For Quick Alerts
  ALLOW NOTIFICATIONS  
  For Daily Alerts

  ಪ್ರೇಮ್‌-ಧ್ರುವ ಸರ್ಜಾ ಚಿತ್ರದ ಟೈಟಲ್‌ ಟೀಸರ್‌ ರಿಲೀಸ್‌ಗೆ ಬಾಲಿವುಡ್‌ ಸ್ಟಾರ್‌..!

  |

  'ಪೊಗರು' ಬಳಿಕ ಎ.ಪಿ ಅರ್ಜುನ್‌ ನಿರ್ದೇಶನದ 'ಮಾರ್ಟಿನ್‌' ಚಿತ್ರಕ್ಕೆ ಓಕೆ ಎಂದಿದ್ದ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಇದೀಗ ಜೋಗಿ ಪ್ರೇಮ್‌ ಅವರ ಜೊತೆ ಹೊಸ ಸಿನಿಮಾದ ಪಯಣ ಆರಂಭಿಸಿದ್ದಾರೆ. ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್‌ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರ ಟೈಟಲ್‌ ಟೀಸರ್‌ ರಿಲೀಸ್‌ಗಾಗಿ ಚಿತ್ರತಂಡ ಸಿದ್ಧತೆ ಆರಂಭಿಸಿದೆ.

  ಅಕ್ಟೋಬರ್‌ 20ರಂದು ಬೆಂಗಳೂರಿನ ಒರಾಯಿನ್‌ ಮಾಲ್‌ನಲ್ಲಿ ಧ್ರುವ ಹಾಗೂ ಜೋಗಿ ಪ್ರೇಮ್‌ ಅವರ ಮುಂದಿನ ಚಿತ್ರದ ಟೈಟಲ್‌ ಟೀಸರ್‌ ವಿಶೇಷ ಕಾರ್ಯಕ್ರಮ ನಡೆಯಲಿದೆ. ಹೊಸ ಚಿತ್ರದ ಟೈಟಲ್‌ ಟೀಸರ್‌ ರಿಲೀಸ್‌ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಚಿತ್ರತಂಡ ಮುಂದಾಗಿದ್ದು, ಭಾರತೀಯ ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.

  ಪ್ರಮೋಷನ್ ಕಿಂಗ್ ಪ್ರೇಮ್ ಈಸ್ ಬ್ಯಾಕ್: ಧ್ರುವ ಸರ್ಜಾ ಸಿನಿಮಾ ಟೈಟಲ್ ಲಾಂಚ್‌ಗೆ ಹೇಗಿದೆ ಗೊತ್ತಾ ಪ್ಲ್ಯಾನ್?ಪ್ರಮೋಷನ್ ಕಿಂಗ್ ಪ್ರೇಮ್ ಈಸ್ ಬ್ಯಾಕ್: ಧ್ರುವ ಸರ್ಜಾ ಸಿನಿಮಾ ಟೈಟಲ್ ಲಾಂಚ್‌ಗೆ ಹೇಗಿದೆ ಗೊತ್ತಾ ಪ್ಲ್ಯಾನ್?

  ಈ ಹಿಂದೆ ಪ್ರೇಮ್‌ ಮುಂದಿನ ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆ ಮಾಡಲು ಮಲಯಾಳಂನ ಖ್ಯಾತ ನಟ ಮೋಹನ್‌ ಲಾಲ್‌ ಆಗಮಿಸುವ ಕುರಿತು ವಿಷಯ ಹಂಚಿಕೊಂಡಿದ್ದರು. ಮೋಹನ್‌ ಲಾಲ್‌ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದ ನಿರ್ದೇಶಕ ಜೋಗಿ ಪ್ರೇಮ್‌, ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್‌ ಮೋಹನ್ ಲಾಲ್‌ ಅವರು ಎಷ್ಟು ಸರಳ ನಡೆತೆಯ ವ್ಯಕ್ತಿ. ಅವರ ಭೇಟಿ ನಂತರ ನನಗಾದ ಭಾವನೆಗಳನ್ನು ಹಂಚಿಕೊಳ್ಳಲು ಪದಗಳೇ ಸಿಗುತ್ತಿಲ್ಲ ಎಂದು ಬರೆದು, ಟೈಟಲ್‌ ಟೀಸರ್‌ ಬಿಡುಗಡೆ ಕಾರ್ಯಕ್ರಮದ ವಿವರಣೆ ಬರೆದಿದ್ದರು.

  ಇದೀಗ ನಿರ್ದೇಶಕ ಪ್ರೇಮ್‌ ಮತ್ತೊಂದು ಬಿಗ್ ಸಪ್ರೈಸಿಂಗ್‌ ಸುದ್ದಿಯನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ ನಿರ್ದೇಶಕ ಪ್ರೇಮ್‌ ಇಂದು(ಅಕ್ಟೋಬರ್ 10) ಬಾಲಿವುಡ್‌ ನಟ ಸಂಜಯ್‌ ದತ್‌ ಅವರನ್ನು ಭೇಟಿಯಾಗಿದ್ದಾರೆ. ಸಂಜಯ್‌ ದತ್‌ ಅವರ ಜೊತೆಗಿ ಫೋಟೋಗಳನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರೇಮ್‌, ಇದು ಅತ್ಯಂತ ಖುಷಿಯ ಮತ್ತು ಸಂತೋಷದ ಕ್ಷಣ. ಎವೆರ್‌ ಪವರ್‌ಫುಲ್‌ ನಟ ಸಂಜಯ್‌ ದತ್‌ ಅವರನ್ನು ಭೇಟಿಯಾಗಿದ್ದೇನೆ ಎಂದು ಬರೆದು #KVN ಟೈಟಲ್‌ ಟೀಸರ್‌ ಬಿಡುಗಡೆ ಕಾರ್ಯಕ್ರಮದ ವಿವರಣೆ ಬರೆದುಕೊಂಡಿದ್ದಾರೆ.ನಿರ್ದೇಶಕ ಪ್ರೇಮ್‌ ನೀಡಿರುವ ಸುಳಿವಿನ ಪ್ರಕಾರ ಬಾಲಿವುಡ್‌ ನಟ ಸಂಜಯ್‌ ದತ್‌ ಕೂಡ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್‌ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರ ಟೈಟಲ್‌ ಟೀಸರ್‌ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

  ಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದಲ್ಲಿ ಮೋಹನ್ ಲಾಲ್? ಕುತೂಹಲ ಕೆರಳಿಸಿದ ಫೋಟೊಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದಲ್ಲಿ ಮೋಹನ್ ಲಾಲ್? ಕುತೂಹಲ ಕೆರಳಿಸಿದ ಫೋಟೊ

  'ಏಕ್‌ ಲವ್‌ ಯಾ' ಚಿತ್ರದ ಬಳಿಕ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಲು ಹೊರಟಿರುವ ನಿರ್ದೇಶಕ ಪ್ರೇಮ್‌ ಚಿತ್ರದ ಟೈಟಲ್‌ ಬಗ್ಗೆ ಈಗಾಗಲೇ ಹಲವು ಚರ್ಚೆಗಳು ನಡೆಯುತ್ತಿದೆ. ಟೈಟಲ್‌ ಟೀಸರ್‌ ಕಾರ್ಯಕ್ರಮದ ದಿನಾಂಕ ಸಮೀಪಿಸುತ್ತಿದ್ದಂತೆ ಎಲ್ಲರ ಕುತೂಹಲದ ಹೆಚ್ಚಿಸಲು ಪ್ರೇಮ್‌ ಚಿತ್ರದ ಟೈಟಲ್‌ಗೆ ಸುಳಿವು ನೀಡುವಂತೆ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದರು. ಒಂದು ಸಿಂಹಾಸನದ ಮೇಲೆ ಚಪ್ಪಲಿ ಹಾಗೂ ಪಕ್ಕದಲ್ಲಿ ಲಾಂಗ್‌ ಇಟ್ಟಿರುವ ಖಡಕ್‌ ಪೋಸ್ಟರ್‌ ರಿಲೀಸ್‌ ಆಗಿದ್ದು, ಇದು ರೌಡಿಸಂ ಚಿತ್ರ ಇರಬಹುದು ಎನ್ನುವುದು ನೋಡುಗರ ಅಭಿಪ್ರಾಯವಾಗಿದೆ. ಈ ಚಿತ್ರದ ಬಗ್ಗೆ ದಿನೇ ದಿನೇ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗುತ್ತಿದ್ದು, ಹೊಸ ಚಿತ್ರದ ಶೀರ್ಷಿಕೆ ತಿಳಿಯಲು ಧ್ರುವ ಸರ್ಜಾ ಅಭಿಮಾನಿಗಳು ಕಾತುರರಾಗಿದ್ದಾರೆ.

  ಅಧಿಕೃತ ಘೋಷಣೆಗೂ ಮೊದ್ಲೆ ಧ್ರುವ- ಪ್ರೇಮ್ ಸಿನಿಮಾ ಟೈಟಲ್ ಲೀಕ್? ಅಯ್ಯೋ ಇದು ಹಳೇ ಟೈಟಲ್ ಎಂದ ನೆಟ್ಟಿಗರು!ಅಧಿಕೃತ ಘೋಷಣೆಗೂ ಮೊದ್ಲೆ ಧ್ರುವ- ಪ್ರೇಮ್ ಸಿನಿಮಾ ಟೈಟಲ್ ಲೀಕ್? ಅಯ್ಯೋ ಇದು ಹಳೇ ಟೈಟಲ್ ಎಂದ ನೆಟ್ಟಿಗರು!

  English summary
  Sandalwood director Prem met bollywood actor Sanjay Dutt.
  Monday, October 10, 2022, 19:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X