Just In
Don't Miss!
- News
ಬಜೆಟ್ ಮಂಡಿಸಲು ಸರ್ಕಾರಕ್ಕೆ ನೈತಿಕತೆಯಿಲ್ಲ, ಸಭಾತ್ಯಾಗ ಮಾಡುತ್ತೇವೆ: ಸಿದ್ದರಾಮಯ್ಯ
- Sports
ಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ, ದಿನಾಂಕ, ಸಮಯ ಹಾಗೂ ಸ್ಥಳ
- Finance
20 ತಿಂಗಳ ಬಳಿಕ ಗರಿಷ್ಠ ಮಟ್ಟ ತಲುಪಿದ ಕಚ್ಚಾ ತೈಲ ಬೆಲೆ
- Lifestyle
ಯಾವಾಗ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು?
- Automobiles
ಬಿಡುಗಡೆಯಾಗಲಿದೆ ಲಾಂಗ್ ವೀಲ್ಹ್ಬೆಸ್ ಹೊಂದಿರುವ ಲ್ಯಾಂಡ್ ರೋವರ್ ಡಿಫೆಂಡರ್
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿರ್ದೇಶಕ ಶಶಾಂಕ್ ಮಾಡಿದ 'ಡಬ್ಬಿಂಗ್' ಟ್ವೀಟ್‌ಗೆ ಭಾರಿ ವಿರೋಧ
ಸುಮಾರು ತಿಂಗಳ ನಂತರ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಸುಗ್ಗಿ ಪ್ರಾರಂಭವಾಗಿದೆ. ಸಾಲುಗಟ್ಟಿ ನಿಂತಿದ್ದ ಸ್ಟಾರ್ ನಟರ ಚಿತ್ರಗಳು ಒಂದೊಂದೆ ಚಿತ್ರಮಂದಿರಕ್ಕೆ ಬರ್ತಿದೆ. ಪ್ರತಿ ಚಿತ್ರಕ್ಕೂ ಎರಡು ವಾರ ಅಂತರ ಎಂಬಂತೆ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ದಿನಾಂಕ ಘೋಷಿಸಿದೆ.
ಕ್ರಮವಾಗಿ ರಾಮಾರ್ಜುನ, ಇನ್ಸ್‌ಪೆಕ್ಟರ್ ವಿಕ್ರಂ, ಪೊಗರು, ರಾಬರ್ಟ್, ಯುವರತ್ನ, ಸಲಗ, ಕೋಟಿಗೊಬ್ಬ 3, ಭಜರಂಗಿ 2 ಚಿತ್ರಗಳು ತೆರೆಕಾಣುತ್ತಿದೆ. ಈ ಖುಷಿಯನ್ನು ಹಂಚಿಕೊಂಡಿರುವ ನಿರ್ದೇಶಕ ಶಶಾಂಕ್ ಫೋಟೋವೊಂದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ಡಬ್ಬಿಂಗ್ ಚಿತ್ರಗಳ ವಿರುದ್ಧವಾಗಿ ಟ್ವೀಟ್ ಮಾಡಿದ್ದಾರೆ. ಶಶಾಂಕ್ ಮಾಡಿದ ಈ ಟ್ವೀಟ್‌ಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ. ಅಷ್ಟಕ್ಕೂ, ಶಶಾಂಕ್ ಮಾಡಿದ ಟ್ವೀಟ್‌ನಲ್ಲಿ ಏನಿತ್ತು? ಮುಂದೆ ಓದಿ...

ನುಗ್ಗಿ ಹೊಡೆಯೋದು ಅಂದ್ರೆ ಇದೇ
ಏಂಟು ಚಿತ್ರಗಳ ರಿಲೀಸ್ ದಿನಾಂಕ ಹೊಂದಿರುವ ಫೋಟೋವೊಂದನ್ನು ಶೇರ್ ಮಾಡಿರುವ ಶಶಾಂಕ್ ''ನುಗ್ಗಿ ಹೊಡೆಯೋದು ಅಂದ್ರೆ ಇದೇ ! ಯಾವ ಡಬ್ಬಿಂಗ್ ಸಿನಿಮಾಗೂ ಒಂದು ಥಿಯೇಟರ್ ಕೂಡ ಸಿಗಬಾರದು. ಜೈ ಕನ್ನಡ ಸಿನೆಮಾ'' ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ.
'ಡಬ್ಬಿಂಗ್ ತಂದವರು, ನೀವು ಅಪ್ಪನಿಗೆ ಹುಟ್ಟಿದವರಾ? ಕನ್ನಡ ದ್ರೋಹಿಗಳು': ಜಗ್ಗೇಶ್ ಹೇಳಿಕೆಗೆ ಭಾರಿ ಖಂಡನೆ

ಡಬ್ಬಿಂಗ್ ಚಿತ್ರ ಬೇಡ, ಮೂಲ ಚಿತ್ರ ಓಕೆನಾ?
ಡಬ್ಬಿಂಗ್ ಚಿತ್ರಗಳಿಗೆ ಥಿಯೇಟರ್ ಸಿಗುವುದು ಬೇಡ ಎಂದಿರುವ ಶಶಾಂಕ್ ಅವರನ್ನು ಪ್ರಶ್ನಿಸಿರುವ ನೆಟ್ಟಿಗರು, ''ಡಬ್ಬಿಂಗ್ ಸಿನೆಮಾಗೆ ಥಿಯೇಟರ್ ಗಳು ಸಿಗಬಾರದು, ಮೂಲ ಸಿನೆಮಾಗೆ 600+ ಥಿಯೇಟರ್ ಗಳು ಸಿಕ್ಕಿದ್ರೆ ಪರವಾಗಿಲ್ವಾ?'' ಎಂದು ಟೀಕಿಸಿದ್ದಾರೆ.

ಸಂಕ್ರಾಂತಿಗೆ ಮಾಸ್ಟರ್ ಹೊಡಿತು ಅಲ್ವಾ?
''ನುಗ್ಗಿ ಹಿಡಿಯೋದು ಈಗಲ್ಲ ಸರ್ ಮೊನ್ನೆ ಸಂಕ್ರಾಂತಿಗೆ ಮಾಸ್ಟರ್ , Solo Brathuke So Better, crack ಅಂತಹ ಪರಭಾಷಾ ಸಿನೆಮಾಗಳು ಕರ್ನಾಟಕದಾದ್ಯಂತ ಮೂಲ ಭಾಷೆಲೀ ರಿಲೀಸ್ ಆದಾಗ ಆಗ ಬರಬೇಕಿತ್ತು, ಡಬ್ಬಿಂಗ್ ಗೆ ಸಿಕ್ಕಿದ್ದೇ 30 shows ಅದು ಸಿಗ್ಬರ್ದಂತೆ, ಮೂಲ ಭಾಷೇಲಿ ರಿಲೀಸ್ ಆದ್ರೆ ಪರ್ವಾಗಿಲ್ವಂತೆ'' ಎಂದು ಕಿಡಿಕಾರಿದ್ದಾರೆ.
ಟಿವಿಯಲ್ಲಿ ಡಬ್ಬಿಂಗ್ ಚಿತ್ರಗಳ ಪ್ರಸಾರ ಹೆಚ್ಚಾಯ್ತಾ? ಕನ್ನಡ ಪ್ರೇಕ್ಷಕರು ಏನಂತಿದ್ದಾರೆ?

ಸ್ಪಷ್ಟನೆ ನೀಡಿದ ಶಶಾಂಕ್
ಶಶಾಂಕ್ ಅವರ ಟ್ವೀಟ್‌ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಅವರು ''ಖಂಡಿತ ನಾನು ಡಬ್ಬಿಂಗ್ ವಿರೋಧಿಯಲ್ಲ. ಆದರೆ, ಪರಭಾಷಾ ಸಿನಿಮಾಗಳಿಗಿಂತ ನಮ್ಮ ಸಿನೆಮಾಗಳ ಆರ್ಭಟ ಜೋರಾಗಿ ಇರಬೇಕೆಂಬುದು ನನ್ನ ಆಶಯ ! ಇತರೆ ಚಿತ್ರರಂಗಗಳಲ್ಲಿ- ಪ್ರೇಕ್ಷಕರಲ್ಲಿ ಇರುವುದು ಇದೇ ಮನಸ್ಥಿತಿ ! ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಯೋಚಿಸಿದರೆ ಎಲ್ಲವೂ ಅರ್ಥವಾಗುತ್ತದೆ'' ಎಂದು ಮತ್ತೊಂದು ಟ್ವೀಟ್ ಮಾಡಿದರು.

ಆತುರದಲ್ಲಿ ಎಡವಟ್ಟಾಗಿದೆ
ನಂತರ ಇನ್ನೊಂದು ಟ್ವೀಟ್ ಮಾಡಿದ ಶಶಾಂಕ್ ''ನನ್ನ ಸಿನೆಮಾವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಲು ರೆಡಿ ಇರುವ ನಾನು ಡಬ್ಬಿಂಗ್ ವಿರೋಧಿಸಲಾರೆ. "ಡಬ್ಬಿಂಗ್" ಜಾಗದಲ್ಲಿ "ಪರಭಾಷೆ" ಎಂದಿರಬೇಕಿತ್ತು ನಿಜ.. ಆತುರದಲ್ಲಿ ಎಡವಟ್ಟಾಗಿದೆ. ಆದರೆ ನೆನಪಿಡಿ- ಯಾವುದಕ್ಕೆ ಎಷ್ಟು ಬೆಲೆ ಕೊಡಬೇಕೋ ಅಷ್ಟೇ ಕೊಡಬೇಕು ಅತಿಯಾಗಿ ಮೈಮೇಲೆ ಎಳೆದುಕೊಂಡರೆ ಅನಾಹುತ ತಪ್ಪಿದ್ದಲ್ಲ. ನನ್ನ ಮಾತು ಮುಕ್ತಾಯ'' ಎಂದು ವಿವಾದಕ್ಕೆ ಅಂತ್ಯವಾಡಿದರು.

ಮೂರು ಭಾಷೆಯಲ್ಲಿ ಉಪೇಂದ್ರ ಸಿನಿಮಾ
ಉಪೇಂದ್ರ ಜೊತೆ ಶಶಾಂಕ್ ತಮ್ಮ ಮುಂದಿನ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಪ್ರಕಟಿಸಿದ್ದಾರೆ. ಪರಭಾಷೆ, ಡಬ್ಬಿಂಗ್ ಬಗ್ಗೆ ಮಾತನಾಡುವ ಶಶಾಂಕ್, ತಮ್ಮ ಚಿತ್ರವನ್ನು ಡಬ್ಬಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರವೂ ವಿರೋಧಕ್ಕೆ ಕಾರಣವಾಗಿತ್ತು. ಸದ್ಯದಲ್ಲೇ ಈ ಚಿತ್ರ ಆರಂಭವಾಗಲಿದೆ.