For Quick Alerts
  ALLOW NOTIFICATIONS  
  For Daily Alerts

  ಮಲ್ಟಿಪ್ಲೆಕ್ಸ್ ಗಳಿಂದ 'ವಿಲನ್'ಗೆ ಮಹಾಮೋಸ: ಧಿಕ್ಕಾರ ಕೂಗಿದ ಪ್ರೇಮ್

  |
  TheVillain : ಮಲ್ಟಿಪ್ಲೆಕ್ಸ್‌ಗಳ ಮೇಲೆ ಗರಂ ಆದ ಪ್ರೇಮ್..! | FILMIBEAT KANNADA

  ಪ್ರೇಮ್ ನಿರ್ದೇಶನದ 'ದಿ ವಿಲನ್' ಸಿನಿಮಾ ಅಕ್ಟೋಬರ್ 18 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 11 ರಿಂದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದ್ದು, ಟಿಕೆಟ್ ಬೆಲೆ ದುಬಾರಿಯಾಗುವ ಸುಳಿವು ಸಿಕ್ಕಿದೆ.

  ಅದರಲ್ಲೂ ಮಲ್ಟಿಪ್ಲೆಕ್ಸ್ ಗಳಲ್ಲಂತೂ ವಿಲನ್ ಟಿಕೆಟ್ 1000 ರೂಪಾಯಿವರೆಗೂ ಮಾರಾಟವಾಗುವ ಸಾಧ್ಯತೆ ಇದೆ. ಇದರಿಂದ ನಿರಾಳರಾಗಿರುವ ನಿರ್ಮಾಪಕರು ಹಾಕಿದ ಬಂಡವಾಳದ ಜೊತೆಗೆ ದೊಡ್ಡ ಲಾಭವೇ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.

  'ವಿಲನ್' ಗೆ ಟ್ವಿಸ್ಟ್: ಶರತ್ ಲೋಹಿತಾಶ್ವ ರಾವಣ, ಕಥೆ ಹೀಗಿರಬಹುದು.?

  ಆದ್ರೀಗ, ಮಲ್ಟಿಪ್ಲೆಕ್ಸ್ ಮಾಡುತ್ತಿರುವ ಮಹಾಮೋಸದ ವಿರುದ್ಧ ನಿರ್ದೇಶಕ ಪ್ರೇಮ್ ಧಿಕ್ಕಾರ ಹಾಕುತ್ತಿದ್ದಾರೆ. ಕನ್ನಡ ಭಾಷೆಯ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ ಮಾಲೀಕರು ಅನ್ಯಾಯ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟಕ್ಕೂ, ಮಲ್ಟಿಪ್ಲೆಕ್ಸ್ ಗಳಿಂದ ಕನ್ನಡ ಸಿನಿಮಾ ನಿರ್ಮಾಪಕರಿಗೆ ಆಗುತ್ತಿರುವ ಮೋಸವೇನು.? ಪ್ರೇಮ್ ಹೇಳುತ್ತಿರುವುದೇನು.? ಮುಂದೆ ಓದಿ.....

  ನಿರ್ಮಾಪಕರಿಗೆ ಹೆಚ್ಚು ಶೇರ್ ಕೊಡಿ

  ನಿರ್ಮಾಪಕರಿಗೆ ಹೆಚ್ಚು ಶೇರ್ ಕೊಡಿ

  ಮಲ್ಟಿಪ್ಲೆಕ್ಸ್ ಗಳಿಂದ ನಿರ್ಮಾಪಕರಿಗೆ ಶೇಕಡ 50%ಗಿಂತ ಹೆಚ್ಚಿನ ಶೇರ್‌ ಕೊಡಬೇಕೆಂದು ನಿರ್ದೇಶಕ ಈ ಹಿಂದೆ ವಿನಂತಿಸಿದ್ದರು. ಇಲ್ಲವಾದಲ್ಲಿ ದೊಡ್ಡ ಚಿತ್ರ ಮಾಡಿರೋ ನಿರ್ಮಾಪಕರಿಗೆ ನಷ್ಟವಾಗುತ್ತೆ. ಇದನ್ನ ವಾಣಿಜ್ಯ ಮಂಡಳಿಯ ಗಮನಕ್ಕೂ ತಂದಿದ್ದ ಪ್ರೇಮ್ ಅವರಿಗೂ ಮನವಿ ಮಾಡಿದ್ದರು.

  ಆಮಿ ಜಾಕ್ಸನ್ ವರ್ತನೆಗೆ ಅಸಮಾಧಾನಗೊಂಡ ಪ್ರೇಮ್!

  ಮಲ್ಟಿಪ್ಲೆಕ್ಸ್ ಹೇಗೆ ದುಡ್ಡು ಮಾಡ್ತಿದೆ

  ಮಲ್ಟಿಪ್ಲೆಕ್ಸ್ ಹೇಗೆ ದುಡ್ಡು ಮಾಡ್ತಿದೆ

  ಸದ್ಯದ ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳ ನಿಯಮದಂತೆ ಪ್ರದರ್ಶನದಿಂದ ಬರುವ ಒಟ್ಟು ಹಣದಲ್ಲಿ ಚಿತ್ರದ ನಿರ್ಮಾಪಕರು ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರು ಸಮನಾಗಿ ಹಂಚಿಕೊಳ್ಳುತ್ತಿದ್ದಾರೆ. ಅಂದರೆ ಬರುವ ಲಾಭಾಂಶದಲ್ಲಿ 50:50 ಅನುಪಾತದಲ್ಲಿ ಭಾಗವಾಗುತ್ತಿದೆ. ಇದರಲ್ಲಿ ದುಡ್ಡು ಹಾಕಿ ಸಿನಿಮಾ ಮಾಡುವ ನಿರ್ಮಾಪಕನಿಗಿಂತ ಸಿನಿಮಾ ಪ್ರದರ್ಶನ ಮಾಡೋ ಮಾಲೀಕರು ಹೆಚ್ಚು ಹಣ ಮಾಡ್ತಿದ್ದಾರೆ. ಅಲ್ಲಿಗೆ ನಿರ್ಮಾಪಕನಿಗೆ ನಷ್ಟವೇ ಆಗುತ್ತಿದೆ.

  ಪರಭಾಷೆ ಚಿತ್ರಗಳಿಗೆ ಬೇರೇ ಡೀಲ್

  ಪರಭಾಷೆ ಚಿತ್ರಗಳಿಗೆ ಬೇರೇ ಡೀಲ್

  ಕನ್ನಡ ಸಿನಿಮಾಗಳಿಗೆ ಬರುವ ಲಾಭಾಂಶದಲ್ಲಿ 50:50 ಅನುಪಾತದಲ್ಲಿ ನಿರ್ಮಾಪಕ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕ ತೆಗೆದುಕೊಂಡ್ರೆ, ಪರಭಾಷೆ ಚಿತ್ರಗಳಲ್ಲಿ ಬರುವ ಲಾಭದಲ್ಲಿ 55:45 ಅನುಪಾತದಲ್ಲಿ ಹಂಚಿಕೆಯಾಗುತ್ತಿದೆ. ಅಂದ್ರೆ, ನಿರ್ಮಾಪಕನಿಗೆ 55 ರಷ್ಟು, ಮಲ್ಟಿಪ್ಲೆಕ್ಸ್ ಮಾಲೀಕನಿಗೆ 45 ರಷ್ಟು. ಬಟ್, ಕನ್ನಡ ಸಿನಿಮಾಗಳಿಗೆ ಮಾತ್ರ ಕಮ್ಮಿ ಬೆಲೆ ಯಾಕೆ.?

  ಕನ್ನಡ ನಿರ್ಮಾಪಕರ ಪರ ಧ್ವನಿ ಎತ್ತಿದ ಪ್ರೇಮ್

  ಅಸಮಾಧಾನ ಹೊರಹಾಕಿದ ಪ್ರೇಮ್

  ಅಸಮಾಧಾನ ಹೊರಹಾಕಿದ ಪ್ರೇಮ್

  ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಪ್ರೇಮ್ ''ಚಿತ್ರದ ಪ್ರದರ್ಶನದ ಪರ್ಸೆಂಟೇಜ್ ವಿಚಾರದಲ್ಲಿ, ಪರಭಾಷಿಕರಿಗೊಂದು ಬೆಲೆ, ಕನ್ನಡಿಗರಿಗೊಂದು ಬೆಲೆ ಕಟ್ತಿರೋ ಮಲ್ಟಿಪ್ಲೆಕ್ಸ್ ಗಳ(PVR, Cinipolis, inox) ಮಹಾಮೋಸಕ್ಕೆ ನನ್ನ ಧಿಕ್ಕಾರ. ವಾಣಿಜ್ಯಮಂಡಳಿಗೆ ಮನವಿ ಸಲ್ಲಿಸಿದ್ರು ಪ್ರಯೋಜನವಾಗ್ಲಿಲ್ಲ. ಉದ್ಯಮದ ಒಳಿತಿಗಾಗಿ ಮಂಡಳಿ ಇರುವುದೇ ಆದರೆ ದಯವಿಟ್ಟು, ಈ ಸಮಸ್ಯೆಯನ್ನ ಕೂಡಲೇ ಬಗೆಹರಿಸಿ'' ಎಂದು ಬರೆದುಕೊಂಡಿದ್ದಾರೆ.

  'ವಿಲನ್' ಚಿತ್ರದಲ್ಲಿ ಸುದೀಪ್ ಮತ್ತು ಶಿವಣ್ಣನ ಪಾತ್ರಗಳ ಬಗ್ಗೆ ಸುಳಿವು ನೀಡಿದ ಕಿಚ್ಚ

  English summary
  Kannada Movie director prem has expressed displeasure about multiplex percentage ratio system.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X