»   » ದೊಡ್ಮನೆಯಿಂದ ಅಭಿಮಾನಿಗಳಿಗೆ ಸಂತಸದ ಸುದ್ದಿ

ದೊಡ್ಮನೆಯಿಂದ ಅಭಿಮಾನಿಗಳಿಗೆ ಸಂತಸದ ಸುದ್ದಿ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ. ಹೌದು ಪುನೀತ್ ರಾಜ್ ಕುಮಾರ್ ಅವರ 24ನೇ ಸಿನಿಮಾ 'ಚಕ್ರವ್ಯೂಹ' ಬಿಡುಗಡೆ ಹಂತದಲ್ಲಿರುವ ಶುಭ ಸಂದರ್ಭದಲ್ಲಿ 25ನೇ ಸಿನಿಮಾ 'ದೊಡ್ಮನೆ ಹುಡುಗ'ದಿಂದ ಹ್ಯಾಪಿ ನ್ಯೂಸ್ ಒಂದು ಹೊರಬಿದ್ದಿದೆ.

ನಿರ್ದೇಶಕ ದುನಿಯಾ ಸೂರಿ ಆಕ್ಷನ್-ಕಟ್ ಹೇಳಿರುವ 'ದೊಡ್ಮನೆ ಹುಡುಗ' ಚಿತ್ರದ ಮಾತಿನ ಭಾಗ ಮುಕ್ತಾಯಗೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ತೊಡಗಲಿದೆ.[ಪವರ್ ಸ್ಟಾರ್ 'ದೊಡ್ಮನೆ ಹುಡುಗ' ಪಕ್ಕಾ ಲೋಕಲ್ ಫ್ಲೇವರ್ ಕಣ್ರೀ]


'Dodmane Huduga' completes shooting the talkie portion

ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ನಟಿ ರಾಧಿಕಾ ಪಂಡಿತ್ ಅವರು ಕಾಣಿಸಿಕೊಂಡಿದ್ದಾರೆ. ಇನ್ನು ವಿಶೇಷವಾಗಿ ಚಿತ್ರದಲ್ಲಿ ಸುಮಲತಾ ಅಂಬರೀಶ್, ನಟ ಅಂಬರೀಶ್ ಮತ್ತು ಭಾರತಿ ವಿಷ್ಣುವರ್ಧನ್ ಅವರು ಕಾಣಿಸಿಕೊಂಡಿದ್ದಾರೆ.


ಈಗಾಗಲೇ 'ದೊಡ್ಮನೆ ಹುಡುಗ' ಚಿತ್ರದ ಮಾತಿನ ಭಾಗದ ಶೂಟಿಂಗ್ ಮುಕ್ತಾಯಗೊಳಿಸಿರುವ ಚಿತ್ರತಂಡ ಆಗಸ್ಟ್ ತಿಂಗಳಿನಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.[ಅಪ್ಪುಗೆ, 'ಚಕ್ರವ್ಯೂಹ' 25ನೇ ಚಿತ್ರನಾ, ಅಥವಾ 'ದೊಡ್ಮನೆ ಹುಡುಗ'ನಾ?]


ಇನ್ನು ಈ ಸಿನಿಮಾ ಪಕ್ಕಾ ಲೋಕಲ್ ಫ್ಲೇವರ್ ನಲ್ಲಿ ಮೂಡಿಬಂದಿದ್ದು, ಕೋಲಾರ, ಮಂಡ್ಯ ಮತ್ತು ಹುಬ್ಬಳ್ಳಿ ಭಾಷೆಯನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಮೂಲಕ ಕರ್ನಾಟಕದ ಭಾಷಾ ವೈವಿಧ್ಯತೆಯನ್ನು ಸೆರೆ ಹಿಡಿಯಲಾಗಿದೆ.


ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಪೋಸ್ಟರ್ ಗಳು ಹಾಗೂ ಶೂಟಿಂಗ್ ಸ್ಟಿಲ್ ಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು ಮಾತ್ರವಲ್ಲದೇ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲೂ ಕಾತರತೆ ಹೆಚ್ಚುವಂತೆ ಮಾಡಿದೆ. ಚಿತ್ರದ ಶೂಟಿಂಗ್ ಸ್ಟಿಲ್ಸ್ ಗಳನ್ನು ನೋಡಲು ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸಿ.


-
-
-
-
-
-
-
-
-
-
-
-
-
English summary
Powerstar Puneeth Rajkumar and his 'Dodmane Huduga' team has completed shooting the talkie portion of the movie. The movie is directed by Duniya fame Soori and stars Puneeth Rajkumar and Radhika Pandit in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada