»   » ಏನಿದು ದುನಿಯಾ ಸೂರಿ 'ಕೆಂಡಸಂಪಿಗೆ' ವಿವಾದ, ವಿಷಾದ?

ಏನಿದು ದುನಿಯಾ ಸೂರಿ 'ಕೆಂಡಸಂಪಿಗೆ' ವಿವಾದ, ವಿಷಾದ?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ನಿರ್ದೇಶಕ ದುನಿಯಾ ಸೂರಿ ಹೊಚ್ಚ ಹೊಸ ಪ್ರತಿಭೆಗಳನ್ನಿಟ್ಟುಕೊಂಡು 'ಕೆಂಡಸಂಪಿಗೆ' ಚಿತ್ರವನ್ನ ರೆಡಿ ಮಾಡಿದ್ದಾರೆ. ಇದರ ಜೊತೆಗೆ ಅವಕಾಶಕ್ಕಾಗಿ ಹಾತೊರೆಯುವ ಯುವ ಪ್ರತಿಭೆಗಳಿಗೆ ಒಂದು ಚಾನ್ಸ್ ಕೊಡ್ತಿದ್ದಾರೆ. ಈ ಸುದ್ದಿ ಕಳೆದ ವಾರದಿಂದಲೂ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಿತ್ತು.

  'ಕೆಂಡಸಂಪಿಗೆ' ಟ್ರೇಲರ್ ಲಾಂಚ್ ಮತ್ತು 'ಕೆಂಡಸಂಪಿಗೆ ಟ್ಯಾಲೆಂಟ್ ಹಂಟ್' ಬಗ್ಗೆ ಪತ್ರಿಕಾ ಮತ್ತು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಳ್ಳುವುದಕ್ಕೆ ದುನಿಯಾ ಸೂರಿ ಒಂದು ಪ್ರೆಸ್ ಮೀಟ್ ಅರೇಂಜ್ ಮಾಡಿದ್ದರು. ವರ್ಷಗಳ ಗ್ಯಾಪ್ ನಂತ್ರ ದುನಿಯಾ ಸೂರಿಯ 'ಕೆಂಡಸಂಪಿಗೆ' ಚಮತ್ಕಾರ ಹೇಗೆ ಮೂಡಿಬಂದಿದೆ ಅಂತ ತಿಳಿದುಕೊಳ್ಳುವುದಕ್ಕೆ ಎಲ್ಲಾ ಪತ್ರಿಕಾ ಬಾಂಧವರು ಆಗಮಿಸಿದರು.

  ಪ್ರತಿಕಾಗೋಷ್ಠಿ ಶುರುವಾಗುತ್ತಿದ್ದಂತೆ ದುನಿಯಾ ಸೂರಿ ಒಂದು ವಿಡಿಯೋ ಪ್ಲೇ ಮಾಡಿ, ತಮ್ಮ ಎಂದಿನ ಸುಕ್ಕಾ ಸ್ಟೈಲ್ ನಲ್ಲಿ ಮಾತಿಗಿಳಿದರು. ಸೂರಿ ಆಡಿದ ಒಂದು ಮಾತಿನಿಂದ ಬೇಸರಗೊಂಡ ಹಿರಿಯ ಪತ್ರಕರ್ತರೊಬ್ಬರು ಚಕಾರ ಎತ್ತಿದ್ದರು. ಅಲ್ಲಿಂದ ಶುರುವಾಗಿದ್ದು ಹೊಸ ವಿವಾದ. ಅಸಲಿಗೆ ದುನಿಯಾ ಸೂರಿ ಹೇಳಿದ್ದೇನು? ಯುವ ಪ್ರತಿಭೆಗಳನ್ನ ದುನಿಯಾ ಸೂರಿ ಅವಮಾನ ಮಾಡಿದ್ದಾರಾ..? ಮುಂದೆ ಓದಿ......

  ಪತ್ರಿಕಾಗೋಷ್ಟಿಯಲ್ಲಿ ಆಗಿದ್ದೇನು?

  'ಕೆಂಡಸಂಪಿಗೆ' ಟ್ರೇಲರ್ ಲಾಂಚ್ ಮಾಡುವ ಮೊದಲು ದುನಿಯಾ ಸೂರಿ ಹೊಸ ಕಥೆ ಹೇಳುವುದಕ್ಕೆ ಶುರು ಮಾಡಿದರು. ಎಲ್ಲವನ್ನ ಡಿಫರೆಂಟ್ ಸ್ಟೈಲ್ ನಲ್ಲಿ 'ರಿಯಲಿಸ್ಟಿಕ್' ಆಗಿ ಮಾಡುವ ದುನಿಯಾ ಸೂರಿ ಒಂದು ವಿಡಿಯೋ ತೋರಿಸಿದರು. ಅವಕಾಶಕ್ಕಾಗಿ ದುನಿಯಾ ಸೂರಿ ಆಫೀಸಿಗೆ ಬರುತ್ತಿದ್ದ ಯುವಕರು. ಅವರು ಪಡುವ ಪಾಡು, ಕೊಡುವ ಟಾರ್ಚರ್ ನ್ನೆಲ್ಲಾ ಹಿಡನ್ ಕ್ಯಾಮರಾ ಬಳಸಿ ಸೂರಿ ಮತ್ತು ತಂಡ ಶೂಟ್ ಮಾಡಿತ್ತು. ಅದನ್ನ ಟ್ರೇಲರ್ ರೂಪದಲ್ಲಿ ಪತ್ರಿಕಾ ಮಿತ್ರರ ಮುಂದೆ ಪ್ರದರ್ಶನ ಮಾಡಿದರು.

  ದುನಿಯಾ ಸೂರಿ ಹೇಳಿದ್ದೇನು?

  ದಿನ ಬೆಳಗಾದರೆ ಆಫೀಸಿನ ಮುಂದೆ ಚಾನ್ಸ್ ಗಾಗಿ ಒಬ್ಬರಾದರೂ ಬಂದೇ ಬರುತ್ತಾರೆ. ತಮಗಿಷ್ಟ ಬಂದ ಹಾಗೆ ಫೋಟೋಗಳನ್ನ ತೆಗೆಸಿಕೊಂಡು, ಚಿತ್ರವಿಚಿತ್ರ ವೇಷಗಳಲ್ಲಿ ಬರುತ್ತಾರೆ. ಒಂದು ಅವಕಾಶ ಕೊಡಿ ಅಂತ ಗೋಗರೆಯುತ್ತಾರೆ. ''ಅವಕಾಶ ಕೇಳಿಕೊಂಡು ಬರುವವರು ಮಾನಸಿಕ ಹಿಂಸೆ ಕೊಡುತ್ತಾರೆ'' ಅಂತ ದುನಿಯಾ ಸೂರಿ ಹೇಳುತ್ತಿದ್ದಂತೆ ಪತ್ರಿಕಾಗೋಷ್ಠಿಯಲ್ಲಿದ್ದ ಹಲವರು ಕೆಂಡಾಮಂಡಲವಾದರು. [ಸಿಕ್ಕಾಪಟ್ಟೆ ಚೇಂಜ್ ಆಗ್ತಿದ್ದಾರೆ ದುನಿಯಾ ಸೂರಿ]

  ಯುವ ಪ್ರತಿಭೆಗಳನ್ನ ಹೀಯಾಳಿಸಿದ್ದು ಎಷ್ಟು ಸರಿ?

  ಬರೀ ದುನಿಯಾ ಸೂರಿಗೆ ಮಾತ್ರವಲ್ಲ, ಚಿತ್ರರಂಗದಲ್ಲಿರುವ ಎಲ್ಲರಿಗೂ ಚಾನ್ಸ್ ಗಾಗಿ ಅರಸಿ ಬರುವವರಿಂದ ಟಾರ್ಚರ್ ಇದ್ದದ್ದೇ. ಆದ್ರೆ, ಹಾಗೆ ಅವಕಾಶ ಕೇಳಿಕೊಂಡು ಬರುವವರನ್ನ ಹೀಯಾಳಿಸಿ, ಅವರಿಗೆ ಗೊತ್ತಾಗದಂತೆ ಹಿಡನ್ ಕ್ಯಾಮರಾ ಬಳಸಿ ಶೂಟ್ ಮಾಡಿ, ಅದರಿಂದ ಟ್ರೇಲರ್ ತಯಾರಿಸಿ, ಕೆಲ ವಾಹಿನಿಗಳಿಗೆ ಅದನ್ನ ಕೊಟ್ಟು ಜಗಜ್ಜಾಹೀರಾಗುವಂತೆ ಮಾಡುವುದು ಎಷ್ಟು ಸರಿ. ಅದರಲ್ಲೂ ದುನಿಯಾ ಸೂರಿ ಅಂತಹ 'ಸ್ಟಾರ್' ಡೈರೆಕ್ಟರ್ ಇಂತಹ ಕೆಲಸ ಮಾಡಿರುವುದಕ್ಕೆ ಅಲ್ಲಿದ್ದವರ ಕಣ್ಣು ಕೆಂಪಗಾಯಿತು. [ದುನಿಯಾ ಸೂರಿ 'ಕೆಂಡಸಂಪಿಗೆ'ಯಲ್ಲಿ ಅಂಥದ್ದೇನಿದೆ..?]

  ಮಾನನಷ್ಟ ಮೊಕ್ಕದ್ದಮೆ ಹಾಕ್ತಾರಂತೆ ಒಬ್ಬರು!

  ಪತ್ರಕರ್ತರಿಗೆ ಮತ್ತು ವಾಹಿನಿಗಳಿಗೆ ದುನಿಯಾ ಸೂರಿ ಕಳುಹಿಸಿದ ವಿಡಿಯೋದಲ್ಲಿ ಅವಕಾಶ ಕೇಳೋಕೆ ಹೋಗಿದ್ದ ಅರವಿಂದ್ ಅನ್ನುವವರ ಚಿತ್ರಣ ಕೂಡ ಇತ್ತು. ವಾಹಿನಿಗಳಲ್ಲಿ ಇದು ಪ್ರಸಾರವಾದ್ದರಿಂದ ಮತ್ತು ಅದರಲ್ಲಿ ಅವಕಾಶ ಕೇಳೋಕೆ ಹೋದವರನ್ನ ಹೀಯಾಳಿಸಿದ್ದರಿಂದ ಅರವಿಂದ್ ಕುಟುಂಬದವರು ಕೊಂಚ ಘಾಸಿಗೊಂಡಿದ್ದಾರೆ. ''ಚಾನ್ಸ್ ಗಾಗಿ ಇಷ್ಟೆಲ್ಲಾ ಗೋಗರಿಯಬೇಕಿತ್ತಾ?'' ಕೆಲವರು ದೂರವಾಣಿ ಕರೆಮಾಡಿ ಹೀಯಾಳಿಸಿದ್ದಾರೆ. ಇದರಿಂದ ಬೇಸರಗೊಂಡಿರುವ ಅರವಿಂದ್, ''ಎಲ್ಲರಿಗೂ ನಟಿಸಬೇಕು ಅಂತ ಇಷ್ಟವಿರುತ್ತೆ. ಅವಕಾಶಕ್ಕಾಗಿ ನಾನು ಅವರ ಬಳಿ ಹೋಗಿದ್ದೆ. ಆದ್ರೆ, ಅದನ್ನ ಚಿತ್ರೀಕರಿಸಿ ಎಲ್ಲಾ ವಾಹಿನಿಗಳಲ್ಲಿ ತೋರಿಸುವುದು ತಪ್ಪು. ಇದರಿಂದ ನನಗೆ ಅವಮಾನ ಆಗಿದೆ. ದುನಿಯಾ ಸೂರಿ ನನ್ನನ್ನ ಕ್ಷಮೆ ಕೇಳಬೇಕು. ಇಲ್ಲವಾದರೆ ಮಾನನಷ್ಟ ಮೊಕ್ಕದ್ದಮೆ ಹೂಡುತ್ತೇನೆ'' ಅಂತ ಎಲ್ಲಾ ಸುದ್ದಿ ವಾಹಿನಿಗಳಿಗೆ ಅರವಿಂದ್ ಹೇಳಿಕೆ ನೀಡಿದ್ದಾರೆ.

  ದುನಿಯಾ ಸೂರಿ ಮನಸ್ಸಲ್ಲೇನಿದೆ?

  ದಿನಂಪ್ರತಿ ಅವಕಾಶಗಳನ್ನ ಕೇಳಿಕೊಂಡು ಬರುವ ಬದಲು ಪ್ರತಿಭೆ ಇದ್ದರೆ ಉದ್ಧಾರವಾಗಲಿ ಅಂತ 'ಪರಿಮಳ ಫಿಲಂ ಫ್ಯಾಕ್ಟರಿ' ಮುಖಾಂತರ 'ಕೆಂಡಸಂಪಿಗೆ ಟ್ಯಾಲೆಂಟ್ ಹಂಟ್' ಮೂಲಕ ಯುವ ಪ್ರತಿಭೆಗಳಿಗೆ ಪ್ಲಾಟ್ ಫಾರಂ ಕಲ್ಪಿಸುವುದು ದುನಿಯಾ ಸೂರಿ ಉದ್ದೇಶ. ಸೆಲೆಬ್ರಿಟಿ ಆಗುವ ಕನಸು ಕಾಣುವವರು 5 ನಿಮಿಷದ ವಿಡಿಯೋ ಮಾಡಿ ಅದರಲ್ಲಿ ತಮ್ಮ ಪ್ರತಿಭೆಯನ್ನ ಅನಾವರಣ ಮಾಡಬೇಕು. ಪೆನ್ ಡ್ರೈವ್ ಅಥವಾ ಡಿ.ವಿ.ಡಿ ಮುಖಾಂತರ ಮಾರ್ಚ್ 25 ರೊಳಗೆ 'ಪರಿಮಳ ಫಿಲಂ ಫ್ಯಾಕ್ಟರಿ' ತಲುಪಬೇಕು. ಈ ಸ್ಪರ್ಧೆಗೆ ಪ್ರಚಾರ ಸಿಗಲಿ ಅನ್ನುವ ಕಾರಣಕ್ಕೆ ಅವಕಾಶ ಕೇಳಿ ಬಂದವರ ವಿಡಿಯೋಗಳನ್ನಿಟ್ಟುಕೊಂಡು ಸೂರಿ ಟ್ರೇಲರ್ ರೆಡಿ ಮಾಡಿದ್ದರು. [ಸೂರಿ ಕಾರು ಚಾಲಕ 'ಕೆಂಡಸಂಪಿಗೆ' ಹೀರೋ ಆದ ಕಥೆ]

  ಒಳ್ಳೆಯ ಉದ್ದೇಶದ ಹಿಂದೆ ಆದ ಎಡವಟ್ಟು

  ಹೊಸ ಟ್ಯಾಲೆಂಟ್ ಗಳಿಗೆ ಸೂರಿ ಮಣೆ ಹಾಕುತ್ತಿರುವ ಉದ್ದೇಶ ಒಳ್ಳೆಯದ್ದೇ. ಆದ್ರೆ, ಅದನ್ನ ಪ್ರದರ್ಶಿಸಿದ ರೀತಿ ಸರಿಯಿಲ್ಲ. ಹೆಸರಾಂತ ನಿರ್ದೇಶಕರಾಗಿ, ಇನ್ನೊಬ್ಬರಲ್ಲಿ ಅಡಗಿರುವ ಪ್ರತಿಭೆಯನ್ನ ಆಡಿಕೊಳ್ಳುವುದು ತಪ್ಪು. ಒಂದು ಸ್ಪರ್ಧೆಗಾಗಿ ಸ್ಟಿಂಗ್ ಆಪರೇಷನ್ (ಹಿಡನ್ ಕ್ಯಾಮರಾ ಬಳಸಿ ಚಿತ್ರೀಕರಣ) ಮಾಡಿ ಅವರನ್ನ ಕೇಳಾಗಿ ತೋರಿಸುವುದು ಸಮಂಜಸ ಅಲ್ಲ ಅಂತ ಈಗ ಎದ್ದಿರುವ ಹೊಸ ವಾದ-ವಿವಾದ.

  English summary
  Duniya Soori has come up with the new contest called 'Kendasampige Talent Hunt' which has created a new controversy in Sandalwood. Here is the detailed report.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more