For Quick Alerts
  ALLOW NOTIFICATIONS  
  For Daily Alerts

  ಹುಷಾರ್... ಸೂರಿ ಸಿನಿಮಾಗಳ ಹೆಸರಿನಲ್ಲಿ 'ಕಾಗೆ' ಹಾರಿಸ್ತಿದ್ದಾರೆ

  |

  ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಸಿನಿಮಾದ ಆಡಿಷನ್ ಇರುವ ಪೋಸ್ಟರ್ ಗಳು ಹರಿದಾಡುತ್ತಿರುತ್ತದೆ. ಆದರೆ, ಅದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದೇ ತಿಳಿಯುವುದಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡ ಕೆಲವರು ಕೆಲವು ಸಿನಿಮಾಗಳ ಹೆಸರನ್ನು ಬಳಸಿಕೊಂಡು ಆಡಿಷನ್ ಇದೆ ಎಂದು ಕಾಗೆ ಹಾರಿಸುತ್ತಿದ್ದಾರೆ.

  ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸೂರಿ ನಿರ್ದೇಶನದ ಮುಂದಿನ ಸಿನಿಮಾಗಳ ಹೆಸರನ್ನು ಬಳಸಿಕೊಂಡು ಮೋಸ ಮಾಡುತ್ತಿದ್ದಾರೆ. 'ಪಾಕ್ ಕಾರ್ನ್ ಮಂಕಿ ಟೈಗರ್' ಹಾಗೂ 'ಕೆಂಡಸಂಪಿಗೆ' ಪಾರ್ಟ್ 1 'ಕಾಗೆ ಬಂಗಾರ' ಚಿತ್ರಗಳಿಗೆ ಆಡಿಷನ್ ಇದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

  'ಕೆಜಿಎಫ್' ಮೇಕಿಂಗ್ ಬಗ್ಗೆ ದುನಿಯಾ ಸೂರಿ ಆಡಿದ ಮಾತು 'ಕೆಜಿಎಫ್' ಮೇಕಿಂಗ್ ಬಗ್ಗೆ ದುನಿಯಾ ಸೂರಿ ಆಡಿದ ಮಾತು

  ಇದನ್ನು ಗಮನಿಸಿರುವ ಚಿತ್ರತಂಡ ತಾವು ತಮ್ಮ ಸಿನಿಮಾಗಳಿಗೆ ಯಾವುದೇ ಆಡಿಷನ್ ನಡೆಸುತ್ತಿಲ್ಲ ಎಂದು ಸ್ಪಷ್ಟ ಪಡಿಸಿದೆ. ಜೊತೆಗೆ ಕೆಲವರು ಫೇಕ್ ಇಂಟರ್ ನೆಟ್ ಸೈಟ್ ಗಳಿಂದ ಆಡಿಷನ್ ಕರೆದರೆ ಅದಕ್ಕೆ ನಾನು ಜವಾಬ್ದಾರರಲ್ಲ ಎಂದು ಹೇಳಿದೆ.

  'ಪಾಕ್ ಕಾರ್ನ್ ಮಂಕಿ' ಚಿತ್ರದಲ್ಲಿ ಧನಂಜಯ್ ನಾಯಕನಾಗಿದ್ದಾರೆ. ಉಳಿದ ಎಲ್ಲ ಪಾತ್ರಗಳಿಗೆ ಕಲಾವಿದರ ಆಯ್ಕೆ ಆಗಿ ಚಿತ್ರೀಕರಣ ಕೂಡ ನಡೆಯುತ್ತಿದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ತಮಗೆ ತಾವೇ ಆಡಿಷನ್ ಇದೆ ಎಂದು ಅನೇಕರಿಗೆ ಯಾಮಾರಿಸುತ್ತಿದ್ದಾರೆ.

  'ಪಾಪ್ ಕಾರ್ನ್ ಮಂಕಿ ಟೈಗರ್' ಟ್ರೆಂಡ್ ಶಿವಣ್ಣನಿಂದ ಶುರು 'ಪಾಪ್ ಕಾರ್ನ್ ಮಂಕಿ ಟೈಗರ್' ಟ್ರೆಂಡ್ ಶಿವಣ್ಣನಿಂದ ಶುರು

  ಈ ರೀತಿ ಪೋಸ್ಟ್ ಗಳು ನಿಮ್ಮ ಕಣ್ಣಿಗೆ ಬಿದ್ದರೇ, ಆಡಿಷನ್ ಇದೆ ಎಂದು ನಿಮ್ಮನ್ನೂ ಯಾಮಾರಿಸಲು ಪ್ರಯತ್ನ ಮಾಡಿದರೆ ನಮಗೆ ತಿಳಿಸಿ. ಆ ವಿಷಯವನ್ನು ಚಿತ್ರತಂಡಕ್ಕೆ ತಲುಪಿಸುವ ಕೆಲಸ ನಾವು ಮಾಡುತ್ತೇವೆ.

  English summary
  Kannada director Duniya Suri not conducting any audition for 'Popcorn Monkey Tiger movie.
  Wednesday, August 7, 2019, 22:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X