»   » ಗಾಂಧಿನಗರಕ್ಕೆ ಬಲಗಾಲಿಟ್ಟು ಬಂದ ದಿಶಾ ಪಾಂಡೆ

ಗಾಂಧಿನಗರಕ್ಕೆ ಬಲಗಾಲಿಟ್ಟು ಬಂದ ದಿಶಾ ಪಾಂಡೆ

Posted By:
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ದಂತದ ಗೊಂಬೆ ಅಡಿಯಿಡುತ್ತಿದ್ದಾರೆ. ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಅಭಿನಯಿಸಿರುವ ಈಕೆ ಬೇರಾರು ಅಲ್ಲ ದಿಶಾ ಪಾಂಡೆ. ಇವರಿಗೂ ಪೂನಂ ಪಾಂಡೆಗೂ ಇರುವ ಒಂದೇ ಒಂದು ಸಾಮ್ಯತೆ ಎಂದರೆ ಪಾಂಡೆ ಎಂಬ ನಿಕ್ ನೇಮ್.

ಅದು ಬಿಟ್ಟರೆ ಉಳಿದಂತೆ ಆ ಪಾಂಡೆಗೂ ಈ ಪಾಂಡೆಗೂ ಈ ಜನ್ಮದಲ್ಲಿ ಯಾವುದೇ ಸಂಬಂಧವಿಲ್ಲ. ಇಷ್ಟಕ್ಕೂ ದಿಶಾ ಪಾಂಡೆ ಅಭಿನಯಿಸುತ್ತಿರುವುದು ನಮ್ಮ ಕಾಮಿಡಿ ಹೀರೋ ಶರಣ್ ಅವರ 'ಶ್ರೀಮತಿ ಜಯಲಲಿತಾ' ಚಿತ್ರದಲ್ಲಿ.


ಶರಣ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಪಾತ್ರವರ್ಗದಲ್ಲಿ ಐಶ್ವರ್ಯಾ ಹಾಗೂ ದೇವನ್ ಮುಖ್ಯಪಾತ್ರಧಾರಿಗಳು. ದಿಶಾ ಪಾಂಡೆ ಅವರಿಗೆ ಕನ್ನಡ ಬರುವುದಿಲ್ಲವಂತೆ. ಆದರೂ ಈ ಚಿತ್ರಕ್ಕಾಗಿ ಕೊಂಚಂ ಕೊಂಚಂ ಕನ್ನಡವನ್ನೂ ಕಲಿತಿದ್ದಾರಂತೆ.

ಮಲಯಾಳಂನ ಹಿಟ್ ಚಿತ್ರ 'ಮಾಯಾ ಮೋಹಿನಿ'ಯ ಸ್ಫೂರ್ತಿಯಿಂದ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಚಿತ್ರದ ಹೀರೋ ಮಹಿಳೆಯ ಗೆಟಪ್ ನಲ್ಲಿರುವುದನ್ನು ಬಿಟ್ಟರೆ ಉಳಿದಂತೆ ಮೂಲ ಚಿತ್ರದ ಯಾವುದೇ ಸಾಮ್ಯತೆಗಳೂ ಇಲ್ಲ ಎನ್ನುತ್ತಾರೆ ಶರಣ್. ಶ್ರೀಮತಿ ಜಯಲಲಿತಾ ಚಿತ್ರ ಸಂಪೂರ್ಣ ಭಿನ್ನ ಎಂಬುದು ಅವರ ವಿವರಣೆ.

ವಿಷ್ಣುವರ್ಧನ ಹಾಗೂ ಚಾರುಲತಾ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಪಿ ಕುಮಾರ್ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ. ಇಂದಿಯಾ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಪಿ ಇಂದಿರಾ ಅವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಶ್ರೀಧರ್ ಸಂಭ್ರಮ್ ಅವರ ಸಂಗೀತ, ಕರುಣಾಕರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಶರಣ್ ಜೊತೆ ಚಿತ್ರದಲ್ಲಿ ರವಿಶಂಕರ್, ಹರೀಶ್ ರಾಜ್, ಸಾಧು ಕೋಕಿಲಾ, ತಬಲಾ ನಾಣಿ ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಮೊದಲು ಜೈ ಲಲಿತಾ ಎಂದು ಹೆಸರಿಡಲು ಚಿಂತಿಸಿದ್ದರು. ಆದರೆ ಶೀರ್ಷಿಕೆ ಸಿಗುವುದು ಕಷ್ಟ ಎಂಬ ಕಾರಣಕ್ಕೆ ಶ್ರೀಮತಿ ಜಯಲಲಿತಾ ಎಂದಿಡಲಾಗಿದೆ. (ಒನ್ಇಂಡಿಯಾ ಕನ್ನಡ)

English summary
Indian model and south actress Disha Pandey is all set to make her Sandalwood debut with the forthcoming movie Smt Jayalalithaa. The movie has Sharan, Aishwarya and Devan in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada