»   » ಶಿವಣ್ಣನ ಜೊತೆ ಚಿತ್ರ ಮಾಡೋಕೆ ಏಳು ಗಂಡೆದೆ ಬೇಕು

ಶಿವಣ್ಣನ ಜೊತೆ ಚಿತ್ರ ಮಾಡೋಕೆ ಏಳು ಗಂಡೆದೆ ಬೇಕು

Posted By:
Subscribe to Filmibeat Kannada
Shivraj Kumar in movie Shiva
ಶಿವರಾಜ್ ಕುಮಾರ್ ಅವರ 101ನೇ ಚಿತ್ರವನ್ನು ವಿಶಿಷ್ಟವಾಗಿ ತೆರೆಗೆ ತರಬೇಕೆನ್ನುವುದು ನನ್ನ ಕನಸು. ಡಾ. ರಾಜಕುಮಾರ್ ಅವರ ಚಿತ್ರ ನೋಡಿ ಬೆಳೆದವರು ನಾವು, ಅವರ ಚಿತ್ರ ನಿರ್ದೇಶಿಸುವ ಯೋಗವಂತೂ ಇಲ್ಲ. ಶಿವಣ್ಣನ ಜೊತೆ ಚಿತ್ರ ಮಾಡೋಕೆ ಒಂದು ದಿಲ್ ಇದ್ರೆ ಸಾಲಲ್ಲ, ಏಳು ಗಂಡೆದೆ ಇದ್ದರೂ ಕಮ್ಮಿ ಎಂದಿದ್ದಾರೆ ಮಾಸ್ ಡೈರೆಕ್ಟರ್ ಓಂ ಪ್ರಕಾಶ್ ರಾವ್.

'ಶಿವ' ಚಿತ್ರ ಪ್ರೀತಿಯ ಸಣ್ಣ ಎಳೆಯಲ್ಲಿ ಸಾಗುವ ಕಮರ್ಷಿಯಲ್ ಚಿತ್ರ. ತಾಂತ್ರಿಕವಾಗಿ ಚಿತ್ರ ತುಂಬಾ ಶ್ರೀಮಂತವಾಗಿದೆ. ನಿಮಗೆ ಎಲ್ಲೂ ಬೋರ್ ಹೊಡೆಸದೇ ಮನೆಮಂದಿಯೆಲ್ಲಾ ಕೂತು ನೋಡಬಹುದಾದ ಚಿತ್ರವಿದು ಎಂದು ನಿರ್ದೇಶಕ ಓಂ ಪ್ರಕಾಶ್ ರಾವ್ ಹೇಳಿದ್ದಾರೆ.

ಶಿವಣ್ಣ ಅವರಿಗೆ ಕೋಟ್ಯಾಂತರ ಮಂದಿ ಅಭಿಮಾನಿಗಳಿದ್ದಾರೆ. ನಾನು ಕೂಡಾ ಅವರ ಅಭಿಮಾನಿಗಳಲ್ಲಿ ಒಬ್ಬ. ಶಿವಣ್ಣ ಅವರನ್ನು ತೆರೆಗೆ ವಿಶಿಷ್ಟವಾಗಿ ನೋಡಲು ಅಭಿಮಾನಿಗಳು ಬಯಸುತ್ತಾರೆ. ಹಾಗಾಗಿ ಶಿವಣ್ಣನನ್ನು ಬೇರೆ ಬೇರೆ ಗೆಟ್ ಅಪ್ ನಲ್ಲಿ ತೆರೆ ಮೇಲೆ ತಂದಿದ್ದೇವೆ.

ನಾನು ಕನ್ನಡದ ಬಹಳಷ್ಟು ನಟರಿಗೆ, ತಾಂತ್ರಿಕ ವರ್ಗದವರಿಗೆ ಶಿವಣ್ಣ ಅವರನ್ನು ನೋಡಿ ಕಲಿಯಿರಿ ಎಂದು ಹೇಳುತ್ತಿರುತ್ತೇನೆ. ಯಾಕೆಂದರೆ ಅವರ ಸರಳತೆ, ಪಾತ್ರಕ್ಕೆ ಹೊಂದಿಕೊಳ್ಳುವ ರೀತಿ, ಸಮಯಕ್ಕೆ ಸರಿಯಾಗಿ ಚಿತ್ರೀಕರಣಕ್ಕೆ ಬರುವುದು ಇತ್ಯಾದಿಗಳನ್ನು ಅವರಿಂದ ಕಲಿಯಬೇಕಿದೆ ಎಂದು ನಿರ್ದೇಶಕ ಓಂ ಶಿವಣ್ಣ ಅವರನ್ನು ಹೊಗಳಿದ್ದಾರೆ.

ಕ್ಲೈಮ್ಯಾಕ್ಸ್ ನಲ್ಲಿ ಬೃಹತ್ ಶಿವನ ಮೂರ್ತಿಯನ್ನು ಇಟ್ಟು ಶೂಟಿಂಗ್ ಮಾಡಿದ್ದೇವೆ. ಇದೊಂದು ಒಳ್ಳೆ ಅನುಭವ, ಈ ಮೂರ್ತಿಯನ್ನು ಕೆ ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದ ಮುಂದೆ ಭಾನುವಾರ (ಆ 18) ಇಡುತ್ತೇವೆ.

ಶಿವ ಚಿತ್ರ ಬಾಲಿವುಡ್ ಸ್ಟ್ಯಾಂಡರ್ಡ್ ನಲ್ಲಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಚಿತ್ರದ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. 50 ವರ್ಷವಾದರೂ ಶಿವಣ್ಣ ಯಂಗ್ & ಎನರ್ಜಟಿಕ್ ಆಗಿದ್ದಾರೆ. ಸಕತ್ ಸ್ಟೆಪ್ ಹಾಕಿದ್ದಾರೆ, ರಾಗಿಣಿ ಅವರನ್ನು ಗ್ಲಾಮರಸ್ ಆಗಿ ತೋರಿಸಿದ್ದೇನೆ ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.

ಎಕೆ 47, ಸಿಂಹದಮರಿ ಚಿತ್ರದ ನಂತರ ಶಿವರಾಜ್ ಕುಮಾರ್ ನಾಯಕನಟನಾಗಿ, ಓಂ ಪ್ರಕಾಶ್ ರಾವ್ ನಿರ್ದೇಶನದ ಶಿವ, ultimate rider ಚಿತ್ರ 2012ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.

ಕೆ ಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತ, ಸತ್ಯ ಹೆಗಡೆ ಕ್ಯಾಮೆರಾ, ದೀಪು ಅವರ ಎಡಿಟಿಂಗ್ ಕೆಲಸವಿದೆ. ರಾಗಿಣಿ ದ್ವಿವೇದಿ, ರವಿಶಂಕರ್, ರಂಗಾಯಣ ರಘು ಪ್ರಮುಖ ತಾರಾಗಣದಲ್ಲಿದ್ದಾರೆ. ಪಳನಿರಾಜ್ ಅವರ ಸಾಹಸ, ಇಮ್ರಾನ್ ಸರ್ದಾರಿಯಾ, ಹರ್ಷ ಅವರ ಕೊರಿಯಾಗ್ರಫಿ ಚಿತ್ರಕ್ಕಿದೆ.

ಶಿವ ಚಿತ್ರತಂಡ ಖಾಸಾಗಿ ವಾಹಿನಿಗೆ ನೀಡಿದ ಸಂದರ್ಭದಲ್ಲಿ ಮಾತನಾಡುತ್ತಾ, ಓಂ ಪ್ರಕಾಶ್ ಚಿತ್ರ ಶ್ರೀಮಂತವಾಗಿ ತೆರೆಗೆ ಬರಲು ಕೋಟಿ ಕೋಟಿ ಸುರಿದ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳುತ್ತೇನೆ. ಒಳ್ಳೆ ಕನ್ನಡ ಚಿತ್ರವನ್ನು ಕನ್ನಡಿಗರು ಎಂದೂ ಕೈಬಿಟ್ಟಿಲ್ಲ. ಈ ಚಿತ್ರ ಖಂಡಿತ ಯಶಸ್ಸು ಗಳಿಸುತ್ತೆ ವಿಶ್ವಾಸ ನನಗಿದೆ ಎಂದಿದ್ದಾರೆ.

English summary
Mass director Om Prakash Rao is very confident on his upcoming and much awaited movie Shiva, ultimate rider. He said film is technically brilliant and in Bollywood standard.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada