For Quick Alerts
  ALLOW NOTIFICATIONS  
  For Daily Alerts

  ಯಶ್ ರನ್ನ ರಜನಿಗೆ ಹೋಲಿಕೆ ಮಾಡಿದ ತಮಿಳು ಪತ್ರಕರ್ತರಿಗೆ ರಾಕಿ ಉತ್ತರ!

  |
  KGF Kannada Movie : ತಮ್ಮನ್ನ ರಜಿನಿಕಾಂತ್ ಗೆ ಹೋಲಿಸಿದ್ದಕ್ಕೆ ಯಶ್ ಹೇಳಿದ್ದು ಹೀಗೆ | FILMIBEAT KANNADA

  ಒಂದು ಒಳ್ಳೆಯ ಸಿನಿಮಾದ ಶಕ್ತಿ ಏನು ಎನ್ನುವುದಕ್ಕೆ ಉದಾಹರಣೆ 'ಕೆಜಿಎಫ್'. ಈ ಸಿನಿಮಾದ ಗತ್ತು ತಿಳಿದ ಮೇಲೆ ಇಡೀ ಭಾರತ ಚಿತ್ರರಂಗ ಸಲಾಮ್ ಹೊಡೆಯುತ್ತಿದೆ. ಕನ್ನಡದ ರೀತಿಯೇ ಬೇರೆ ಭಾಷೆಗಳಲ್ಲಿಯೂ ಸಿನಿಮಾ ದೊಡ್ಡ ಕ್ರೇಜ್ ಹುಟ್ಟುಹಾಕಿದೆ.

  ಇವತ್ತು ಕರ್ನಾಟಕ, ನಾಳೆ ಹೈದರಾಬಾದ್, ನಾಡಿದ್ದು ಮುಂಬೈ ಹೀಗೆ ಯಶ್ ಎಲ್ಲ ಕಡೆ ತಮ್ಮ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದ ನಂತರ ತಮಿಳು ನಾಡಿನಲ್ಲಿ ಚಿತ್ರದ ಪತ್ರಿಕಾಗೋಷ್ಠಿ ನೆರವೇರಿತ್ತು. ಅಲ್ಲಿನ ಪತ್ರಕರ್ತರ ಪ್ರಶ್ನೆಗೆ ಯಶ್ ಉತ್ತರ ನೀಡಿದರು.

  ಡಿಸೆಂಬರ್ 21ಕ್ಕೆ 'ಕೆಜಿಎಫ್' ಜೊತೆ 7 ದೊಡ್ಡ ಸಿನಿಮಾಗಳು ರಿಲೀಸ್

  ಇದೇ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಯಶ್ ರನ್ನು ಹೋಲಿಕೆ ಮಾಡಿ ತಮಿಳು ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದರು. ಆಗ ಯಶ್ ನಗುತ್ತಾ ತಮ್ಮ ಉತ್ತರ ನೀಡಿದ್ದಾರೆ. ಮುಂದೆ ಓದಿ...

  ರಜನಿಕಾಂತ್ ಗೆ ಹೋಲಿಕೆ

  ರಜನಿಕಾಂತ್ ಗೆ ಹೋಲಿಕೆ

  ತಮಿಳು ನಾಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಯಶ್ ಗೆ ಒಂದು ಪ್ರಶ್ನೆ ಕೇಳಿದರು. ''ಕರ್ನಾಟಕದಲ್ಲಿ ಬಸ್ ಕಂಡಕ್ಟರ್ ಆಗಿದ್ದ ರಜನಿ ಸರ್ ಇಲ್ಲಿ ಬಂದು ಸೂಪರ್ ಸ್ಟಾರ್ ಆದರು. ನಿಮ್ಮ ತಂದೆ ಕೂಡ ಒಬ್ಬ ಬಸ್ ಡ್ರೈವರ್ ಆಗಿದ್ದು, ಈಗ ನೀವು ಸಹ ತಮಿಳುನಾಡಿಗೆ ಪ್ರವೇಶ ಮಾಡಿದ್ದೀರಿ. ಮುಂದೆ ಇಲ್ಲಿಯೇ ರಜನಿ ರೀತಿ ಸಿನಿಮಾ ಮಾಡುವ ಆಲೋಚನೆ ಇದೆಯೇ.'' ಎಂದು ಕೇಳಿದರು.

  ಪ್ರಭಾಸ್ ಮತ್ತು ಯಶ್ ನಡುವೆ ಇಷ್ಟೊಂದು ಸಾಮ್ಯತೆ ಇದ್ಯಾ.?

  ರಜನಿ ಸರ್ ಸೂಪರ್ ಸ್ಟಾರ್

  ರಜನಿ ಸರ್ ಸೂಪರ್ ಸ್ಟಾರ್

  ಈ ಪ್ರಶ್ನೆಗೆ ಉತ್ತರ ನೀಡಿದ ಯಶ್ ''ನಮ್ಮ ತಂದೆ ಬಸ್ ಡ್ರೈವರ್ ಎನ್ನುವದು ನನಗೆ ಹೆಮ್ಮೆ ಇದೆ. ರಜನಿ ಸರ್ ಇವತ್ತು ಮಾಡಿರುವ ಸಾಧನೆ, ಅವರು ಸೂಪರ್ ಸ್ಟಾರ್ ಆಗಿರುವುದು ಅವರ ಶ್ರದ್ಧೆ ಮತ್ತು ಕೆಲಸದಿಂದ. ಪ್ರಾರಂಭದಲ್ಲಿ ನನಗೆ ಅಪ್ಪನ ಸ್ನೇಹಿತರು ರಜನಿ ಸರ್ ಬಸ್ ನಲ್ಲಿ ಕೆಲಸ ಮಾಡಿ ಸ್ಟಾರ್ ಆದರು. ನಿಮ್ಮ ತಂದೆ ಕೂಡ ಬಸ್ ನಲ್ಲಿದ್ದಾರೆ, ನೀನು ಕೂಡ ಹೆಸರು ಮಾಡುತ್ತೀಯ ಎಂದಿದ್ದರು.'' ಎಂದು ಮಾತು ಪ್ರಾರಂಭ ಮಾಡಿದರು.

  ಈ 'ಒಬ್ಬ ವ್ಯಕ್ತಿ' ಸಹಾಯದಿಂದಲೇ ತೆಲುಗು, ಹಿಂದಿಯಲ್ಲಿ 'ಕೆಜಿಎಫ್' ಘರ್ಜಿಸುತ್ತಿದೆ.!

  ಹೋಲಿಕೆ ಮಾಡುವುದು ತಪ್ಪು

  ಹೋಲಿಕೆ ಮಾಡುವುದು ತಪ್ಪು

  ''ರಜನಿಕಾಂತ್ ಸರ್ ಕಂಡಕ್ಟರ್ ಆಗಿದ್ದಾಗಲೇ ಅವರ ಸ್ಟೈಲ್ ಹಾಗಿತ್ತು. ಅವರು ಟಿಕೆಟ್ ಕೊಡುತ್ತಿದ್ದ ರೀತಿ, ವಿಜಲ್ ಹೊಡೆಯುತ್ತಿದ್ದ ರೀತಿಯ ಡಿಫರೆಂಟ್ ಆಗಿತ್ತು. 'ಸ್ಟೈಲ್' ಎನ್ನುವುದು ಅವರ ಜೊತೆಗೆ ಇತ್ತು. ನಮ್ಮನ್ನು ಅವರ ಜೊತೆಗೆ ಹೋಲಿಕೆ ಮಾಡುವುದು ತಪ್ಪು. ಅವರು ನಮಗಿಂತ ಕಿಲೋ ಮೀಟರ್ ಗಟ್ಟಲೆ ದೂರ ಪ್ರಯಾಣ ಮಾಡಿದ್ದಾರೆ. ನಾನು ಈಗ ತಾನೇ ಶುರು ಮಾಡಿದ್ದೇನೆ.'' ಎಂದು ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

  ಕರ್ನಾಟಕ ಟು ಕಾಲಿವುಡ್

  ಕರ್ನಾಟಕ ಟು ಕಾಲಿವುಡ್

  ತಮಿಳುನಾಡಿನಲ್ಲಿ 'ಕೆಜಿಎಫ್' ಸಿನಿಮಾವನ್ನು ನಟ ವಿಶಾಲ್ ಹಂಚಿಕೆ ಮಾಡುತ್ತಿದ್ದಾರೆ. ವಿಶೇಷ ಅಂದರೆ, ನಟ ವಿಶಾಲ್ ತಂದೆ ಕೂಡ ಮೂಲತಃ ಕರ್ನಾಟಕದವರು. ಅವರ ಮಗ ವಿಶಾಲ್ ತಮಿಳಿನ ಸ್ಟಾರ್ ನಟ. ಉಳಿದಂತೆ, ಅರ್ಜುನ್ ಸರ್ಜಾ ಕೂಡ ಕರುನಾಡಿನಿಂದ ಹೋಗಿ ಅಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.

  ತಮಿಳಿನಲ್ಲಿ ದೊಡ್ಡ ಸ್ಪರ್ಧೆ

  ತಮಿಳಿನಲ್ಲಿ ದೊಡ್ಡ ಸ್ಪರ್ಧೆ

  ಡಿಸೆಂಬರ್ 21ಕ್ಕೆ 'ಕೆಜಿಎಫ್' ಸಿನಿಮಾ ಭಾರತದಾದ್ಯಂತ ಬಿಡುಗಡೆಯಾಗುತ್ತಿದೆ. ತಮಿಳಿನಲ್ಲಿ ಧನುಷ್ ನಟನೆಯ 'ಮಾರಿ 2' ವಿಜಯ್ ಸೇತುಪತಿ ಅಭಿನಯದ 'ಸೀತಾಕತ್ತಿ' ಸಿನಿಮಾಗಳು ಅದೇ ದಿನ ರಿಲೀಸ್ ಆಗುತ್ತಿದೆ. ಆ ದಿನ ಈ ಮೂರು ಸಿನಿಮಾಗಳ ಮಧ್ಯೆ ಮಹಾಯುದ್ಧ ನಡೆಯಲಿದೆ.

  English summary
  'Don't compare me to Rajinikanth sir' - Kannada actor Yash spoke about Rajinikanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X