Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ದರ್ಶನ್, ನಾನು ಒಂದಾದರೆ ಒಂದೊಳ್ಳೆ ಸಿನಿಮಾ ಕೊಟ್ಟೇ ಕೊಡ್ತೀವಿ: ಓಂ ಪ್ರಕಾಶ್ ರಾವ್ ಯಾರು ಅಂತ ಒಮ್ಮೆ ನೆನಪಿಸಿಕೊಳ್ಳಿ ಸಾಕು"
ಸ್ಯಾಂಡಲ್‌ವುಡ್‌ನ ನೇರ ನುಡಿಯ ನಿರ್ದೇಶಕ ಓಂ ಪ್ರಕಾಶ್ ರಾವ್. ಎದುರಿಗೆ ಅದೆಷ್ಟೇ ದೊಡ್ಡ ನಟ ಇದ್ದರೂ ತನ್ನದೇ ಶೈಲಿಯಲ್ಲಿ ಅರ್ಥ ಮಾಡಿಸೋ ನಿರ್ದೇಶಕ. ಈಗಾಗಲೇ ಸಾಕಷ್ಟು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ಓಂ ಪ್ರಕಾಶ್ ರಾವ್ ನೆಚ್ಚಿನ ನಟ ದರ್ಶನ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಓಂ ಪ್ರಕಾಶ್ ರಾವ್ ಈಗಾಗಲೇ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಲಾಸಿಪಾಳ್ಯದಿಂದ ಹಿಡಿದು ಸುಮಾರು 6 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಶೇ.80ರಷ್ಟು ಸಿನಿಮಾಗಳು ಯಶಸ್ಸು ಕಂಡಿವೆ. ಒಂದು ಕಾಲದ ಹಿಟ್ ಜೋಡಿಯಾಗಿತ್ತು. ಈಗ ಒಬ್ಬರೂ ಒಟ್ಟಿಗೆ ಕೆಲಸ ಮಾಡಿ ಹಲವು ದಿನಗಳಾಗಿವೆ.
ಮೂರು
ನಾಯಕರು
ಬೇಡವೆಂದಿದ್ದ
'ಹುಚ್ಚ'
ಸಿನಿಮಾ
ಸುದೀಪ್
ಜೀವನ
ಬದಲಾಯಿಸಿತು!
ಸದ್ಯ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ಈ ಬೆನ್ನಲ್ಲೇ ದರ್ಶನ್ ಅವರ ಬಗ್ಗೆ ಹಿರಿಯ ಪತ್ರಕರ್ತ ಬಿ ಗಣಪತಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಓಂ ಪ್ರಕಾಶ್ ರಾವ್ ಅವರನ್ನು ಮಾತಾಡಿಸಿದ್ದಾರೆ. ಈ ವೇಳೆ ದರ್ಶನ್ ಅವರೊಂದಿಗಿನ ಒಡನಾಟ, ಸಿನಿಮಾ ಇವೆಲ್ಲದರ ಬಗ್ಗೆನೂ ಮಾತಾಡಿದ್ದಾರೆ. ಅವರ ಮಾತಿನ ಝಲಕ್ ಇಲ್ಲಿದೆ.

'ಕನ್ನಡಿಗರ ಮೇಲೆ ಅಭಿಮಾನ ಇರೋ ಏಕೈಕ ನಟ'
" ನನ್ನ ಸಿನಿಮಾಗೆ ಕನ್ನಡಿಗರೇ ಇರಬೇಕು. ಅವರನ್ನು ನಾನು ಬೆಳಸದೆ, ಇನ್ಯಾರು ಪಕ್ಕದ ಮನೆಯವರು ಬೆಳೆಸುತ್ತಾರಾ? ಅನ್ನೋ ಮನೋಭಾವನೆ ಇರುವ ಏಕೈಕ ನಟ ದರ್ಶನ್. ಕನ್ನಡದ ಡೈರೆಕ್ಟರ್ ಬೇಡ ಅಂದಾಗ ಸಿನಿಮಾವನ್ನೇ ಬಿಟ್ಟುಬಿಟ್ಟಿದ್ದಾರೆ. ನೀವು ಬೇಡ ಬಿಡಿ. ನಾನು ಬೇರೆ ಡೈರೆಕ್ಟರ್ ಒಂದಿಗೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ನನ್ನ ಎದುರಿಗೆ ನಡೆದಿದೆ. ಕನ್ನಡಿಗರ ಮೇಲಿನ ಪ್ರೀತಿಯನ್ನು ಬೇರೆ ಯಾವುದೇ ನಟರಲ್ಲೂ ನೋಡಿಲ್ಲ. ಕನ್ನಡ ಬೆಳಿಯಬೇಕು. ಕನ್ನಡಿಗರು ಬೆಳಿಬೇಕು ಅನ್ನೋ ಆಸೆಯಿದೆ." ಎಂದು ಓಂ ಪ್ರಕಾಶ್ ರಾವ್ ಯೂಟ್ಯೂಟ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

'ದರ್ಶನ್ ಕಥೆ ಕೇಳದೆ ಸಿನಿಮಾ ಮಾಡಿದ್ದಾರೆ'
"ದರ್ಶನ್ ಅವರೊಂದಿಗೆ ಆರು ಸಿನಿಮಾ ಮಾಡಿದ್ದೀನಿ. ಆರೂ ಸಿನಿಮಾದ ಕಥೆನೂ ಅವರಿಗೆ ಗೊತ್ತಿಲ್ಲ. ನನ್ನ ಬಗ್ಗೆ ತುಂಬಾ ಒಳ್ಳೆಯನ್ನು ನಿರ್ಮಾಪಕರುಗಳಿಗೆ ಹೇಳಿದ್ದಾರೆ. ನಾಯಕ ನಟರು ನನ್ನ ಬಳಿ ಕಥೆ ಕೇಳಿಲ್ಲ ಅಂದರೆ, ಅವರು ನನ್ನ ನಿರ್ದೇಶನಕ್ಕೆ ಅವರು ಕೊಡುವ ಬೆಲೆ. ನನ್ನ ಮೇಲಿರುವ ಅಪಾರವಾದ ನಂಬಿಕೆ. ಅದಕ್ಕೆ ಶೇ. 100ರಷ್ಟು ನ್ಯಾಯವದಗಿಸುತ್ತೇನೆ. ತಪ್ಪಾದರ ತಿದ್ದಿ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಪ್ರತಿಯೊಬ್ಬರಿಗೂ ಕೆಲಸಕ್ಕೆ ಬೆಲೆ ಕೊಡಿ. ಕೆಲಸದ ಮುಂದೆ ಯಾರೂ ದೊಡ್ಡವರಲ್ಲ. " ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.

'ಓಂ ಪ್ರಕಾಶ್ ರಾವ್ ಯಾರು ಅಂತ ನೆನಪಿಸಿಕೊಳ್ಳಿ ಸಾಕು'
" ದರ್ಶನ್‌ಗೆ ನಾನು ಹೇಳುವುದು ಅದೇನೆ. ನಾನು ಯಾಕೆ ನಿಮ್ಮ ಬಗ್ಗೆ ಇಷ್ಟು ಮಾತಾಡುತ್ತಿದ್ದೇನೆ. ನಾನು ನಿಮ್ಮ ಮೇಲೆ ಅಷ್ಟು ಅಭಿಮಾನ ಇಟ್ಟಿದ್ದೇನೆ. ಕೊನೆಯ ಬಾರಿನೂ ಮಾತಾಡಿದ್ದೀನಿ. ಈಗಲೂ ಮಾತಾಡುತ್ತಿದ್ದೇನೆ. ಮುಂದೆನೂ ಈ ಬಗ್ಗೆ ಮಾತಾಡುತ್ತಿದ್ದೇನೆ. ನಿಮ್ಮ ಸಿನಿಮಾ ಮಾಡದೆ ಇದ್ದರೂ ಮಾತಾಡುತ್ತೇನೆ. ದರ್ಶನ್ ಅವರ ಬಗ್ಗೆ ಮಾತಾಡೋದು ನಮ್ಮ ಕರ್ತವ್ಯ. ಅದನ್ನೂ ಅವರೂ ಇಟ್ಟುಕೊಳ್ಳಬೇಕು. ಓಂ ಪ್ರಕಾಶ್ ರಾವ್ ಯಾರು ಅಂತ ಒಮ್ಮೆ ನೆನಪಿಸಿಕೊಳ್ಳಿ ಸಾಕು. ನಾನು ಬೇರೆ ಏನೂ ಹೇಳುವುದಿಲ್ಲ. ನಾವಿಬ್ಬರೂ ಒಂದಾದರೆ ಒಂದೊಳ್ಳೆ ಸಿನಿಮಾ ಕೊಟ್ಟೇ ಕೊಡುತ್ತೇವೆ. ಅದು ನಮ್ಮಿಬ್ಬರಲ್ಲೂ ಬರಬೇಕು. ನನ್ನ ಒಬ್ಬನಲ್ಲಿ ಇದ್ದರೆ ಅದು ಸಾಧ್ಯವಿಲ್ಲ." ಎನ್ನುತ್ತಾರೆ ಓಂ ಪ್ರಕಾಶ್ ರಾವ್.

'ಯಾವ ಹೀರೊನೂ ಕಥೆ ಕೇಳಬಾರದು'
"ಉಪ್ಪಿ ಸರ್ ಒಂದೇ ಮಾತು ಹೇಳಿದ್ರು. ಎಲ್ಲಿ ಇದ್ರಿ ಡೈರೆಕ್ಟರ್ ಇಷ್ಟು ದಿನ ನೀವು ಅಂತ ಕೇಳಿದ್ರು. ಅಲ್ಲೇ ಇದ್ದೆ ಕಣ್ಣೆದುರಿಗೆ ಇದ್ದು ಕ್ಯಾಕರಿಸಿ ಉಗಿದರು. ಉಪ್ಪಿ ಸರ್ ಒಂದೇ ಮಾತು ಹೇಳಿದ್ರು. ಡೈರೆಕ್ಟ್ರೇ ನಿಮ್ಮ ಜೊತೆ ಸಿನಿಮಾ ಮಾಡಿದ್ರೆ, ಯಾವ ಹೀರೊನೂ ಕಥೆ ಕೇಳಬಾರದು. ನಾನು ನಿಮ್ಮೊಂದಿಗೆ ಸಿನಿಮಾ ಮಾಡುವಾಗ ಕಥೆ ಕೇಳಲ್ಲ ಅಂತ ಅಂದ್ರು. ಅಷ್ಟು ಕೆಲಸಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ." ಎಂದು ಕಥೆ ಕೇಳುವ ನಾಯಕ ನಟರಿಗೆ ಓಂ ಪ್ರಕಾಶ್ ರಾವ್ ಟಾಂಗ್ ಕೊಟ್ಟಿದ್ದಾರೆ.