For Quick Alerts
  ALLOW NOTIFICATIONS  
  For Daily Alerts

  ಟ್ರೋಲಿಗರಿಗೆ ಬೆದರಿ ಟ್ವಿಟ್ಟರ್‌ ಖಾತೆ ಡಿಲೀಟ್ ಮಾಡಿದರೇ ಪ್ರಶಾಂತ್ ನೀಲ್!

  By ಫಿಲ್ಮಿಬೀಟ್ ಡೆಸ್ಕ್
  |

  'ಕೆಜಿಎಫ್', 'ಕೆಜಿಎಫ್ 2' ಅಂತಹಾ ರಗಡ್, ಮಾಸ್ ಸಿನಿಮಾ ನಿರ್ದೇಶಿಸಿರುವ ಪ್ರಶಾಂತ್ ನೀಲ್ ಸ್ವಭಾವತಃ ಸೌಮ್ಯರು. ಅವರು ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡಾಗ ವೈರಲ್ ಆಗಿದ್ದ ಅವರ ಚಿತ್ರವೇ ಇದಕ್ಕೆ ಸಾಕ್ಷಿ.

  ತಾವಾಯಿತು ತಮ್ಮ ಕೆಲಸವಾಯಿತು ಎಂದಿರುವ ಪ್ರಶಾಂತ್ ನೀಲ್, ಸಾಮಾಜಿಕ ಜಾಲತಾಣವನ್ನು ತಮ್ಮ ಸಿನಿಮಾ ಪ್ರಚಾರಕ್ಕೆ ಮಾತ್ರವೇ ಬಳಸುತ್ತಾರೆ. ಅಪರೂಪಕ್ಕೆ ಆತ್ಮೀಯರಿಗೆ, ಗೆಳೆಯರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾರೆ.

  ಆದರೆ ಈಗ ಇದ್ದಕ್ಕಿದ್ದಂತೆ ಪ್ರಶಾಂತ್ ನೀಲ್‌ರ ಟ್ವಿಟ್ಟರ್ ಖಾತೆ ಡಿಲೀಟ್ ಆಗಿದೆ. ಸ್ವತಃ ಪ್ರಶಾಂತ್ ನೀಲ್ ಅವರೇ ತಮ್ಮ ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಪಷ್ಟತೆ ಇಲ್ಲವಾದರೂ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಟಾಕ್ಸಿಟಿಯಿಂದ ದೂರ ಇದ್ದು ಕೆಲಸದ ಮೇಲೆ ಹೆಚ್ಚು ಗಮನ ಹರಿಸಲು ಪ್ರಶಾಂತ್ ಹೀಗೆ ಮಾಡಿದ್ದಾರೆ ಎನ್ನಲಾಗುತ್ತದೆ.

  ಎರಡು ದಿನದ ಹಿಂದಷ್ಟೆ ಪ್ರಶಾಂತ್ ನೀಲ್, ತಮ್ಮ ಗೆಳೆಯ, ನಟ ಯಶ್‌ರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದರು. 'ಕೆಜಿಎಫ್' ಸಿನಿಮಾದ ಡೈಲಾಗ್ ಅನ್ನೇ ಬಳಸಿ, ಉರ್ದು ಡೈಲಾಗ್ ಬಳಸಿ ಯಶ್‌ಗೆ ಪ್ರಶಾಂತ್ ನೀಲ್ ವಿಶ್ ಮಾಡಿದ್ದರು. ಇದು ಕೆಲವು ಟ್ರೋಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು.

  ಪ್ರಶಾಂತ್ ನೀಲ್, ಯಶ್‌ಗೆ ಉರ್ದುವಿನಲ್ಲಿ ವಿಶ್ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೆಲವರು ಟ್ವಿಟ್ಟರ್‌ನಲ್ಲಿ ಪ್ರಶಾಂತ್ ನೀಲ್‌ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಕನ್ನಡ ಬಳಸುವಂತೆ ಹೇಳಿದ್ದರು. ಕೆಲವು ಟ್ವೀಟ್‌ಗಳು ಸಭ್ಯತೆಯ ಎಲ್ಲೆಯನ್ನೂ ಮೀರಿದ್ದವು.

  Director Prashant Neel Deactivated his Twitter Account

  ಇದೇ ಕಾರಣಕ್ಕೆ ಪ್ರಶಾಂತ್ ನೀಲ್, ಟ್ವಿಟ್ಟರ್‌ನಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 'ಕೆಜಿಎಫ್ 2' ಬಳಿಕ ಕನ್ನಡ ಚಿತ್ರರಂಗದಿಂದ ಪ್ರಶಾಂತ್ ದೂರಾಗಿದ್ದಾರೆ ಎಂಬ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಅಣಕಿಸುವುದು, ಟೀಕಿಸುವುದು ಮಾಡಲಾಗುತ್ತಿರುತ್ತದೆ, ಇದರೆಲ್ಲದರಿಂದ ಮುಕ್ತಿಗಾಗಿಯೇ ಪ್ರಶಾಂತ್ ಟ್ವಿಟ್ಟರ್ ಖಾತೆ ಡಿಲೀಟ್ ಮಾಡಿದ್ದಾರೆ ಎಂಬ ಮಾತಿದೆ.

  ಇನ್ನು ಪ್ರಶಾಂತ್ ನೀಲ್ ಪ್ರಸ್ತುತ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಕ್ಕೆ ಭಾರಿ ಬಂಡವಾಳವನ್ನು ಹೊಂಬಾಳೆ ಹೂಡಿದ್ದು, ಸಿನಿಮಾವು ಇದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ. 'ಸಲಾರ್' ಬಳಿಕ ಜೂ ಎನ್‌ಟಿಆರ್ ಜೊತೆಗೆ ಸಿನಿಮಾ ಒಂದನ್ನು ನೀಲ್ ಆರಂಭಿಸಲಿದ್ದಾರೆ. ಆ ಬಳಿಕ 'ಕೆಜಿಎಫ್ 3' ಪ್ರಾರಂಭ ಮಾಡುವ ನಿರೀಕ್ಷೆ ಇದೆ.

  English summary
  Director Prashant Neel deactivated his twitter account. Prashant Neel recently trolled brutally for wishing Yash in Urdu.
  Tuesday, January 10, 2023, 9:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X