»   » 'ದೊಡ್ಮನೆ ಹುಡ್ಗ' ನೋಡೋರಿಗೆ ಬಿರಿಯಾನಿ, 'ರಾಜ್‌ಕುಮಾರ್' ಲಾಡು ಫ್ರೀ!

'ದೊಡ್ಮನೆ ಹುಡ್ಗ' ನೋಡೋರಿಗೆ ಬಿರಿಯಾನಿ, 'ರಾಜ್‌ಕುಮಾರ್' ಲಾಡು ಫ್ರೀ!

Posted By:
Subscribe to Filmibeat Kannada

'ಬಿರಿಯಾನಿ' ಅಂದಕೂಡಲೆ ನಾನ್ ವೆಜ್ ಇಷ್ಟ ಪಡುವವರ ಬಾಯಲ್ಲಿ ನೀರೂರುತ್ತೆ. ಇನ್ನೂ ಸಿಹಿ ತಿನಿಸು ಪ್ರಿಯರಿಗೆ 'ಲಾಡು' ಅಂದ್ರೆ ಸಾಕು ನಾಲಿಗೆಯಿಂದ ಜೊಲ್ಲು ಗ್ಯಾರೆಂಟಿ!

ಹೀಗಿರುವಾಗಲೇ, ಈ ಎರಡನ್ನೂ ಒಮ್ಮೆಲೆ...ಅದೂ ಫ್ರೀ ಆಗಿ ನೀಡುತ್ತಿರುವವರು ಬೇರೆ ಯಾರೂ ಅಲ್ಲ...'ದೊಡ್ಮನೆ' ಕುಟುಂಬದವರು.


ಸೆಪ್ಟೆಂಬರ್ 30 ರಂದು ಬೆಂಗಳೂರಿನ ಕೆ.ಜಿ ರೋಡ್ ನಲ್ಲಿ ಇರುವ ಮುಖ್ಯ ಚಿತ್ರಮಂದಿರದಲ್ಲಿ 'ದೊಡ್ಮನೆ ಹುಡ್ಗ' ಚಿತ್ರ ನೋಡುವವರಿಗೆ 'ದೊಡ್ಮನೆ ಬಿರಿಯಾನಿ' ಮತ್ತು 'ರಾಜ್ ಕುಮಾರ್ ಲಾಡು' ಸವಿಯುವ ಭಾಗ್ಯ ದೊರಕಲಿದೆ.


ಇದೆಲ್ಲಾ ಅಭಿಮಾನಿಗಳ ಐಡಿಯಾ

'ದೊಡ್ಮನೆ ಹುಡ್ಗ' ಚಿತ್ರವನ್ನ ಮೊದಲ ದಿನ, ಮೊದಲ ಶೋ ನೋಡುವ ಪ್ರೇಕ್ಷಕರಿಗೆ 'ದೊಡ್ಮನೆ ಬಿರಿಯಾನಿ' ಮತ್ತು 'ರಾಜ್ ಕುಮಾರ್ ಲಾಡು' ನೀಡುವ ಐಡಿಯಾ ಮಾಡಿರುವವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಅಪ್ಪಟ ಅಭಿಮಾನಿಗಳು. ['ದೊಡ್ಮನೆ ಹುಡ್ಗ' ಚಿತ್ರದ ಬಗ್ಗೆ ಕೇಳಿಬಂದಿರುವ ಹೊಸ ಗಾಸಿಪ್ ಇದೇ..]


ಇದು ಪುನೀತ್ ರವರ 25ನೇ ಸಿನಿಮಾ

ಎಲ್ಲರಿಗೂ ಗೊತ್ತಿರುವ ಹಾಗೆ 'ದೊಡ್ಮನೆ ಹುಡ್ಗ' ಪುನೀತ್ ರಾಜ್ ಕುಮಾರ್ ಅಭಿನಯದ 25ನೇ ಚಿತ್ರ. ಸಿಲ್ವರ್ ಜ್ಯುಬಿಲಿ ಸಂಭ್ರಮವನ್ನ ಇಮ್ಮಡಿಗೊಳಿಸಲು ಅಭಿಮಾನಿಗಳು ಈ ಪ್ಲಾನ್ ಮಾಡಿದ್ದಾರೆ.


ಗಣೇಶ್ ಸ್ವೀಟ್ಸ್ ವತಿಯಿಂದ ರಾಜ್ ಕುಮಾರ್ ಲಾಡು

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ 'ಗಣೇಶ್ ಸ್ವೀಟ್ಸ್' ರವರ ವತಿಯಿಂದ ಪ್ರೇಕ್ಷಕರಿಗೆ 'ರಾಜ್ ಕುಮಾರ್ ಲಾಡು' ವಿತರಿಸಲಾಗುತ್ತದೆ. (ಬೆಂಗಳೂರಿನ ಮುಖ್ಯ ಚಿತ್ರಮಂದಿರದಲ್ಲಿ ಮಾತ್ರ)


ಅಭಿಮಾನಿಗಳಿಂದ 'ದೊಡ್ಮನೆ ಬಿರಿಯಾನಿ'

ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬಿರಿಯಾನಿಗೆ ಹಣ ಸುರಿಯುತ್ತಿದ್ದಾರೆ.


ಬರೋಬ್ಬರಿ 25 ಲಕ್ಷ

ಬಿರಿಯಾನಿ ಹಾಗೂ ಪುನೀತ್ ರಾಜ್ ಕುಮಾರ್ ರವರ ಕಟೌಟ್ ಗೆ ಬೃಹತ್ ಹೂವಿನ ಹಾರ ಹಾಕಲು ಅಪ್ಪು ಅಭಿಮಾನಿಗಳು ಬರೋಬ್ಬರಿ 25 ಲಕ್ಷ ಖರ್ಚು ಮಾಡುತ್ತಿದ್ದಾರೆ.


ಸಿಹಿ ಓಕೆ ಬಿರಿಯಾನಿ ಯಾಕೆ?

'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಕೂಡ ಬಿರಿಯಾನಿ ತಯಾರಕ.! ರಸ್ತೆ ಬದಿಯಲ್ಲಿ ಬಿರಿಯಾನಿ ಅಂಗಡಿ ನಡೆಸುವ ಯುವಕನ ಪಾತ್ರದಲ್ಲಿ ಅಪ್ಪು ಅಭಿನಯಿಸಿದ್ದಾರೆ. ಇದನ್ನು ತಿಳಿದ ಕೂಡಲೆ ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಬಿರಿಯಾನಿ ವಿತರಿಸಲು ಅಪ್ಪು ಫ್ಯಾನ್ಸ್ ನಿರ್ಧರಿಸಿದ್ದಾರೆ. ಅಂದ್ಹಾಗೆ, ಅಭಿಮಾನಿಗಳು ತಯಾರಿಸುವ ಬಿರಿಯಾನಿಗೆ 'ದೊಡ್ಮನೆ ಬಿರಿಯಾನಿ' ಅಂತ ನಾಮಕರಣ ಕೂಡ ಮಾಡಲಾಗಿದೆ.


'ದೊಡ್ಮನೆ ಹುಡ್ಗ' ಬಿಡುಗಡೆ ಯಾವಾಗ?

ಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್, ಅಂಬರೀಶ್, ಸುಮಲತಾ, ಭಾರತಿ ವಿಷ್ಣುವರ್ಧನ್ ಅಭಿನಯದ ದುನಿಯಾ ಸೂರಿ ನಿರ್ದೇಶನದ 'ದೊಡ್ಮನೆ ಹುಡ್ಗ' ಸೆಪ್ಟೆಂಬರ್ 30 ರಂದು ಬಿಡುಗಡೆ ಆಗಲಿದೆ.


English summary
Kannada Movie 'Dodmane Hudga' is all set to release on September 30th. Audience at the main theatre (Bengaluru) will also be served 'Dodmane Biriyani' and 'Rajkumar Laadu' which is being arranged by Puneeth Fans.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada