»   » 'DubsMash' ಮಾಡುವ ಕಲಾವಿದರೇ ಎಚ್ಚರ.!

'DubsMash' ಮಾಡುವ ಕಲಾವಿದರೇ ಎಚ್ಚರ.!

Posted By:
Subscribe to Filmibeat Kannada

ಸಾಮಾಜಿಕ ಜಾಲತಾಣದಲ್ಲಿ 'ಡಬ್ ಸ್ಮಾಶ್' ಕಲಾವಿದರ ಸಂಖ್ಯೆ ಹೆಚ್ಚಾಗಿದೆ. ದಿನಕ್ಕೆ ಊಟ, ನಿದ್ದೆ ಮಾಡ್ತರೋ ಇಲ್ವೋ ಗೊತ್ತಿಲ್ಲ, ಒಂದು ಆದ್ರೂ ಡಬ್ ಸ್ಮಾಶ್ ವಿಡಿಯೋ ಮಾಡಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಾಕಲೇಬೇಕು, ಹಾಕ್ತಾರೆ ಕೂಡ.

ಇದು ಕೆಲವರಿಗೆ ಹವ್ಯಾಸ ಹಾಗೂ ವೃತ್ತಿಯೇ ಆಗಿರುತ್ತೆ. ಇದರಿಂದ ಕೆಲವರಿಗೆ ಕಿರಿಕಿರಿ ಉಂಟಾದರೇ, ಮತ್ತೆ ಕೆಲವರು ಇದನ್ನ ನೋಡಿ ಎಂಜಾಯ್ ಮಾಡ್ತಾರೆ. ಆದ್ರೆ, ಇಲ್ಲೊಂದು ಪ್ರತಿಭಾವಂತ ಯುವಕರ ತಂಡ 'ಡಬ್ ಸ್ಮಾಶ್' ಮಾಡುವ ಕಲಾವಿದರ ಕುರಿತು 'DubsMash-ಮಾಡಿದವರು ಮಟಾಶ್' ಎಂಬ ಕಿರುಚಿತ್ರವನ್ನ ತಯಾರಿಸಿ ಗಮನ ಸೆಳೆಯುತ್ತಿದೆ.

Dubsmash madidavaru matash short film

ಈ ಕಿರುಚಿತ್ರ ಪರಿಪೂರ್ಣ ಮನರಂಜನೆಯಿಂದ ಕೂಡಿದೆ. ಈ ಮನರಂಜನೆಯಲ್ಲೂ ಒಂದು ಗಂಭೀರ ಸಂದೇಶವಿದೆ. ದಿನಪೂರ್ತಿ ಡಬ್ ಸ್ಮಾಶ್ ಲೋಕದಲ್ಲಿ ಮುಳುಗಿರುವ ಕಲಾವಿದರು ಇದನ್ನ ನೋಡಲೇಬೇಕು. 'ಡಬ್ ಸ್ಮಾಶ್' ಎನ್ನುವುದು ಕೇವಲ ಫ್ಯಾಶನ್ ಆಗಿದ್ರೆ ಓಕೆ, ಆದ್ರೆ, ಅದೊಂದು ಕಾಂಪಿಟೇಶನ್ ಆದ್ರೆ ಅದರ ಪರಿಣಾಮ ಏನಾಗುತ್ತೆ ಎಂಬುದನ್ನ ನೋಡುಗರಿಗೆ ಅರ್ಥವಾಗುವ ರೀತಿಯಲ್ಲಿ ಚಿತ್ರೀಸಿದ್ದಾರೆ.

ಅಂದ್ಹಾಗೆ, ಈ ಕಿರುಚಿತ್ರವನ್ನ ಅಪ್ ಲೌಡ್ ಮಾಡಿರುವು 'ನಮ್ದು ಕೆ' ಯ್ಯೂಟ್ಯುಬ್ ಚಾನಲ್. ಸೋಶಿಯಾಲ್ ಮಿಡಿಯಾದಲ್ಲಿ ಈ ಕಿರುಚಿತ್ರ ಸಖತ್ ಸೌಂಡ್ ಮಾಡ್ತಿದೆ. ಮಾನಸ ಶರ್ಮಾ ಮತ್ತು ಶ್ರವಣ್ ಈ ಕಿರುಚಿತ್ರ ತಯಾರಿಸಿದ್ದು, ಸಂದೀಪ್, ರಜತ್, ಅನುಶ ವಿಶ್ವನಾಥ್, ಮತ್ತು ಶ್ರವಣ್ ಅಭಿನಯಿಸಿದ್ದಾರೆ.

English summary
watch kannada short film 'Dubsmash-madidavaru matash'. A Film by Manasa Sharma and Shravan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada