For Quick Alerts
  ALLOW NOTIFICATIONS  
  For Daily Alerts

  ಕೈಬೀಸಿ ಕರೆಯುತ್ತಿದೆ 'ದಿಗ್ಗಜರ' ಜೋಡಿ ಪುತ್ಥಳಿ

  |

  ಕುಚುಕು ಗೆಳೆಯರು ಅಂದಾಕ್ಷಣ ಮೊದಲು ಕಣ್ಣ ಮುಂದೆ ಬರೋದು ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್. 'ನಾಗರಹಾವು' ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಈ ಜೋಡಿ ಕನ್ನಡಿಗರ ಹೃದಯದಲ್ಲಿ ಎಂದೆಂದೂ ಅಮರ.

  ಕುಚುಕು ಗೆಳೆಯರು, ಬೆಸ್ಟ್ ಫ್ರೆಂಡ್, ಆಪ್ತಮಿತ್ರ ಈ ಪದಗಳನ್ನ ಕೇಳಿದಾಗ ಥಟ್ ಅಂತ ನೆನಪಾಗುವುದೇ ವಿಷ್ಣು-ಅಂಬಿ ಜೋಡಿ. ಅಷ್ಟರ ಮಟ್ಟಿಗೆ ಇವರಿಬ್ಬರ ಸ್ನೇಹ ಅಜರಾಮರ. ಬದುಕಿದ್ದಾಗ ಇಬ್ಬರು ಅಣ್ಣತಮ್ಮಂದಿರಂತೆ ಇದ್ದರು. ವಿಷ್ಣು ಎಲ್ಲೋ ಅಂಬಿ ಅಲ್ಲಿ. ಅಂಬಿ ಎಲ್ಲೋ ವಿಷ್ಣು ಅಲ್ಲಿ ಎನ್ನುವಂತೆ ಒಬ್ಬರನ್ನ ಬಿಟ್ಟು ಮತ್ತೊಬ್ಬರು ಇರುತ್ತಿರಲಿಲ್ಲ.

  ರಾಜ್, ವಿಷ್ಣು, ಶಂಕ್ರಣ್ಣ ,ತೂಗುದೀಪ್ ಶ್ರೀನಿವಾಸ್ ಇಲ್ಲಿ ಎಲ್ಲರೂ ಒಂದೇ

  ಅಂಬಿ ನಿಧನರಾದಾಗ ಅಂಬಿ ಅಂತ್ಯಸಂಸ್ಕರಾವನ್ನ ಅಭಿಮಾನ್ ಸ್ಟುಡಿಯೋದಲ್ಲಿ ಮಾಡಿ ಎಂದು ಅದೇಷ್ಟೋ ಅಭಿಮಾನಿಗಳು ಕೇಳಿಕೊಂಡರು. ಇದ್ದಾಗಲೂ ಒಟ್ಟಿಗೆ ಇದ್ದರು. ಸತ್ತ ಮೇಲೂ ಅವರ ಸ್ನೇಹ ಹಾಗೆ ಉಳಿಯಲಿ ಎಂದು ಪ್ರಾರ್ಥಿಸಿದವರು ಇದ್ದಾರೆ. ಆದ್ರೆ, ಅದು ಸಾಧ್ಯವಾಗಲಿಲ್ಲ.

  ವಿಷ್ಣು ದಾದನ ಈ ಪುತ್ಥಳಿ ಮಾಡಿದ 'ಶಿಲ್ಪಿ'ಗೆ ಸುದೀಪ್ ಸಲ್ಯೂಟ್

  ಇದೀಗ, ಡಾ ವಿಷ್ಣು ಮತ್ತು ಅಂಬರೀಶ್ ಅವರ ಜೋಡಿ ಪುತ್ಥಳಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ರಾಜ್ಯದ ಬಹುತೇಕ ಕಡೆ ವಿಷ್ಣುವರ್ಧನ್ ಅವರ ಪುತ್ಥಳಿ ಇದೆ. ಆದರೆ ಇದೇ ಮೊದಲ ಬಾರಿಗೆ ಅಂಬಿ ಮತ್ತು ವಿಷ್ಣು ಪುತ್ಥಳಿಯನ್ನ ಒಟ್ಟಿಗೆ ಪ್ರತಿಷ್ಠಾಪನೆ ಮಾಡಲಾಗಿದೆ.

  ಧ್ರುವ 'ಪೊಗರು' ಚಿತ್ರದಲ್ಲಿ ರೆಬೆಲ್ ಸ್ಟಾರ್ ಗೆ ವಿಶೇಷ ಸ್ಥಾನ

  ಅಂದ್ಹಾಗೆ ಈ ಜೋಡಿ ಪುತ್ಥಳಿ ಇರೋದು ಚಾಮರಾಜಪೇಟೆಯ ಟಿ.ಆರ್ ಮಿಲ್ ಹತ್ತಿರ. ಇತ್ತೀಚಿಗಷ್ಟೆ ಈ ಜೋಡಿ ಪುತ್ಥಳಿ ಅನಾವರಣವಾಗಿದ್ದು, ರಾಜ್ಯದಲ್ಲಿ ವಿಷ್ಣು-ಅಂಬಿಯ ಜೋಡಿ ಪುತ್ಥಳಿ ಇದೇ ಮೊದಲು ಎನ್ನಲಾಗಿದೆ.

  English summary
  Kannada legendary actors dr vishnuvardhan and ambarish Statue inaugurated in Chamarajpet, its is first statue of Vishnu-ambi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X