»   » ಹಳೆ ಪ್ರಿಂಟು ಹೊಸ ಸೌಂಡ್ ಸಿಸ್ಟಂನಲ್ಲಿ ಅಣ್ಣಾವ್ರ ಚಿತ್ರ

ಹಳೆ ಪ್ರಿಂಟು ಹೊಸ ಸೌಂಡ್ ಸಿಸ್ಟಂನಲ್ಲಿ ಅಣ್ಣಾವ್ರ ಚಿತ್ರ

Posted By:
Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಅವರ ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿ ಎಷ್ಟೋ ವರ್ಷಗಳೇ ಉರುಳಿ ಹೋಗಿವೆ. ಕಿರುತೆರೆಯಲ್ಲಂತೂ ಅಣ್ಣಾವ್ರ ಚಿತ್ರಗಳು ಆಗಾಗ ಮೂಡಿಬರುತ್ತಲೇ ಇರುತ್ತವೆ. ಆದರೆ ಚಿತ್ರಮಂದಿರದಲ್ಲಿ ನೋಡೋ ಮಜಾ ಟಿವಿಯಲ್ಲಿ ನೋಡಿದರೆ ಇರುತ್ತಾ ಹೇಳಿ.

ಅಣ್ಣಾವ್ರು ಅಭಿನಯದಲ್ಲಿ ಬಂದಂತಹ ಕಟ್ಟ ಕಡೆಯ ಬಾಂಡ್ ಚಿತ್ರ 'ಆಪರೇಷನ್ ಡೈಮಂಡ್ ರಾಕೆಟ್'. 1978ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ದೊರೆ ಭಗವಾನ್ ಆಕ್ಷನ್ ಕಟ್ ಹೇಳಿದ್ದಾರೆ. ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಪ್ರಿಂಟ್ ಹಳೆಯದಾದರೂ ಹೊಸ ಯುಎಫ್ಒ ಹಾಗೂ ಕ್ಯೂಬ್ ಸಿಸ್ಟಂನಲ್ಲಿ ಇನ್ನಷ್ಟು ಸೊಗಸಾಗಿ ಕೇಳಬಹುದು. ಈ ಚಿತ್ರದ ವಿತರಕರು ಎಂ ಮುನಿರಾಜು. ರಾಜ್ಯದಾದ್ಯಂತ ಒಟ್ಟು 48 ಚಿತ್ರಮಂದಿರಗಳಲ್ಲಿ 'ಆಪರೇಷನ್ ಡೈಮಂಡ್ ರಾಕೆಟ್' ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

Operation Diamond Racket

ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ನಾಲ್ಕು ಆಟಗಳನ್ನು ಸವಿಯಬಹುದು. ಈಗಿನ ಚಿತ್ರಗಳು 20 ಕೇಂದ್ರಗಳಲ್ಲಿ ಬಿಡುಗಡೆಯಾಗುವುದೇ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಅಣ್ಣಾವ್ರ ಚಿತ್ರ 48 ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.

ಇನ್ನು ಚಿತ್ರದ ವಿಶೇಷಗಳ ಬಗ್ಗೆ ಹೇಳುವುದಾದರೆ, ಅಣ್ಣಾವ್ರು ಮೊಟ್ಟ ಮೊದಲ ಬಾರಿಗೆ ಹಾಡಿದ ಆಂಗ್ಲ ಮಿಶ್ರಿತ ಹಾಡು ಈ ಚಿತ್ರದಲ್ಲಿದೆ. "If you Come today...it is too early...if you come tomorrow it is too late....you pick your time" ಎಂಬ ಹಾಡಿನ ಜೊತೆಗೆ ಅಲ್ಲಿ ಇಲ್ಲಿ ನೋಡುವೆ ಏಕೆ..ನೀ ನಡುಗುವೆಯೇಕೆ..ಎಂಬ ಹಾಡುಗಳು ಜನಪ್ರಿಯ.

ಭಕ್ತವತ್ಸಲಂ ಅವರ ಸಂಕಲನ, ಪಿಎಸ್ ಪ್ರಕಾಶ್ ಅವರ ಛಾಯಾಗ್ರಹಣ, ಚಿ.ಉದಯಶಂಕರ್ ಅವರ ಸಾಹಿತ್ಯ ಹಾಗೂ ಸಂಭಾಷಣೆ, ಬಿ ಛಲಂ ಅವರ ಕಲಾ ನಿರ್ದೇಶನ, ವೈ ಶಿವಯ್ಯ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಈಗ್ಗೆ ಮೂವತ್ತೈದು ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರ ಈಗ ಅದ್ದೂರಿಯಾಗಿ ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಅಣ್ಣಾವ್ರನ್ನು ಆರಾಧಿಸುವ ಅಭಿಮಾನಿಗಳಿಗೆ ಇದಕ್ಕಿಂತಲೂ ಸೌಭಾಗ್ಯ ಬೇಕೆ? ಪದ್ಮಪ್ರಿಯಾ, ಟೈಗರ್ ಪ್ರಭಾಕರ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Kannada matinee idol Dr.Rajkumar's last bond movie Operation Diamond Racket releases about 48 theaters in Karnataka on 31st May 2013. The movie releasing again after 35 years in a grand style.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada