»   » ಸಿಕ್ಕಾಪಟ್ಟೆ ಚೇಂಜ್ ಆಗ್ತಿದ್ದಾರೆ ದುನಿಯಾ ಸೂರಿ

ಸಿಕ್ಕಾಪಟ್ಟೆ ಚೇಂಜ್ ಆಗ್ತಿದ್ದಾರೆ ದುನಿಯಾ ಸೂರಿ

By: ಜೀವನರಸಿಕ
Subscribe to Filmibeat Kannada

ದುನಿಯಾ ಸೂರಿ ಅಂದುಕೊಂಡಿದ್ದು 2010ರ ನಂತರ ಆಗ್ಲೇ ಇಲ್ಲ. 'ಜಾಕಿ' ಗೆದ್ದಿದ್ದುಬಿಟ್ರೆ ಆಮೇಲೆ ಸೂರಿ ಸಿನಿಮಾಗಳು ನಿರೀಕ್ಷೆಯನ್ನ ಮುಟ್ಟುವಲ್ಲಿ ಸೋತಿವೆ. ಸುಮ್ ಸುಮ್ನೆ ಸಿನಿಮಾ ಮಾಡೋಕೆ ಸೂರಿಗೂ ಇಷ್ಟವಿಲ್ಲ. ಆದರೆ ಗೆಲ್ಲೋ ಸಿನಿಮಾಗಳು ಬರ್ತಿಲ್ಲ. ಸೋ ಸೂರಿ ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗಿದ್ದಾರೆ.

ಸೂರಿ ಚೇಂಜ್ ಆಗ್ತಿರೋದಕ್ಕೆ ಈಗ ಅವರು ಸಿನಿಮಾಗೆ ಪ್ಲಾನಿಂಗ್ ಮಾಡ್ತಿರೋದೇ ಉದಾಹರಣೆ. 'ಅಣ್ಣಾಬಾಂಡ್' ನಂತರ ಸೂರಿ 'ಕಂಟ್ರಿ ಪಿಸ್ತೂಲ್' ಅನ್ನೋ ಸಿನಿಮಾಗೆ ಪ್ಲಾನ್ ಮಾಡಿದ್ರು. ಅವರು ಅಂದುಕೊಂಡಂತೆ ಪ್ರೊಡ್ಯೂಸರ್ಗಳೂ ಸಿಕ್ಕಿದರು. ಆದರೆ ಸಿನಿಮಾ ಟೈಟಲ್ ಡಿಸೈನ್ ಮಾಡ್ತಾನೇ ಸ್ಟಾಪ್ ಆಯ್ತು. [ಪುನೀತ್ ರಾಜ್ ಕುಮಾರ್ ಈಗ 'ದೊಡ್ಡಮನೆ ಹುಡುಗ']

Duniya Soori

ಇದರ ನಂತರ 'ಕರೆನ್ಸಿ' ಅನ್ನೋ ಸಿನಿಮಾಗೆ ಪ್ಲಾನ್ ಮಾಡಿದರು. ಆದರೆ ಕರೆನ್ಸಿ ಇಲ್ಲದೆ ಸಿನಿಮಾ ನಿಂತು ಹೋಯ್ತಾ ಗೊತ್ತಿಲ್ಲ, ಆದರೆ ಕರೆನ್ಸಿಯನ್ನೂ ನಿಲ್ಲಿಸಿ ಈಗ 'ದೊಡ್ಮನೆ ಹುಡುಗ' ಅಂತಿದ್ದಾರೆ ಸೂರಿ. ಆದರೆ 'ದೊಡ್ಮನೆ ಹುಡುಗ' ಇದಕ್ಕೆ ಒಪ್ತಾರಾ ಗೊತ್ತಿಲ್ಲ. ಒಪ್ಪಿದರೂ ಒಪ್ಪಬಹುದು ಆದ್ರೆ ಅದು 2015ಕ್ಕೇನೇ...

ಸಿನಿಮಾದ ಹೆಚ್ಚಿನ ಭಾಗವನ್ನ ಬೆಂಗಳೂರಲ್ಲೇ ಶೂಟ್ ಮಾಡೋ ಸೂರಿ ಬಾಂಡ್ ಲೊಕೇಷನ್ ಗಂತೂ ತುಂಬಾ ಹುಡುಕಾಡಲ್ಲ. ಆದರೆ ಕಥೆ ಬಗ್ಗೆ ಮಾತ್ರ ಬೇಜಾನ್ ತಲೆಕೆಡಿಸ್ಕೋತಾರಂತೆ. ಅದೆಲ್ಲಾ ಓಕೆ ಎರಡು ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಹೆಂಗೆ ಸ್ವಾಮಿ ಅಂತಿದ್ದಾರೆ ಪ್ರೇಕ್ಷಕರು.

English summary
Kannada's hardcore commercial films director Duniy Soori changed with the times. But this time he is expected to come up with a family entertainer. Puneeth Rajkumar is once again going to work with director Duniya Soori in 'Dodmane Hudga'.
Please Wait while comments are loading...