For Quick Alerts
  ALLOW NOTIFICATIONS  
  For Daily Alerts

  ಯಾರೂ ಅಳಿಸಲಾಗದ ರಾಜ್‌ಕುಮಾರ್ ಬರೆದ ದಾಖಲೆಗಳಿವು

  |

  ಸಿನಿಮಾವೊಂದು ಎರಡು ವಾರ ಓಡಿದರೂ ಸಮಾರಂಭಗಳು ಮಾಡಿ ಬಡಾಯಿ ಕೊಚ್ಚಿಕೊಳ್ಳುವ ಕಾಲವಿದು. ರಾಜ್‌ಕುಮಾರ್ ಅಭಿನಯದ ಹಲವು ಸಿನಿಮಾಗಳು ವರ್ಷಾನುಗಟ್ಟಲೆ ಓಡಿದ್ದವು.

  ರಾಜ್‌ಕುಮಾರ್ ಅವರ ಹೆಸರಿನಲ್ಲಿರುವ ದಾಖಲೆಗಳು ಅಸಂಖ್ಯ. ದಾಖಲೆಗಾಗಿ ಎಂದೂ ಸಿನಿಮಾ ಮಾಡಿದವರಲ್ಲ ರಾಜ್‌ಕುಮಾರ್, ಒಳ್ಳೆಯ ಸಿನಿಮಾ ಮಾಡುವುದಷ್ಟೆ ಅವರ ಉದ್ದೇಶವಾಗಿತ್ತು, ದಾಖಲೆಗಳು ತಾನಾಗಿಯೇ ಆಗುತ್ತಾ ಸಾಗಿದವು.

  ರಾಜ್‌ ಕುಮಾರ್ ಅವರ ಸಿನಿಮಾಗಳು ನಿರ್ಮಿಸಿದ ದಾಖಲೆಗಳು, ಸ್ವತಃ ರಾಜ್‌ಕುಮಾರ್ ಹೆಸರಿನಲ್ಲಿರುವ ದಾಖಲೆಗಳ ಪಟ್ಟಿ ಇಲ್ಲಿದೆ.

  ರಾಜ್‌ಕುಮಾರ್ ಅವರು ಅಭಿನಯಿಸಿದ 208 ಸಿನಿಮಾಗಳ ಪೈಕಿ 95% ಸಿನಿಮಾಗಳು ಬಾಕ್ಸ್‌ ಆಫೀಸ್ ಹಿಟ್. ಈಗಿನ ಕಾಲದಲ್ಲಿ ವರ್ಷಕ್ಕೆ ಒಂದೊ, ಎರಡೋ ಸಿನಿಮಾಗಳು ಬಾಕ್ಸ್‌ ಆಫೀಸ್ ಹಿಟ್ ಆಗುತ್ತವೆ. ಅತಿ ಹೆಚ್ಚು ಸಕ್ಸಸ್ ರೇಶ್ಯೋ ಇದ್ದ ನಟ ಅವರು.

  ಅತಿ ಹೆಚ್ಚು ಸಿನಿಮಾದಲ್ಲಿ ನಾಯಕನಾಗಿ ನಟನೆ

  ಅತಿ ಹೆಚ್ಚು ಸಿನಿಮಾದಲ್ಲಿ ನಾಯಕನಾಗಿ ನಟನೆ

  ರಾಜ್‌ ಕುಮಾರ್ ಅವರು 208 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಂಗಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದವರು ಹಲವರಿದ್ದಾರೆ, 208 ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ ವ್ಯಕ್ತಿ ಅವರೊಬ್ಬರೇ. ಅಷ್ಟೆ ಅಲ್ಲ 50 ವರ್ಷಗಳ ಕಾಲ ಒಂದೇ ಭಾಷೆಯ ಸಿನಿ ಉದ್ಯಮದಲ್ಲಿ ಉಳಿದ ನಟರೂ ಅವರೊಬ್ಬರೇ.

  ಇದೊಂದು ಅದ್ಭುತ ವಿಶ್ವದಾಖಲೆ

  ಇದೊಂದು ಅದ್ಭುತ ವಿಶ್ವದಾಖಲೆ

  ಇಡೀಯ ವಿಶ್ವದಾದ್ಯಂತ ಅತಿ ಹೆಚ್ಚು ಮೂರ್ತಿಗಳು ಅಥವಾ ವಿಗ್ರಹಗಳು ಇರುವ ಏಕೈಕ ನಟ ನಮ್ಮ ವರನಟ ಡಾ.ರಾಜ್‌ಕುಮಾರ್. ಕರ್ನಾಟಕದಲ್ಲಿ ಗಾಂಧಿ ವಿಗ್ರಹಗಳ ನಂತರ ಅತಿ ಹೆಚ್ಚು ಅಧಿಕೃತ ವಿಗ್ರಹಗಳಿರುವುದು ರಾಜ್‌ ಕುಮಾರ್ ಅವರದ್ದು.

  ಈ ದಾಖಲೆ ಮುರಿಯಲು ಸಾಧ್ಯವೇ ಇಲ್ಲ

  ಈ ದಾಖಲೆ ಮುರಿಯಲು ಸಾಧ್ಯವೇ ಇಲ್ಲ

  ರಾಜ್‌ಕುಮಾರ್ ಅವರು 208 ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ಅಷ್ಟೂ ಸಿನಿಮಾಕ್ಕೆ 'ಯು' ಪ್ರಮಾಣ ಪತ್ರ ಮಾತ್ರವೇ ದೊರಕಿದೆ. ಯು/ಎ ಸಹ ಅಲ್ಲ. ಅಭಿನಯಿಸಿದ ಎಲ್ಲಾ ಸಿನಿಮಾಗಳಿಗೆ 'ಯು' ಪ್ರಮಾಣ ಪತ್ರ ಪಡೆದಿರುವುದು ಸಹ ಅದ್ಭುತ ದಾಖಲೆಯೇ.

  ಈ ಸಾಧನೆ ಈಗಿನ ಸಮಯದಲ್ಲಿ ಕಲ್ಪಿಸಲೂ ಸಾಧ್ಯವಿಲ್ಲ

  ಈ ಸಾಧನೆ ಈಗಿನ ಸಮಯದಲ್ಲಿ ಕಲ್ಪಿಸಲೂ ಸಾಧ್ಯವಿಲ್ಲ

  ಒಬ್ಬ ನಾಯಕ ನಟ ಒಂದು ವರ್ಷಕ್ಕೆ ಎಷ್ಟು ಸಿನಿಮಾಗಳಲ್ಲಿ ನಟಿಸಬಹುದು, ಎರಡು-ಮೂರು-ನಾಲ್ಕು ಅಷ್ಟೆ ಅಲ್ಲವೆ. ರಾಜ್‌ ಕುಮಾರ್ ಅವರು ಒಂದೇ ವರ್ಷದಲ್ಲಿ 14 ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದರು. 1964 ರಲ್ಲಿ 14 ಸಿನಿಮಾಗಳು ಹಾಗೂ 1968 ರಲ್ಲಿ 14 ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಅವು ಅದೇ ವರ್ಷದಲ್ಲಿ ಬಿಡುಗಡೆ ಸಹ ಆಗಿದ್ದವು.

  ಅತಿ ಹೆಚ್ಚು ಪೌರಾಣಿಕ, ಭಕ್ತಿ ಪ್ರಧಾನ ಸಿನಿಮಾ

  ಅತಿ ಹೆಚ್ಚು ಪೌರಾಣಿಕ, ಭಕ್ತಿ ಪ್ರಧಾನ ಸಿನಿಮಾ

  ರಾಜ್‌ ಕುಮಾರ್ ಅವರು ಅಭಿನಯಿಸಿದಷ್ಟು ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಸಿನಿಮಾಗಳಲ್ಲಿ ಇನ್ನಾವ ನಟರೂ ಸಹ ಅಭಿನಯಿಸಿಲ್ಲ. ಅವರು ಯಾವ ಸಿನಿಮಾದಲ್ಲಿಯೂ ಸಹ ಸಿಗರೇಟು ಹಾಗೂ ಮದ್ಯ ಸೇವನೆ ಮಾಡಿಲ್ಲ.

  ಹಲವು ಮೊದಲುಗಳಿಗೆ ಮೊದಲು ರಾಜ್‌ ಕುಮಾರ್

  ಹಲವು ಮೊದಲುಗಳಿಗೆ ಮೊದಲು ರಾಜ್‌ ಕುಮಾರ್

  ಗೌರವ ಡಾಕ್ಟರೇಟ್ ಪಡೆದ ಭಾರತದ ಮೊದಲ ನಟ, ಅಮೆರಿಕದ ಗೌರವಾನ್ವಿತ ಕೆಂಟಕಿ ಕರ್ನಲ್ ಪ್ರಶಸ್ತಿ ಪಡೆದ ಮೊದಲ ರಂಗಭೂಮಿ ಹಾಗೂ ಸಿನಿಮಾ ಕಲಾವಿದ ರಾಜ್‌ ಕುಮಾರ್.

  English summary
  Dr Rajkumar have many records in his names. Here is the list of records which is in Rajkumar's name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X