For Quick Alerts
  ALLOW NOTIFICATIONS  
  For Daily Alerts

  ಆರ್ ಜಿ ವಿ ಚಿತ್ರದಲ್ಲಿ ಕೆಲಸ ಮಾಡಿದ್ದ ನಿರ್ದೇಶಕರಿಂದ ಎರಡು ಹೊಸ ಚಿತ್ರಗಳ ಘೋಷಣೆ

  |

  'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಲ್ಲಿ ರಾಮ್ ಗೋಪಾಲ್ ವರ್ಮರೊಂದಿಗೆ ಸಹ ನಿರ್ದೇಶಕರಾಗಿ ಮನೋಹರ್ ಕಂಪಳ್ಳಿ ಕೆಲಸ ಮಾಡಿದ್ದರು. ಈಗ ತಮ್ಮ ಸ್ವಂತ ನಿರ್ದೇಶನದ ಎರಡು ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ.

  'Wife of ಡಾನ್' ಹಾಗೂ 'ಮ್ಯಾಟನಿ' ಮನೋಹರ್ ಕಾಂಪಲ್ಲಿ ನಿರ್ದೇಶನದ ಹೊಸ ಸಿನಿಮಾಗಳಾಗಿವೆ. ಈ ಎರಡೂ ಚಿತ್ರಗಳನ್ನು F3 ಪ್ರೊಡಕ್ಷನ್ಸ್ ನಲ್ಲಿ ಪಾರ್ವತಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಎರಡು ಚಿತ್ರಗಳ ಪೋಸ್ಟರ್ ಗಳು ಬಿಡುಗಡೆಯಾಗಿದೆ. ಸಿನಿಮಾದ ಚಿತ್ರೀಕರಣ ಮಾರ್ಚ್ ನಿಂದ ಪ್ರಾರಂಭವಾಗಲಿದೆ.

  'ರೋಜಾ ಅಂದವನ್ನು ಬಾಲಕೃಷ್ಣ ಹಾಳು ಮಾಡ್ತಿದ್ದಾರೆ': ವರ್ಮ ವಿರುದ್ಧ ಫ್ಯಾನ್ಸ್ ಆಕ್ರೋಶ

  ಸುಕೃತ್ ಹಾಗೂ ಬಾಲಸುಬ್ರಹ್ಮಣ್ಯ ದೇವರಕೊಂಡ ವಿ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. 'ಶ್ರೀನಿವಾಸ ಕಲ್ಯಾಣ', 'ವೈರಲ್' ಇತ್ಯಾದಿ ಚಿತ್ರಗಳಿಗೆ ಈ ಹಿಂದೆ ಸುಕೃತ್ ಡೈಲಾಗ್ಸ್ ಬರೆದಿದ್ದರು. 'ಹಗ್ಗದ ಕೊನೆ', 'ಆಕ್ಟರ್' ಚಿತ್ರಗಳಿಗೆ ಬಾಲಸುಬ್ರಹ್ಮಣ್ಯ ಸಂಭಾಷಣೆ ಒದಗಿಸಿದ್ದರು. 'ದೇವಕಿ' ಸಿನಿಮಾದಲ್ಲಿ ಈ ಇಬ್ಬರು ಬರಹಗಾರರು ಕೆಲಸ ಮಾಡಿದ್ದರು.

  ಚಿತ್ರದ ಕಲಾವಿದರ ಆಯ್ಕೆ ಇನ್ನು ನಡೆಯುತ್ತಿದ್ದು ಐದು ಮುಖ್ಯ ಪಾತ್ರಗಳು ಸಿನಿಮಾದಲ್ಲಿ ಇರಲಿದೆಯಂತೆ. ವರ್ಮ ಜೊತೆಗೆ 'ಬ್ರೂಸ್ಲಿ' ಚಿತ್ರ ಮಾಡಿದ್ದ ಸಿನಿಮಾಟೋಗ್ರಾಫರ್ ಕ್ರಾಂತಿ ಈ ಚಿತ್ರತಂಡದಲ್ಲಿ ಇದ್ದಾರೆ. ನಾಗಾರ್ಜುನ ತಲ್ಲಪಲ್ಲಿ ಸೌಂಡ್ ಡಿಸೈನ್ ಮಾಡಲಿದ್ದಾರೆ.

  ತಂದೆ ಸತ್ತಾಗ ಅಳಲಿಲ್ಲ: ತಮನ್ ಬದುಕಿನ ಕಣ್ಣೀರ ಕಥೆ

  ಆರ್ ಜಿ ವಿ ಸಿನಿಮಾಗಳಾದ 'ದಿ ಅಟ್ಯಾಕ್', 'ಕಿಲ್ಲಿಂಗ್ ವೀರಪ್ಪನ್' ಹಾಗೂ ಶಿವರಾಜ್ ಕುಮಾರ್ ಅವರ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವದಿಂದ ಮನೋಹರ್ ಕಂಪಳ್ಳಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾದ ಪೋಸ್ಟರ್ ಗಳ ಡಿಸೈನ್ ನಲ್ಲಿ ಹೊಸತನ ಕಾಣುತ್ತಿದ್ದು, ಗಮನ ಸೆಳೆದಿದೆ.

  English summary
  Director Manohar Kaampalli announced 2 movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X