»   » 'ಪ್ರೀತಿ ಕಿತಾಬು' ಹಿಡಿದು ಬಂದ ದುನಿಯಾ ರಶ್ಮಿ

'ಪ್ರೀತಿ ಕಿತಾಬು' ಹಿಡಿದು ಬಂದ ದುನಿಯಾ ರಶ್ಮಿ

Posted By:
Subscribe to Filmibeat Kannada

ವರ್ಷಗಳ ಕಾಲ ಗಾಂಧಿನಗರದಿಂದ ಕಾಣದಂತೆ ಮಾಯವಾಗಿದ್ದ ನಟಿ ದುನಿಯಾ ರಶ್ಮಿ ಮರಳಿ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ, ತಮ್ಮ ಹುಟ್ಟುಹಬ್ಬದ ದಿನದಂದು ದುನಿಯಾ ರಶ್ಮಿ ತಮ್ಮ 'ಹ್ಯಾಕ್' ಚಿತ್ರದ ಪೋಸ್ಟರ್ ಗಳನ್ನ ಅನಾವರಣ ಮಾಡಿ ಖುಷಿ ಪಟ್ಟಿದ್ದರು.

'ಹ್ಯಾಕ್' ಚಿತ್ರದ ಪೋಸ್ಟರ್ ನಲ್ಲಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದ ದುನಿಯಾ ರಶ್ಮಿಯನ್ನ ನೋಡಿದ ಜನ ಒಮ್ಮೆ ಬಾಯಿ ಮೇಲೆ ಬೆರಳಿಟ್ಟಿದ್ದಂತೂ ಅಷ್ಟೇ ಸತ್ಯ. ಹಾಗೆ ರೂಪಾಂತರಗೊಂಡಿರುವ ದುನಿಯಾ ರಶ್ಮಿ ಅವರ ಲೇಟೆಸ್ಟ್ ಫೋಟೋಗಳು ಇಲ್ಲಿವೆ...

Duniya Rashmi

'ದುನಿಯಾ' ಚಿತ್ರದಲ್ಲಿ ಏನೂ ಗೊತ್ತಿಲ್ಲದ ಮುಗ್ಧ ಹುಡುಗಿಯಾಗಿ ಹಳೆಯ ಕಾಸ್ಟ್ಯೂಮ್ ಗಳನ್ನ ತೊಟ್ಟಿದ್ದ ರಶ್ಮಿ ಇದೀಗ ಕಂಪ್ಲೀಟ್ ಮಾರ್ಡನ್. ಸಲ್ವಾರ್ ಕಮೀಜ್ ಹಾಕಿದರೂ, ಅದಕ್ಕೆ ತಕ್ಕಂತೆ ಮೇಕ್ ಓವರ್ ಮಾಡಿಕೊಂಡಿರುವ ರಶ್ಮಿ ಹಿಂದೆಂದಿಗಿಂತಲೂ ಈಗ ಚಂದಕ್ಕಿಂತ ಚಂದ. ಬೇಕಾದ್ರೆ ನೀವೇ ನೋಡಿ.... [ನಟಿ ದುನಿಯಾ ರಶ್ಮಿ ಹೊಸ ಇನ್ನಿಂಗ್ಸ್ 'ಹ್ಯಾಕ್' ಶುರು]

duniya rashmi

ಅಸಲಿಗೆ ಈ ಎಲ್ಲಾ ಫೋಟೋಗಳು ದುನಿಯಾ ರಶ್ಮಿ ಅಭಿನಯದ ಹೊಸ ಚಿತ್ರದ್ದು. ಅದರ ಹೆಸರೇ 'ಪ್ರೀತಿ ಕಿತಾಬು'. ಹೆಸರು ಕೇಳಿದ ತಕ್ಷಣ ಇದು ಲವ್ ಸ್ಟೋರಿ ಸಿನಿಮಾ ಅನ್ನುವುದು ಪಕ್ಕಾ. ಆದ್ರೆ, ಪ್ರೀತಿ ಪ್ರೇಮ ಪ್ರಣಯದ ಜೊತೆ 'ಪ್ರೀತಿ ಕಿತಾಬು' ನಾಯಕಿ ಪ್ರಧಾನ ಚಿತ್ರ.

Duniya Rashmi2

ಹಲವು ವರ್ಷಗಳ ನಂತರ ದುನಿಯಾ ರಶ್ಮಿ ನಟನೆಗೆ ಮರಳಿರುವುದರಿಂದ ಚಿತ್ರದಲ್ಲಿ ರಶ್ಮಿಗೆ ತುಸು ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಇದೇ ಕಾರಣಕ್ಕೆ ದುನಿಯಾ ರಶ್ಮಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಂತೆ. [ಅರುಂಧತಿಯಾಗಿ ದುನಿಯಾ ರಶ್ಮಿ ಎರಡನೇ ಇನ್ನಿಂಗ್ಸ್]

ಅಂದ್ಹಾಗೆ 'ಪ್ರೀತಿ ಕಿತಾಬು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ವಿಠಲ್ ಭಟ್. ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿರುವ ವಿಠಲ್ ಭಟ್, ಜರ್ನಲಿಸಂಗೆ ಗುಡ್ ಬೈ ಹೇಳಿ 'ಪ್ರೀತಿ ಕಿತಾಬು' ಚಿತ್ರಕ್ಕಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

Duniya Rashmi3

ಕಂಪ್ಲೀಟ್ ಕಮರ್ಶಿಯಲ್ ಚಿತ್ರವಾಗಿರುವ 'ಪ್ರೀತಿ ಕಿತಾಬು', ನಿಸರ್ಗ ಸಿರಿಯಲ್ಲಿ ಸೆರೆಯಾಗಿದೆ. ದುನಿಯಾ ರಶ್ಮಿಯೊಂದಿಗೆ ಯುವ ಪ್ರತಿಭೆ ನಿಹಾಲ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹೊಸಬರ ಹೊಸ ಪ್ರಯತ್ನವಾಗಿರುವ 'ಪ್ರೀತಿ ಕಿತಾಬು' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.[ಸುದ್ದಿಯಲ್ಲೇ ಸಿನಿಮಾ ಮಾಡುತ್ತಿರುವ ದುನಿಯಾ ರಶ್ಮಿ]

ಎಲ್ಲವೂ ಸರಾಗವಾಗಿ ನಡೆದರೆ, ಸದ್ಯದಲ್ಲೇ 'ಪ್ರೀತಿ ಕಿತಾಬು' ತೆರೆಮೇಲೆ ಬರಲಿದೆ. ದೊಡ್ಡ ಪರದೆಯಿಂದ ಮಾಯವಾಗಿದ್ದ ದುನಿಯಾ ರಶ್ಮಿ ಹೊಸ ಲುಕ್ ನಲ್ಲಿ ನಿಮ್ಮೆಲ್ಲರನ್ನ ರಂಜಿಸೋಕೆ ಬರಲಿದ್ದಾರೆ. 'ರೂಪಾಂತರ' ಕೃಪೆಯಿಂದ ದುನಿಯಾ ರಶ್ಮಿ ಮತ್ತೆ ಗೆಲ್ಲುವ ಕುದುರೆಯಾಗುತ್ತಾರಾ ಅನ್ನುವುದನ್ನ ಕಾದು ನೋಡಬೇಕು. (ಫಿಲ್ಮಿಬೀಟ್ ಕನ್ನಡ)

English summary
Duniya Rashmi, of 'Duniya' fame has made re-entry to Sandalwood through the movie 'Preethi Kithabu'. Duniya Rashmi has done a make-over for the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada