»   » ಸೆನ್ಸಾರ್ ಮಂಡಳಿಯಿಂದ ಪಾಸ್ ಆದ 'ಆಪರೇಷನ್ ಅಲಮೇಲಮ್ಮ'

ಸೆನ್ಸಾರ್ ಮಂಡಳಿಯಿಂದ ಪಾಸ್ ಆದ 'ಆಪರೇಷನ್ ಅಲಮೇಲಮ್ಮ'

Posted By:
Subscribe to Filmibeat Kannada

ಸಿಂಪಲ್ ಸುನಿ ನಿರ್ದೇಶನ ಕಾಮಿಡಿ ಥ್ರಿಲ್ಲರ್ ಚಿತ್ರ 'ಆಪರೇಷನ್ ಅಲಮೇಲಮ್ಮ' ಸೆನ್ಸಾರ್ ಮಂಡಳಿಯಿಂದ ಪಾಸ್ ಆಗಿದೆ. ಫಸ್ಟ್ ಲುಕ್ ಪೋಸ್ಟರ್, ಟೀಸರ್, ಹಾಡುಗಳಿಂದ ಭರವಸೆ ಮೂಡಿಸಿದ್ದ 'ಅಲಮೇಲಮ್ಮ' ಯಾವುದೇ ಕಟ್ಸ್ ಇಲ್ಲದೇ, 'ಯು' ಸರ್ಟಿಫಿಕೇಟ್ ಪಡೆದುಕೊಂಡಿದೆ.

ಸಿಂಪಲ್ ಸುನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಯು-ಟರ್ನ್ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಮತ್ತು ಹೊಸ ಪ್ರತಿಭೆ ರಿಷಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಜುಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಷೇಕ್ ಕಾಸರಗೂಡ ಅವರ ಛಾಯಾಗ್ರಹಣವಿದೆ.

'ಆಪರೇಷನ್ ಅಲಮೇಲಮ್ಮ'ನಿಗೆ ಜೈಕಾರ ಹಾಕಿದ ಗಣೇಶ್, ರಕ್ಷಿತ್

Director Suni's Operation Alamelamma Gets U certificate

ಅಂದ್ಹಾಗೆ, 'ಆಪರೇಷನ್ ಅಲಮೇಲಮ್ಮ' ಕಾಮಿಡಿ ಕಮ್ ಕ್ರೈಂ ಥ್ರಿಲ್ಲಿಂಗ್ ಕಥೆಯಾಗಿದ್ದು, ನಾಯಕ ತರಕಾರಿ ವ್ಯಾಪರಿ ಪಾತ್ರದಲ್ಲಿ ಹಾಗೂ ನಾಯಕಿ ಶ್ರದ್ಧಾ ಟೀಚರ್ ಪಾತ್ರದಲ್ಲಿ ಬಣ್ಣ ಹಚ್ಚಿರುವುದು ಕುತೂಹಲ ಹೆಚ್ಚಿಸಿದೆ. ಉಳಿದಂತೆ ಚಿತ್ರದಲ್ಲಿ ರಾಜೇಶ್ ನಟರಾಜ್, ಅರುಣ ಬಾಲರಾಜ್, ವಿಜೇತ ಗೌಡ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಸುನಿಯ 'ಅಪರೇಷನ್ ಅಲಮೇಲಮ್ಮ'ನ ಬಗ್ಗೆ ಸೆಲೆಬ್ರಿಟಿಗಳು ಉಘೇ ಉಘೇ

ಇನ್ನು ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ವಿಶ್ವದಾದ್ಯಂತ ವಿತರಣೆ ಮಾಡಲಿದೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅಭಿನಯದ 'ನಿನ್ನಿಂದಲೇ' ಮತ್ತು 'ರಾಜಕುಮಾರ', ಯಶ್ ಅಭಿನಯದ 'ಮಾಸ್ಟರ್ ಪೀಸ್' ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿತ್ತು. ಈ ಮೂಲಕ ಜಗತ್ತಿನಾದ್ಯಂತ 'ಆಪರೇಷನ್ ಅಲಮೇಲಮ್ಮ' ಪ್ರದರ್ಶನವಾಗುವ ಸೂಚನೆ ಸಿಕ್ಕಿದೆ. ಈಗಾಗಲೇ ಹಾಡುಗಳನ್ನ ಬಿಡುಗಡೆ ಮಾಡಿರುವ 'ಆಪರೇಷನ್ ಅಲಮೇಲಮ್ಮ' ಜುಲೈ ಮೂರನೇ ವಾರದಲ್ಲಿ ಚಿತ್ರಮಂದಿರಕ್ಕೆ ಕಾಲಿಡಲಿದೆಯಂತೆ.

English summary
Director Suni's new film Operation Alamelamma has obtained a U certificate from the Censor Board. The film starts newcomer lead actor Rishi and Shraddha Srinath.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada