For Quick Alerts
  ALLOW NOTIFICATIONS  
  For Daily Alerts

  'ದೊಡ್ಮನೆ' ನಟರ ಮೇಲಿತ್ತು ಸಿದ್ಧಗಂಗಾ ಶ್ರೀಗಳ ಆಶೀರ್ವಾದ

  |
  Siddaganga Swamiji: ಡಾ ರಾಜ್ ಕುಮಾರ್ ಕುಟುಂಬಕ್ಕೆ ಇತ್ತು ಸಿದ್ದಗಂಗಾ ಶ್ರೀಗಳ ಆಶೀರ್ವಾದ | FILMIBEAT KANNADA

  ಏಪ್ರಿಲ್ 01, ನಡೆದಾಡುವ ದೇವರು, ಈ ಯುಗದ ದೇವತಾ ಮನುಷ್ಯ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟುಹಬ್ಬದ ಸವಿ ನೆನೆಪು. ಸ್ವಾಮೀಜಿ ಅವರಿಗೆ ಸಾವಿರಾರೂ ಸಂಖ್ಯೆಯ ಭಕ್ತರು ಇದ್ದಾರೆ. ಅದರಲ್ಲಿ

  ಡಾ ರಾಜ್ ಕುಮಾರ್ ಅವರ ಕುಟುಂಬವೂ ಒಂದು.

  ಶಿವಕುಮಾರ ಸ್ವಾಮೀಜಿಗಳ ಜೊತೆ ಅಣ್ಣಾವ್ರ ಕುಟುಂಬಕ್ಕೆ ವಿಶೇಷವಾದ ನಂಟಿದೆ. ದೊಡ್ಮನೆ ಸದಸ್ಯರಿಗೆ ಶ್ರೀಗಳ ಮೇಲೆ ಅಪಾರವಾದ ಗೌರವವಿದೆ. ಹಾಗಾಗಿಯೇ ವೈಯಕ್ತಿಕವಾಗಿಯೂ ಹಾಗೂ ತಮ್ಮ ಸಿನಿಮಾಗಳ ಯಶಸ್ಸಿಗಾಗಿಯೇ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದ ಸಂಪ್ರದಾಯ ನೋಡಬಹುದು.

  ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಚಿತ್ರರಂಗದ ಗಣ್ಯರು

  ಹಾಗ್ನೋಡಿದ್ರೆ, ರಾಜ್ ಕುಮಾರ್ ಅವರಿಗೆ ಇದ್ದ ಭಕ್ತಿ, ಗೌರವ ಅವರ ಮಕ್ಕಳಲ್ಲಿಯೂ ಕಾಣಬಹುದು. ತಂದೆಯಂತೆ ಮಕ್ಕಳ ಮೇಲೆ ಕೂಡ ಶಿವಕುಮಾರ ಸ್ವಾಮೀಜಿ ಅಭಯ ಹಸ್ತವಿತ್ತು. ಮುಂದೆ ಓದಿ....

  ಅಣ್ಣಾವ್ರಿಗೆ ಶ್ರೀಗಳ ಕಂಡ್ರೆ ಅಪಾರ ಗೌರವ

  ಅಣ್ಣಾವ್ರಿಗೆ ಶ್ರೀಗಳ ಕಂಡ್ರೆ ಅಪಾರ ಗೌರವ

  ಡಾ ರಾಜ್ ಕುಮಾರ್ ಅವರಿಗೂ ಸಿದ್ಧಗಂಗಾ ಮಠದ ಶ್ರೀಗಳನ್ನ ಕಂಡರೇ ಅಪಾರವಾದ ಗೌರವ. ಅನೇಕ ಕಾರ್ಯಕ್ರಮಗಳಲ್ಲಿ ಶಿವಕುಮಾರ ಸ್ವಾಮೀಜಿ ಅವರನ್ನ ಭೇಟಿ ಮಾಡಿರುವ ಡಾ ರಾಜ್, ಖುದ್ದು ಅವರ ಆಶೀರ್ವಾದವನ್ನ ಪಡೆದುಕೊಳ್ಳುತ್ತಿದ್ದರು. ಶ್ರೀಗಳ ಜೊತೆ ಅಣ್ಣಾವ್ರು ಕಾಣಿಸಿಕೊಂಡಿರುವ ಅಪರೂಪದ ಫೋಟೋ ಕೂಡ ಇದೆ.

  ಫೋಟೋ ಗ್ಯಾಲರಿ; ಡಾ.ರಾಜ್ ರವರ ಅಪರೂಪದ ಭಾವಚಿತ್ರಗಳು

  'ದೊಡ್ಮನೆ ಹುಡ್ಗ'ನಿಗೆ ಶ್ರೀಗಳು ಸಾಥ್

  'ದೊಡ್ಮನೆ ಹುಡ್ಗ'ನಿಗೆ ಶ್ರೀಗಳು ಸಾಥ್

  ವಿಶೇಷ ಅಂದ್ರೆ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ 'ದೊಡ್ಮನೆ ಹುಡ್ಗ' ಚಿತ್ರದ ಧ್ವನಿಸುರಳಿ ಬಿಡುಗಡೆ ಮಾಡಿದ್ದು ಇದೇ ಶಿವಕುಮಾರ ಸ್ವಾಮೀಜಿ. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸ್ವತಃ ಶ್ರೀಗಳು ಆಡಿಯೋ ರಿಲೀಸ್ ಮಾಡಿದ್ರು. ಈ ಸಿನಿಮಾ ಹಿಟ್ ಆಗಿದ್ದು ಇಲ್ಲಿ ಸ್ಮರಿಸಬಹುದು. ನಿನ್ನೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಪುನೀತ್, ಶ್ರೀಗಳ ಅಂತಿಮ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.

  ಶ್ರೀಗಳ ಅಂತಿಮ ದರ್ಶನ ಪಡೆದ ಪುನೀತ್: ಯಶ್, ಸುದೀಪ್, ಉಪ್ಪಿ ಸಂತಾಪ

  ರಾಘವೇಂದ್ರ ರಾಜ್ ಕುಮಾರ್ ಭೇಟಿ

  ರಾಘವೇಂದ್ರ ರಾಜ್ ಕುಮಾರ್ ಭೇಟಿ

  ರಾಜ್ ಕುಮಾರ್ ಅವರ ಎರಡನೇ ಪುತ್ರ ರಾಘವೇಂದ್ರ ರಾಜ್ ಕುಮಾರ್ ಕೂಡ ಕುಟುಂಬ ಸಮೇತ ಇಂದು ಶಿವಕುಮಾರ ಸ್ವಾಮೀಜಿಯ ಅಂತಿಮ ದರ್ಶನ ಪಡೆದುಕೊಂಡರು. ಅದಕ್ಕೂ ಮುಂಚೆ ಹಲವು ಸಲ ಮಠಕ್ಕೆ ಭೇಟಿ ನೀಡಿದ್ದ ರಾಘಣ್ಣ, ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರು.

  ಶ್ರೀಗಳಿಗೆ 'ಭಾರತ ರತ್ನ' ಕೊಡಿಸುವ ಯೋಗ್ಯತೆ ಯಾರಿಗೂ ಇಲ್ಲ: ಲೀಲಾವತಿ

  'ಟಗರು' ಚಿತ್ರೀಕರಣ ಆಗಿತ್ತು

  'ಟಗರು' ಚಿತ್ರೀಕರಣ ಆಗಿತ್ತು

  ಇತ್ತೀಚಿಗೆ ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಟಗರು' ಸಿನಿಮಾದ ಚಿತ್ರೀಕರಣ ಸಿದ್ಧಗಂಗಾ ಮಠದಲ್ಲಿ ನಡೆದಿತ್ತು. ಇದೇ ಮಠದಲ್ಲಿ ವಿದ್ಯಾಭ್ಯಾಸ ಮಾಡಿ ಪೊಲೀಸ್ ಅಧಿಕಾರಿಯಾಗುವ ಪಾತ್ರವನ್ನ ನಿಭಾಯಿಸಿದ್ದ ಶಿವಣ್ಣ, ಶ್ರೀಗಳ ಆಶೀರ್ವಾದ ಪಡೆಯುವ ದೃಶ್ಯವನ್ನ ಕೂಡ ಚಿತ್ರೀಕರಿಸಿದ್ದರು. ಆದ್ರೆ, ಶ್ರೀಗಳ ಅಂತಿಮ ದರ್ಶನ ಪಡೆಯಲು ಶಿವರಾಜ್ ಕುಮಾರ್ ಅವರಿಂದ ಸಾಧ್ಯವಾಗಲಿಲ್ಲ. ಯಾಕಂದ್ರೆ, ಸದ್ಯ ಅವರು ಅಮೇರಿಕಾದಲ್ಲಿದ್ದಾರೆ.

  ಶ್ರೀಗಳ ಅಂತಿಮ ದರ್ಶನ ಪಡೆಯಲು ಶಿವಣ್ಣನಿಗೆ ಸಾಧ್ಯ ಆಗಲಿಲ್ಲ

  English summary
  Dr rajkumar and his family members was maintained good relation with siddaganga mutt sree dr shivakumara swamiji.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X