For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಆರ್. ಚಂದ್ರುಗೆ ಅಗಾಧ ಭರವಸೆ ನೀಡಿ- ಬೆನ್ನೆಲುಬಾಗಿದ್ದ ಅಪ್ಪು

  |

  ಕರುನಾಡ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಣ್ಣಾಗಿ ಹೋಗಿದ್ದಾರೆ. ಅವರ ನೆನಪುಗಳು ಮಾತ್ರ ಎಂದೆಂದಿಗೂ ಎಲ್ಲರ ಮನಸ್ಸಲ್ಲಿ ಹಚ್ಚಹಸಿರು. ಸಿನಿಮಾದ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಅಪ್ಪು ಜೊತೆಗೆ ಅವಿನಾಭಾವ ಸಂಬಂಧ ಹೊಂದಿದವರು. ಈ ಸಾಲಲ್ಲಿ ನಿರ್ದೇಶಕ ಆರ್ ಚಂದ್ರು ಕೂಡ ಒಬ್ಬರು. ಆರ್ ಚಂದ್ರು ಅಂದ್ರೆ ಅಪ್ಪುಗೆ ವಿಶೇಷವಾದ ಪ್ರೀತಿ. ಅಪ್ಪು ಆರ್‌ ಚಂದ್ರುಗೆ ಅಣ್ಣನ ರೀತಿಯಲ್ಲಿ ಬೆನ್ನೆಲುಬಾಗಿ ಸದಾ ಜೊತೆಗೆ ಇರುವ ಭರವಸೆ ನೀಡಿದ್ದರಂತೆ. ಈಗ ಆ ಭರವಸೆಯ ಬೆಳಕು ಇಲ್ಲವಾಯಿತು ಎಂದು ನಿರ್ದೇಶಕ ಆರ್‌. ಚಂದ್ರು ಬೇಸರ ಹೊರ ಹಾಕಿದ್ದಾರೆ.

  ಆರು- ಏಳು ತಿಂಗಳಿನ ಹಿಂದೆ ಅಪ್ಪು ಕಬ್ಜ ಸೆಟ್‌ಗೆ ಸರ್ಪ್ರೈಸ್‌ ಎಂಟ್ರಿ ಕೊಟ್ಟಿದ್ದರು. ಆಮಂತ್ರಣ ಕೊಟ್ಟು ಕರೆದರು ಬರಲು ಯೋಚನೆ ಮಾಡೋ ಈ ಕಾಲದಲ್ಲಿ ಸಿನಿಮಾ ಬಗ್ಗೆ ಕೇಳಿ ಶೂಟಿಂಗ್‌ ಸೆಟ್‌ಗೆ ಅಪ್ಪು ಸರ್ಪ್ರೈಸ್‌ ಎಂಟ್ರಿ ಕೊಟ್ಟಿದ್ದರು. ಆಗ ಅಪ್ಪು ಆರ್‌ ಚಂದ್ರುಗೆ ಹೇಳಿದ್ದು ಇಷ್ಟೆ. "ಸಿನಿಮಾವನ್ನು ಹಾಲಿವುಡ್‌ ಮಾದರಿಯಲ್ಲಿ ಮಾಡುತ್ತಿದ್ದಿಯಾ ಅಂತ ಹೇಳುತ್ತಿದ್ದಾರೆ. ಎಲ್ಲಿ ನೋಡಿದರು ಕಬ್ಜ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಹಾಗಾಗಿ ಶೂಟಿಂಗ್‌ ನೋಡ ಬೇಕು ಅನಿಸಿತ್ತು ಬಂದು ಬಿಟ್ಟೆ". ಎಂದಿದ್ದರಂತೆ ಅಪ್ಪು. ಜೊತೆಗೆ ಸುಮಾರು ಅರ್ಧ ಗಂಟೆಗಳ ಕಾಲ ಶೂಟಿಂಗ್‌ ಸೆಟ್‌ನಲ್ಲೇ ಕಾಲ ಕಳೆದು ಚಿತ್ರತಂಡಕ್ಕೆ ಶುಭಕೋರಿದ್ದರಂತೆ.

  ಅಷ್ಟೇ ಅಲ್ಲ ಕಬ್ಜ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆದಾಗ, ಸ್ವತಃ ಪುನೀತ್ ರಾಜಕುಮಾರ್ ತಾವಾಗಿಯೇ ಆರ್‌.ಚಂದ್ರುಗೆ ಕತೆ ಮಾಡಿ ಮೋಷನ್ ಪೋಸ್ಟರ್ ಬಗ್ಗೆ ಮಾತನಾಡಿದರಂತೆ. ಉಪೇಂದ್ರ ಅವರು ತುಂಬಾ ಚೆನ್ನಾಗಿ ಕಾಣಿಸಿಸುತ್ತಿದ್ದಾರೆ. ಟೀಸರ್‌ ಚೆನ್ನಾಗಿ ಮೂಡಿ ಬಂದಿದೆ ಎಂದು ಬೆನ್ನು ತಟ್ಟಿದ್ದರಂತೆ ಅಪ್ಪ. ಕನ್ನಡದಲ್ಲಿ ಈ ರೀತಿಯ ಪ್ರಯೋಗಗಳು ಆಗೋದು ತುಂಬಾ ಮುಖ್ಯ ಎಂದು ಸಂತಸ ಪಟ್ಟಿದ್ದರಂತೆ. ಈ ಸಿನಿಮಾವನ್ನು ನಿರ್ದೇಶಕ ಆರ್‌ ಚಂದ್ರು ದುಬಾರಿ ಬಂಡವಾಳದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಹಾಗಾಗಿ ಚಿತ್ರಕ್ಕೆ ಏನಾದ್ರು ಬೇಕಾದರೆ ನಾನು ಸದಾ ಜೊತೆಗೆ ಇರುತ್ತೇನೆ. ನಿನಗೆ ಕುಟುಂಬ ಇದೆ ಹುಷಾರಾಗಿ ನೋಡಿ ಪ್ಲ್ಯಾನ್‌ ಮಾಡಿಕೋ ಎಂದು ಅಪ್ಪು ಭರವಸೆಯ ಮಾತುಗಳನ್ನುಆಡಿದ್ದರಂತೆ.

  ಇನ್ನು ಅಪ್ಪು ಮತ್ತು ಆರ್ ಚಂದ್ರು ಈ ಹಿಂದೆಯೇ ಒಂದು ಸಿನಿಮಾ ಮಾಡಬೇಕಿತ್ತು. ನಿರ್ಮಾಪಕ ವಿಜಯ್ ಕಿರಗಂದೂರು ಸ್ಯಾಂಡಲ್‌ವುಡ್‌ಗೆ ನಿರ್ಮಾಪಕನಾಗಿ ಎಂಟ್ರಿ ಕೊಡುವಾಗ ಮೊದಲು ಅಡ್ವಾನ್ಸ್‌ ಕೊಟ್ಟಿದ್ದು ಪುನೀತ್‌ ಚಿತ್ರಕ್ಕಾಗಿ ಆರ್. ಚಂದ್ರುಗೆ. ಪುನೀತ್ ರಾಜಕುಮಾರ್‌ಗಾಗಿ ಸಿನಿಮಾ ಮಾಡುವ ಸಲುವಾಗಿ ಆ. ಚಂದ್ರುಗೆ ವಿಜಯ್ ಕಿರಗಂದೂರು 25 ಲಕ್ಷ ಅಡ್ವಾನ್ಸ್‌ ಹಣವನ್ನು ಕೊಟ್ಟಿದ್ದರಂತೆ. ಆಗ ರಾಘಣ್ಣ ಕಥೆ ಕೇಳಿದ್ದರಂತೆ. ಆದ್ರೆ ಕಥೆಯಲ್ಲಿ ಒಂದಷ್ಟು ಬದಲಾವಣೆ ಬೇಕು ಎಂದಿದ್ದರಂತೆ. ಇನ್ನೂ ಆಗ ಸಮಯದಲ್ಲಿ ಜಾಕಿ ಸಿನಿಮಾ ತೆರೆಗೆ ಬಂದಿತ್ತು. ಜಾಕಿ ಚಿತ್ರದ ಫ್ಲೇವರ್‌ನಲ್ಲಿ ಕಥೆ ಬೇಕು ಅನ್ನುವ ಕಾರಣಕ್ಕೆ ಆರ್. ಚಂದ್ರು ಕೊಂಚ ಟೈಂ ತೆಗೆದುಕೊಂಡಿದ್ದರಂತೆ. ಆದ್ರೆ ಕಥೆ ಮಾಡಲು ತಡವಾದ ಕಾರಣಕ್ಕೆ ಸಿನಿಮಾವನ್ನು ಆಗ ಮಾಡಲಾಗಲಿಲ್ಲ. ಮುಂದೆ ಅಪ್ಪುಗಾಗಿ ಒಳ್ಳೆಯ ಕಥೆಯನ್ನು ಮಾಡಿ ಸಿನಿಮಾ ಮಾಡ್ತೀನಿ ಅನ್ನುವ ಮಾತುಗಳನ್ನು ಹೇಳಿ ಆರ್‌. ಚಂದ್ರು ಅಡ್ವಾನ್ಸ್‌ ಹಣವನ್ನು ಹಿಂದಿರುಗಿಸಿದ್ದಾರೆ. ಯಾವತ್ತಿನಿಂದಲೂ ಅಪ್ಪು ಚಂದ್ರುಗೆ ಸದಾ ಕೇಳುತ್ತಿದ್ದದ್ದು ಒಂದೇ ಮಾತು "ನನಗೆ ಕಥೆ ಯಾವಾಗ ಮಾಡುತ್ತೀಯ, ಸಿನಿಮಾ ಯಾವಾಗ ಮಾಡ್ತೀಯಾ" ಅನ್ನೋದು.

  ಸದ್ಯ ಕಬ್ಜಾ ಸಿನಿಮಾ ಮುಗಿದ ಬಳಿಕ ಆರ್‌ ಚಂದ್ರು ಅಪ್ಪುಗಾಗಿ ಕಥೆ ಕೈಗೆತ್ತಿಕೊಳ್ಳಲು ಸಿದ್ದವಾಗಿದ್ದರಂತೆ. ಅಪ್ಪುಗಾಗಿ ವಿಶೇಷ ಕತೆಯನ್ನು ಮಾಡಿಕೊಳ್ಳಲು ತಯಾರಿಯನ್ನು ನಡೆಸಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅಪ್ಪು ಯಾರ ಕೈಗೂ ಸಿಗದೆ, ಇನ್ನೂ ಯಾವ ಚಿತ್ರ ಕಥೆಗೂ ನಾಯಕನಾಗದೆ ಬದುಕಿನ ಪಯಣ ಮುಗಿಸಿ ಬಿಟ್ಟಿದ್ದಾರೆ. ಸದಾ ನಿನ್ನೊಂದಿಗೆ ಇರ್ತೀನಿ ಎಂದಿದ್ದ ಅಪ್ಪು ಈಗಿಲ್ಲ. ಆದರೆ ಅವರ ಆ ಭರವಸೆಯ ಸ್ಪೂರ್ತಿದಾಯಕ ಮಾತುಗಳು ಎಂದಿಗೂ ಸ್ಪೂರ್ತಿ ಎಂದು ಆರ್‌.ಚಂದ್ರು ದುಃಖವನ್ನು ಹೊರಹಾಕಿದ್ದಾರೆ.

  English summary
  Director R. Chandru Remember Puneeth Rajkumar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X