'PK' ನಿರ್ದೇಶಕ ಹಿರಾನಿ ಮೇಲೆ ಲೈಂಗಿಕ ನಿಂದನೆ ಆರೋಪ
ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಮೇಲೆ ಯುವತಿಯೊಬ್ಬರು ಲೈಂಗಿಕ ನಿಂದನೆ ಆರೋಪ ಮಾಡಿದ್ದಾರೆ. 'ಮುನ್ನಾಭಾಯಿ ಸೀರಿಸ್', 'ಪಿಕೆ', 'ಸಂಜು' ಸಿನಿಮಾಗಳ ಮೂಲಕ ದೊಡ್ಡ ಹೆಸರು ಮಾಡಿದ್ದ ನಿರ್ದೇಶಕ ಹಿರಾನಿ ಈಗ ತಮ್ಮ ಜೊತೆಗೆ ಕೆಲ ಮಾಡುತ್ತಿದ್ದ ಯುವತಿಯೊಬ್ಬರ ಆರೋಪ ಎದುರಿಸುತ್ತಿದ್ದಾರೆ.
'ಸಂಜು' ಸಿನಿಮಾದ ಕೆಲಸ ಮಾಡುತ್ತಿದ್ದ ಸಮಯಗಳಲ್ಲಿ ರಾಜ್ ಕುಮಾರ್ ಹಿರಾನಿ ಅವರು ನನ್ನ ಮೇಲೆ ಲೈಂಗಿಕ ನಿಂದನೆ ಹಾಗೂ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಯುವತಿಯೊಬ್ಬರು ಸಂದರ್ಶನವೊಂದರಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಇಮೇಲ್ ಮೂಲಕ ಯುವತಿ ಘಟನೆಯನ್ನು ವಿವರಿಸಿದ್ದು, 'ಸಂಜು' ಸಿನಿಮಾ ಪೋಸ್ಟ್ ಪ್ರೋಡಕ್ಷನ್ ಕೆಲಸ ನಡೆಯುವಾಗ ಇಂತಹ ಕೆಟ್ಟ ಅನುಭವ ಆಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ಕಳೆದ ನವೆಂಬರ್ 3 ರಂದು ನಿರ್ಮಾಪಕ ವಿಧು ಚೋಪ್ರಾ ಅವರಿಗೆ ಈ ಯುವತಿ ಇಮೇಲ್ ಕಳುಹಿಸಿದರಂತೆ.
ಇನ್ನು, ತಮ್ಮ ಮೇಲೆ ಬಂದ ಆರೋಪಕ್ಕೆ ರಾಜ್ ಕುಮಾರ್ ಹಿರಾನಿ ಸಹ ಪ್ರತಿಕ್ರಿಯೆ ನೀಡಿದ್ದು, ''ತನ್ನ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಶುದ್ಧ ಸುಳ್ಳು ಹಾಗೂ ವೈಯಕ್ತಿಕ ದ್ವೇಷದಿಂದ ಮಾಡಿರುವ ಸಂಚು'' ಎಂದು ಹೇಳಿಕೆ ನೀಡಿದ್ದಾರೆ.


Click it and Unblock the Notifications











