»   » ಕೆಂಡಸಂಪಿಗೆ ಕಲೆಕ್ಷನ್ ದೇಣಿಗೆ ನೀಡಿದ ದುನಿಯಾ ಸೂರಿ

ಕೆಂಡಸಂಪಿಗೆ ಕಲೆಕ್ಷನ್ ದೇಣಿಗೆ ನೀಡಿದ ದುನಿಯಾ ಸೂರಿ

Posted By:
Subscribe to Filmibeat Kannada

ಕನ್ನಡದ ಖ್ಯಾತ ನಿರ್ದೇಶಕ ಸೂರಿ ಅವರು ಹೊಸಬರನ್ನು ಸೇರಿಸಿಕೊಂಡು ಮಾಡಿರುವ 'ಕೆಂಡಸಂಪಿಗೆ' ಎಲ್ಲೆಡೆ ತನ್ನ ಕಂಪನ್ನು ಸೂಸಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ.

ಇದೀಗ ಈ ಚಿತ್ರತಂಡದಿಂದ ಹೊರಬಂದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ ಸೆಪ್ಟೆಂಬರ್ 11 ರಂದು ಕರ್ನಾಟಕದಾದ್ಯಂತ ತೆರೆ ಕಂಡಿದ್ದು, ಇದೀಗ ಭರ್ಜರಿ ಯಶಸ್ಸಿನಿಂದ ಬೀಗುತ್ತಿರುವ 'ಕೆಂಡಸಂಪಿಗೆ' ಚಿತ್ರದ ನಿರ್ದೇಶಕ ಸೂರಿ ಅವರು ಕಳೆದ ಶುಕ್ರವಾರ (ಸೆಪ್ಟೆಂಬರ್ 25) ಮೂವಿಲ್ಯಾಂಡ್ ನಲ್ಲಿ ಪ್ರದರ್ಶನಗೊಂಡ 4 ಶೋಗಳಲ್ಲಿ ಕಲೆಕ್ಷನ್ ಆದ ಎಲ್ಲಾ ಒಟ್ಟು ಮೊತ್ತವನ್ನು ಕರ್ನಾಟಕ ರಾಜ್ಯ 'ಮುಖ್ಯಮಂತ್ರಿ ಪರಿಹಾರ ನಿಧಿ' ಗೆ ನೀಡುವುದಾಗಿ ನಿರ್ಧರಿಸಿದ್ದಾರೆ.['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']

Director Soori Donate 'Kendasampige' Friday's collection to 'CM RelieF Fund'

ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಉತ್ತಮ ರೆಸ್ಪಾನ್ಸ್ ಗಳಿಸುತ್ತಿರುವ, ನಟ ಸಂತೋಷ್ ರೇವಾ ಹಾಗೂ ನಟಿ ಮಾನ್ವಿತ ಹರೀಶ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಕೆಂಡಸಂಪಿಗೆ' ಚಿತ್ರವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಶುಕ್ರವಾರ (ಸೆಪ್ಟೆಂಬರ್ 25) ದಂದು ಮೂವಿಲ್ಯಾಂಡ್ ಚಿತ್ರಮಂದಿರದಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಜೊತೆಗೆ ಸ್ಯಾಂಡಲ್ ವುಡ್ ನ ಇನ್ನಿತರೇ ನಟ-ನಟಿಯರು 'ಕೆಂಡಸಂಪಿಗೆಯ' ಪರಿಮಳಕ್ಕೆ ಮನಸೋತು ಹೊಸಬರ ನಟನೆಗೆ ಭೇಷ್ ಎಂದಿದ್ದಾರೆ.

ಅಂತೂ ಚಿತ್ರ ಯಶಸ್ಸಿನ ದಿನಗಳತ್ತ ಮುನ್ನುಗ್ಗುತ್ತಿರುವ ಈ ಸಂದರ್ಭದಲ್ಲಿ ನಿರ್ದೇಶಕ ಸೂರಿ ಅವರು ಶುಕ್ರವಾರ 'ಕೆಂಡಸಂಪಿಗೆ' ಗಳಿಸಿದ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ನಿರ್ಧರಿಸಿದ್ದಾರೆ. [ದುನಿಯಾ ಸೂರಿ 'ಕೆಂಡಸಂಪಿಗೆ'ಗೆ ಸಿಕ್ತಾ ವಿಮರ್ಶಕರ ಜೈಕಾರ?]

Director Soori Donate 'Kendasampige' Friday's collection to 'CM RelieF Fund'

ಹಲವಾರು ರೈತ ಕುಟುಂಬಗಳು ಸಾಲಬಾಧೆಯಿಂದ ಬಳಲುತ್ತಿದ್ದು, ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ನೊಂದ ಕುಟುಂಬಗಳಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕೆಂದಿದ್ದೇನೆ ಎಂದು ನಿರ್ದೇಶಕ ಸೂರಿ ಅವರು ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಒಟ್ನಲ್ಲಿ ಹೊಸಬರನ್ನು ಹಾಕಿಕೊಂಡು ಮಾಡಿರುವ ಚಿತ್ರ ಕೈ ಹಿಡಿದು ನಡೆಸಿದ ಸಂತಸದಲ್ಲಿರುವ ನಿರ್ದೇಶಕ ಸೂರಿ ಅವರ ವಿಶಿಷ್ಟ ರೀತಿಯ ಜನಸೇವೆ ಎಲ್ಲರನ್ನು ಅವರತ್ತ ತಿರುಗಿ ನೋಡುವಂತೆ ಮಾಡಿದೆ ಅಂದ್ರೂ ತಪ್ಪಾಗ್ಲಿಕ್ಕಿಲ್ಲ.

English summary
Director Soori has decided to donate the money collected from all the four shows at the Movieland theater on Friday to the CM Relief Fund. Soori's new film 'Kendasampige' has been running successfully. 'Kendasampige' features Kannada actor Vicky(Santhosh Reva), Kannada Actress Manvitha Harish in the lead role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada