For Quick Alerts
  ALLOW NOTIFICATIONS  
  For Daily Alerts

  ಐದು ದಶಕದ ಬಳಿಕ ಮತ್ತೆ 'ಕಸ್ತೂರಿ ನಿವಾಸ': ರಚಿತಾ ರಾಮ್ ನಾಯಕಿ

  |

  ಸುಮಾರು ಐದು ದಶಕದ ಬಳಿಕ 'ಕಸ್ತೂರಿ ನಿವಾಸ' ಹೆಸರಿನಲ್ಲಿ ಕನ್ನಡ ಸಿನಿಮಾವೊಂದು ಶುರುವಾಗಿದೆ. 1971ರಲ್ಲಿ ಡಾ ರಾಜ್ ಕುಮಾರ್ ನಟಿಸಿದ್ದ ಚಿತ್ರ ಕಸ್ತೂರಿ ನಿವಾಸ. ಸ್ಯಾಂಡಲ್‌ವುಡ್ ಪಾಲಿಗೆ ಈ ಚಿತ್ರ ಅತ್ಯಂತ ಸ್ಮರಣೀಯ. ಅಣ್ಣಾವ್ರು ಅಭಿಮಾನಿಗಳಿಗೆ ಸಾರ್ವಕಾಲಿನ ನೆಚ್ಚಿನ ಚಿತ್ರ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಇಂತಹ ಎವರ್‌ಗ್ರೀನ್ ಚಿತ್ರದ ಹೆಸರಿನಲ್ಲಿ ಮತ್ತೊಮ್ಮೆ ಸಿನಿಮಾ ಬರ್ತಿದೆ. ಖ್ಯಾತ ನಿರ್ದೇಶಕ ದಿನೇಶ್ ಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಇವರ ಪಾಲಿಗೂ ಈ ಹೊಸ ಚಿತ್ರ ವಿಶೇಷವಾಗಿರಲಿದೆ. ಅಂದ್ಹಾಗೆ, ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಂದೆ ಓದಿ....

  ದಿನೇಶ್ ಬಾಬು 50ನೇ ಚಿತ್ರ

  ದಿನೇಶ್ ಬಾಬು 50ನೇ ಚಿತ್ರ

  ಸುಪ್ರಬಾತ, ಅಮೃತವರ್ಷಿಣಿ, ಲಾಲಿ, ನಿಶ್ಯಬ್ದ, ಪ್ರೇಮೋತ್ಸವ, ಹಾಲಿವುಡ್, ಅಭಿ, ಇನ್ಸ್‌ ಪೆಕ್ಟರ್ ವಿಕ್ರಂ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ದಿನೇಶ್ ಬಾಬು ಈಗ ತಮ್ಮ 50ನೇ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ 'ಕಸ್ತೂರಿ ನಿವಾಸ' ಎಂದು ಹೆಸರಿಟ್ಟಿದ್ದಾರೆ.

  ಕಿಚ್ಚ ಸುದೀಪ್-ರಚಿತಾ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸುವ ಸುದ್ದಿ, ನಿಜವೇ?

  ರಚಿತಾ ರಾಮ್ ನಾಯಕಿ!

  ರಚಿತಾ ರಾಮ್ ನಾಯಕಿ!

  ದಿನೇಶ್ ಬಾಬು ನಿರ್ದೇಶನದ 'ಕಸ್ತೂರಿ ನಿವಾಸ' ಚಿತ್ರಕ್ಕೆ ರಚಿತಾ ರಾಮ್ ಪ್ರಮುಖ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಚ್ಚು ಜೊತೆ ಶ್ರುತಿ ಪ್ರಕಾಶ್ ಹಾಗೂ ಸ್ಕಂದ ಅಶೋಕ್ ಪ್ರಮುಖ ತಾರಬಳಗದಲ್ಲಿ ಇರಲಿದ್ದಾರೆ.

  ಹಳೆ ಚಿತ್ರಕ್ಕೆ ಸಂಬಂಧವಿಲ್ಲ!

  ಹಳೆ ಚಿತ್ರಕ್ಕೆ ಸಂಬಂಧವಿಲ್ಲ!

  ಕಸ್ತೂರಿ ನಿವಾಸ ಎಂದಾಕ್ಷಣ ಅಣ್ಣಾವ್ರ ಸಿನಿಮಾ ನೆನಪಾಗುತ್ತದೆ. ಆದರೆ, ಹಳೆಯ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದಿನೇಶ್ ಬಾಬು ಸ್ಪಷ್ಟಪಡಿಸಿದ್ದಾರೆ. ಸೆಪ್ಟೆಂಬರ್ ಅಂತ್ಯಕ್ಕೆ ಚಿತ್ರೀಕರಣ ಸಹ ಶುರುವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

  ರಚಿತಾ ರಾಮ್ ಫುಲ್ ಬ್ಯುಸಿ!

  ರಚಿತಾ ರಾಮ್ ಫುಲ್ ಬ್ಯುಸಿ!

  ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಹೆಚ್ಚು ಬ್ಯುಸಿಯಾಗಿದ್ದಾರೆ. ಕನ್ನಡದ ಏಪ್ರಿಲ್, ಎಕ್ ಲವ್ ಯಾ, ಲಿಲ್ಲಿ, ವೀರಂ, ಡಾಲಿ, 100 ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ತೆಲುಗಿನ 'ಸೂಪರ್ ಮಚ್ಚಿ' ಚಿತ್ರದಲ್ಲೂ ನಟಿಸುತ್ತಿದ್ದಾರೆ.

  English summary
  Director Dinesh Baboo's 50th film titled as Kasturi Nivasa. Rachita Ram Playing Main Lead Role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X