»   » ಮಲ್ಲಿಗೆ ಇಡ್ಲಿ ತಿನ್ನುತ್ತಾ 'ಯಾರಿಗೆ ಇಡ್ಲಿ' ಚಿತ್ರದ ಹಾಡು ಕೇಳಿ

ಮಲ್ಲಿಗೆ ಇಡ್ಲಿ ತಿನ್ನುತ್ತಾ 'ಯಾರಿಗೆ ಇಡ್ಲಿ' ಚಿತ್ರದ ಹಾಡು ಕೇಳಿ

Posted By:
Subscribe to Filmibeat Kannada

ಹಾಸ್ಯ ನಟ ಕಮ್ ನಿರ್ದೇಶಕ ಯಶವಂತ ಸರದೇಶ ಪಾಂಡೆ ನಿರ್ದೇಶನದ ವಿಭಿನ್ನ ಪ್ರಯತ್ನದ 'ಯಾರಿಗೆ ಇಡ್ಲಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

'ಯಾರಿಗೆ ಇಡ್ಲಿ' ಹೆಸರೇ ಒಂಥರಾ ವಿಚಿತ್ರ ಇದೆಯಲ್ವ ಅಂತ ನೀವು ಅನ್ಕೊಂಡ್ರ, ವಿಚಿತ್ರ ಆದರೂ ಡಬಲ್ ಮೀನಿಂಗ್ ಅಂತೂ ಅಲ್ವೆ ಅಲ್ಲಾ. ಅಸಲಿ ವಿಷ್ಯಾ ಏನಪ್ಪಾ ಅಂದ್ರೆ ಒಬ್ಬ ಇಡ್ಲಿ ಮಾಡುವ ಹುಡುಗ ಅದು ಹೇಗೆ ಸಿನಿಮಾದಲ್ಲಿ ಸಹಾಯಕ ನಿರ್ದೇಶಕ ಆಗುತ್ತಾನೆ ಅನ್ನೋದು ಒಟ್ಟಾರೆ 'ಯಾರಿಗೆ ಇಡ್ಲಿ' ಚಿತ್ರದ ಹೂರಣ.

Vishwajith megha

ಯಶವಂತ ಸರದೇಶಪಾಂಡೆ ಆಕ್ಷನ್-ಕಟ್ ಜೊತೆಗೆ ಹೊಸಬರು ಸೇರಿಕೊಂಡು ಮಾಡಿರುವ 'ಯಾರಿಗೆ ಇಡ್ಲಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಬರಹಗಾರ ಯಂಡಮೂರಿ ವೀರೆಂದ್ರನಾಥ್ ಭಾಗವಹಿಸಿದ್ದರು.

ಚಿತ್ರದ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಯಂಡಮೂರಿ ವೀರೆಂದ್ರನಾಥ್ 'ಯಾರಿಗೆ ಇಡ್ಲಿ' ಚಿತ್ರದ ನಿರ್ಮಾಪಕ ಹರೀಶ್ ಅವರನ್ನು ತೆಲುಗು ಚಿತ್ರದ ನಿರ್ಮಾಣ ಮಾಡಲು ಆಹ್ವಾನ ನೀಡಿದರು.

ಕನ್ನಡ ಚಿತ್ರರಂಗಕ್ಕೆ ಹೋಲಿಸಿದರೆ ತೆಲುಗು ಚಿತ್ರರಂಗದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ಚಿತ್ರಗಳಿಗೆ ಕೊರತೆ ಇದೆ, ಆದರೆ ಕನ್ನಡ ಚಿತ್ರರಂಗದಲ್ಲಿ ಅದು ಸಾಮಾನ್ಯ ಎಂಬಂತಾಗಿದೆ. ಆದುದರಿಂದ ಪ್ರಶಸ್ತಿ ವಿಜೇತ ಚಿತ್ರಗಳನ್ನು ಮಾಡಿರುವ ನಿರ್ಮಾಪಕ ಹರೀಶ್ ಅವರನ್ನು ಯಂಡಮೂರಿ ವಿರೇಂದ್ರ ನಾಥ್ ಟಾಲಿವುಡ್ ಕ್ಷೇತ್ರಕ್ಕೆ ಆಹ್ವಾನವಿತ್ತರು.

Vishwajith Megha

ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್, ರಾಜಕೀಯ ನಾಯಕ ಅರವಿಂದ ಲಿಂಬಾವಳಿ, ಹಾಗೂ ಮತ್ತಿತ್ತರು ಹಾಜರಿದ್ದರು. 'ಯಾರಿಗೆ ಇಡ್ಲಿ' ಚಿತ್ರದ ಹಾಡುಗಳಿಗೆ ಗಿರಿಧರ ದಿವಾನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಇನ್ನೂ ನಿರ್ದೇಶಕ ಯಶವಂತ ಸರದೇಶಪಾಂಡೆ ಅವರು ಕಿರುತೆರೆ ಕ್ಷೇತ್ರದಲ್ಲಿ ಹಾಸ್ಯ ನಟನಾಗಿ ಅಭಿನಯಿಸಿದ್ದು, ಅವರ ಮೊದಲ ನಿರ್ದೇಶನದ ಚಿತ್ರ 'ಐಡಿಯಾ ಮಾಡ್ಯಾರ ನಗಲಿಕ್ಕ' ಚಿತ್ರದ ನಂತರ ಸುಮಾರು 6 ವರ್ಷಗಳ ನಂತರ ಇದೀಗ ಮತ್ತೊಂದು ಹಾಸ್ಯ ಚಿತ್ರದೊಂದಿಗೆ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಹೊಸಬರಾದ ವಿಶ್ವಜಿತ್, ಹಾಗು ಮೇಘ ಶೆಣೈ ಇದೇ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಕಾಲಿಡುತ್ತಿದ್ದಾರೆ. ಇನ್ನುಳಿದಂತೆ ಅವಿನಾಶ್, ದೊಡ್ಡಣ್ಣ, ಗಿರಿಜಾ ಲೋಕೇಶ್, ರಂಗಾಯಣ ರಘು ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

English summary
Well known writer Yandamoori Veerendranath had come to the audio release of Director Yashwanth Sirdeshpande's Kannada movie 'Yarige Idly'. The movie features Actor Vishwajith, Actress Megha Shenoy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada