»   » ಸದ್ಯದಲ್ಲೇ ಗಲ್ಫ್ ದೇಶಕ್ಕೆ ಹಾರಲಿರುವ ಡಾ.ರಾಜ್ ಅವರ 'ಬಬ್ರುವಾಹನ'

ಸದ್ಯದಲ್ಲೇ ಗಲ್ಫ್ ದೇಶಕ್ಕೆ ಹಾರಲಿರುವ ಡಾ.ರಾಜ್ ಅವರ 'ಬಬ್ರುವಾಹನ'

Posted By:
Subscribe to Filmibeat Kannada

ಕನ್ನಡಿಗರ ಹೆಮ್ಮೆಯ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ 'ಬಬ್ರುವಾಹನ' ಡಾ.ರಾಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಏಪ್ರಿಲ್ 22 ರಂದು ಆಧುನೀಕೃತಗೊಂಡು ರೀ-ರಿಲೀಸ್ ಆಗಿತ್ತು.

ಬೆಂಗಳೂರಿನ ಅನುಪಮ, ನವರಂಗ್ ಮತ್ತು ಉಮಾ ಚಿತ್ರಮಂದಿರಗಳಲ್ಲಿ ಈಗಲೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ 'ಬಬ್ರುವಾಹನ' ಸಿನಿಮಾ ಇದೀಗ ವಿದೇಶಕ್ಕೆ ಹಾರಲು ಸಜ್ಜಾಗಿದೆ.[ಅನುಪಮ, ನವರಂಗ್ ಮತ್ತು ಉಮಾ ಚಿತ್ರಮಂದಿರದಲ್ಲಿ 'ಬಬ್ರುವಾಹನ']

Dr Rajkumar Starring 'Babruvahana' all-set for Gulf

1977ನೇ ವರ್ಷದ 'ಬಬ್ರುವಾಹನ' ಟೆಕ್ನಿಕಲಿ ಅಪ್ ಗ್ರೇಡ್ ಆಗಿ ಹೊಸ ರೂಪದಲ್ಲಿ ಕಳೆದ ತಿಂಗಳಿನಲ್ಲಿ ಮರು ಬಿಡುಗಡೆ ಆಗಿತ್ತು. ರಾಜ್ಯದಲ್ಲಿ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿರುವ 'ಬಬ್ರುವಾಹನ' ಮಧ್ಯಪ್ರಾಚ್ಯದ ಒಂದಿಷ್ಟು ದೇಶಗಳು ಮತ್ತು ಯುಎಇಯಲ್ಲಿ ಮೇ ಕೊನೆಯ ವಾರದಲ್ಲಿ ಬಿಡುಗಡೆಯಾಗಲು ಸಿದ್ದವಾಗಿವೆ.[ಫೋಟೋ ಗ್ಯಾಲರಿ; ಡಾ.ರಾಜ್ ರವರ ಅಪರೂಪದ ಭಾವಚಿತ್ರಗಳು]

Dr Rajkumar Starring 'Babruvahana' all-set for Gulf

ಈಗಾಗಲೇ ದುಬೈ, ಶಾರ್ಜಾ, ಅಭುದಾಬಿ, ಓಮನ್ ನ ಸಲಾಲಾ, ಮಸ್ಕತ್ ಮತ್ತು ಸೋಹರ್ ನಲ್ಲಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ 'ಬಬ್ರುವಾಹನ' ಸಿನಿಮಾ ಪ್ರದರ್ಶನ ಕಾಣಲು ತಯಾರಾಗಿ ನಿಂತಿದೆ.

ವಿದೇಶದಲ್ಲಿರುವ ಕನ್ನಡಿಗರ ಹಾಗೂ ಡಾ.ರಾಜ್ ಅವರ ಅಭಿಮಾನಿಗಳ ಒತ್ತಾಯದ ಮೇರೆಗೆ ಈ ಚಿತ್ರವನ್ನು ವಿದೇಶದಲ್ಲಿ ರೀ-ರಿಲೀಸ್ ಮಾಡಲು ಚಿತ್ರತಂಡದವರು ಯೋಜನೆ ಹಾಕಿಕೊಂಡಿದ್ದಾರೆ. ಚಿತ್ರದ ಪ್ರದರ್ಶನದ ಸಮಯ ಮತ್ತು ಸ್ಥಳಗಳನ್ನು ಇನ್ನೇನು ಕೆಲವೇ ದಿನಗಳಲ್ಲಿ ತಿಳಿಸಿಕೊಡಲಾಗುವುದು.[ಕಲಾರತ್ನ ಡಾ.ರಾಜ್ ಅಭಿನಯದ ಅತ್ಯುತ್ತಮ 10 ಚಿತ್ರಗಳು]

Dr Rajkumar Starring 'Babruvahana' all-set for Gulf

ಸುಮಾರು 50 ರಿಂದ 60 ಲಕ್ಷ ರೂಪಾಯಿ ಖರ್ಚು ಮಾಡಿ ಈ ಚಿತ್ರಕ್ಕೆ ಡಿಟಿಎಸ್ ಟೆಕ್ನಾಲಜಿ ಅಳವಡಿಸಿ 1977ರಲ್ಲಿ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಆಕ್ಷನ್-ಕಟ್ ಹೇಳಿದ್ದ 'ಬಬ್ರುವಾಹನ' ಚಿತ್ರಕ್ಕೆ ಹೊಸತನ ತುಂಬಲಾಗಿದೆ.

Dr Rajkumar Starring 'Babruvahana' all-set for Gulf

ಚಿತ್ರದಲ್ಲಿ ಡಾ.ರಾಜ್ ಕುಮಾರ್ ಅವರು ದ್ವಿಪಾತ್ರದಲ್ಲಿ ಮಿಂಚಿದ್ದು, ಇವರ ಜೊತೆ ನಾಯಕಿಯರಾಗಿ ಸರೋಜಾ ದೇವಿ, ಕಾಂಚನಾ, ಜಯಮಾಲಾ, ಖಳನಟ ವಜ್ರಮುನಿ, ತೂಗುದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್ ಮತ್ತು ರಾಮಕೃಷ್ಣ ಮುಂತಾದವರು ಪ್ರಮುಖವಾಗಿ ಕಾಣಿಸಿಕೊಂಡಿದ್ದರು.

English summary
Dr Rajkumar starrer the new old film, Babruvahana, that released last week is set for release in several Gulf centers later this month. The 1977 film which was digitally enhanced and given the latest sound technology was released last week to a good response all over Karnataka. The movie is directed by Hunsur Krishnamurthy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada