿತ್ರಗಳ ವೀಕ್ಷಣೆ ರದ್ದುಗೊಳಿಸಬೇಕು ಅಂತ ತಮ್ಮ ಪತ್ರದಲ್ಲಿ ಬಿ.ಎಸ್.ಲಿಂಗದೇವರು ಮನವಿ ಮಾಡಿದ್ದಾರೆ. ನಿರ್ದೇಶಕ ಬಿ.ಎಸ್ ಲಿಂಗದೇವರು ಸರ್ಕಾರಕ್ಕೆ ಬರೆದಿರುವ ಪತ್ರ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ ನೋಡಿ....

English summary
Kannada Director BS Lingadevaru of 'Naanu Avanalla Avalu' fame has written letter to Information department requesting to cancel watching movies, which is in BLURAY format as it is against the rules and regulations prescribed by Karnataka Government constituted for State film Awards.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada