»   » ಪುನೀತ್ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಭಾರತಿ ವಿಷ್ಣು

ಪುನೀತ್ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಭಾರತಿ ವಿಷ್ಣು

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಅವರ 'ದೊರೆ' ಚಿತ್ರದಲ್ಲಿ ತಾಯಿ ಪಾತ್ರ ಪೋಷಿಸಿದ್ದ ಡಾ.ಭಾರತಿ ವಿಷ್ಣುವರ್ಧನ್ ಅವರು ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಭಾರತಿ ಅವರು ಪ್ರಮುಖ ಪಾತ್ರ ಪೋಷಿಸಲಿದ್ದಾರೆ. ಚಿತ್ರದಲ್ಲಿ ಅವರದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಕ್ಕನ ಪಾತ್ರ. ಜೊತೆಗೆ ಸುಮಲತಾ ಅವರು ಅಂಬಿಗೆ ಜೋಡಿಯಾಗಿ ಚಿತ್ರದಲ್ಲಿರುತ್ತಾರೆ. [ಸೂರಿ, ಪುನೀತ್ ಸಂಗಮದ ದೊಡ್ಮನೆ ಹುಡುಗ ಶುರು]

Bharathi Vishnuvardhan

ವರನಟ ಡಾ.ರಾಜ್ ಕುಮಾರ್ ಅವರೊಂದಿಗೆ ಸರಿಸುಮಾರು 28 ಚಿತ್ರಗಳಲ್ಲಿ ಭಾರತಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಜಾಕಿ, ಅಣ್ಣಾಬಾಂಡ್ ಚಿತ್ರಗಳ ಬಳಿಕ ಸೂರಿ ಹಾಗೂ ಪುನೀತ್ ಜೊತೆಯಾಗಿ ಅಭಿನಯಿಸುತ್ತಿರುವ ಮೂರನೇ ಚಿತ್ರ ಇದಾಗಿದೆ.

ಈ ಮುಂಚೆ ಚಿತ್ರಕ್ಕೆ ಗೋಲ್ಡನ್ ಗರ್ಲ್ ರಮ್ಯಾ ನಾಯಕಿ ಎಂದುಕೊಳ್ಳಲಾಗಿತ್ತು. ಆದರೆ ಸಂಭಾವನೆ ವಿಚಾರವಾಗಿ ಅವರು ಚಿತ್ರದಿಂದ ದೂರ ಸರಿದರು. ಸದ್ಯಕ್ಕೆ ನಾಯಕಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಈ ಬಾರಿ ಸೂರಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಸೂರಿ ಅವರು ಸದ್ಯಕ್ಕೆ ದೊಡ್ಮನೆ ಹುಡುಗನ ಚಿತ್ರಕಥೆಯನ್ನು ತಿದ್ದುವುದರಲ್ಲಿ ಹಾಗೂ ನಾಯಕಿಯ ಆಯ್ಕೆಯಲ್ಲಿ ಬಿಜಿಯಾಗಿದ್ದಾರೆ. ಇನ್ನೊಂದು ಕಡೆ ಪುನೀತ್ ಅವರು 'ರಣವಿಕ್ರಮ' ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಇದಾದ ಬಳಿಕ 'ದೊಡ್ಮನೆ ಹುಡುಗ' ಚಿತ್ರೀಕರಣ ಆರಂಭವಾಗಲಿದೆ ಎನ್ನುತ್ತವೆ ಮೂಲಗಳು. (ಫಿಲ್ಮಿಬೀಟ್ ಕನ್ನಡ)

English summary
Sandalwood veteran actress Dr Bharathi Vishnuvardhan to play an important role in power star Puneeth Rajakumar film for the first time. The actress is playing the role of elder sister to Dr Ambarish in this film 'Dodmane Huduga'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada