Don't Miss!
- News
ಫೆಬ್ರವರಿ 6ರಂದು 280 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೂರಿ- ಅಭಿ 'ಬ್ಯಾಡ್ ಮ್ಯಾನರ್ಸ್' ಶೂಟಿಂಗ್ ಕಂಪ್ಲೀಟ್: ಸಿನಿಮಾ ರಿಲೀಸ್ ಡೇಟ್ ಫಿಕ್ಸ್
'ಪಾಪ್ ಕಾರ್ನ್ ಮಂಕಿಟೈಗರ್' ನಂತರ ದುನಿಯಾ ಸೂರಿ ಸೈಲೆಂಟ್ ಆಗಿಬಿಟ್ಟಿದ್ದರು. ಇದೀಗ ಸದ್ದಿಲ್ಲದೇ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಮತ್ತೆ ಸೂರಿ ಮಾತನಾಡುವ ಸಮಯ ಬರ್ತಿದೆ.
ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವ ಜಾಯಮಾನದವರು ದುನಿಯಾ ಸೂರಿ. 'ಟಗರು' ರೀತಿಯ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ಸೂರಿ ನಂತರ ಮೌನಕ್ಕೆ ಜಾರಿದ್ದರು. 'ಪಾಪ್ ಕಾರ್ನ್ ಮಂಕಿಟೈಗರ್' ಸಿನಿಮಾ ಸಿದ್ಧವಾದ ಮೇಲೆ ಮಾಧ್ಯಮಗಳ ಮುಂದೆ ಬಂದಿದ್ದರು. ಕಳೆದ 2 ವರ್ಷಗಳಿಂದ ಸೂರಿ 'ಬ್ಯಾಡ್ ಮ್ಯಾನರ್ಸ್' ಜಪ ಮಾಡುತ್ತಿದ್ದಾರೆ. 'ಅಮರ್' ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಭಿಷೇಕ್ ಅಂಬರೀಶ್‌ಗೆ ದೊಡ್ಡ ಬ್ರೇಕ್ ಕೊಡುವ ನಿರೀಕ್ಷೆಯಲ್ಲಿದ್ದಾರೆ.
ರೂಡ್
ಕಾಪ್
ರುದ್ರ..
ಗನ್ಗಳನ್ನಿಟ್ಟು
ಅಭಿ
-
ಸೂರಿ
ಲಗೋರಿ..
ಕಿಕ್
ಕೊಡ್ತಿದೆ
'ಬ್ಯಾಡ್
ಮ್ಯಾನರ್ಸ್'
ಟೀಸರ್
'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ. ರಚಿತಾ ರಾಮ್ ಹಾಗೂ ಪ್ರಿಯಾಂಕಾ ಕುಮಾರ್ ತಾರಾಗಣದಲ್ಲಿದ್ದಾರೆ. ಅಭಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು.

'ಬ್ಯಾಡ್ ಮ್ಯಾನರ್ಸ್' ಶೂಟಿಂಗ್ ಮುಕ್ತಾಯ
ಕಳೆದ ವರ್ಷ ಸಂಕ್ರಾಂತಿ ವೇಳೆ ಚಾಮುಂಡಿ ಬೆಟ್ಟದಲ್ಲಿ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮುಹೂರ್ತ ನೆರವೇರಿತ್ತು. ಅಭಿಷೇಕ್ ತಾಯಿ ಹಿರಿಯ ನಟಿ ಸುಮಲತಾ ಅಂಬರೀಶ್ ಮುಹೂರ್ತ ಸಮಾರಂಭಕ್ಕೆ ಹಾಜರಾಗಿ ಶುಭ ಕೋರಿದ್ದರು. ಮಂಡ್ಯದಲ್ಲಿ ಚಿತ್ರೀಕರಣ ಶುರುವಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಟ್‌ಗೆ ಭೇಟಿ ನೀಡಿದ್ದರು. ಅಂತೂ ಇಂತೂ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಚಿತ್ರೀಕರಣ ಮುಗಿದಿದೆ. ಕೇಕ್ ಕತ್ತರಿಸಿ ಚಿತ್ರತಂಡ ಸಂಭ್ರಮಿಸಿದೆ.

ಫೆಬ್ರವರಿ 16ಕ್ಕೆ 'ಬ್ಯಾಡ್ ಮ್ಯಾನರ್ಸ್'
'ಬ್ಯಾಡ್ ಮ್ಯಾನರ್ಸ್' ಪಕ್ಕಾ ಸೂರಿ ಸ್ಟೈಲ್ ಪೊಲೀಸ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ವರ್ಕ್‌ಗೆ ಚಾಲನೆ ಕೊಟ್ಟಿದೆ. ಫೆಬ್ರವರಿ 16ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಟೈಟಲ್‌ನಿಂದಲೇ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಸೂರಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದರೆ ಮಾಸ್ತಿ ಸಂಭಾಷಣೆ ಗೀಚಿದ್ದಾರೆ.

ಖಡಕ್ ಕಾಪ್ 'ರುದ್ರ' ಆಗಿ ಅಭಿ
'ಬ್ಯಾಡ್ ಮ್ಯಾನರ್ಸ್' ಟೀಸರ್ ಗಮನಿಸಿದರೆ ಇದು ಡ್ರಗ್ಸ್ ಮಾಫಿಯಾ ಸುತ್ತಾ ಸುತ್ತುವ ಕಥೆ ಎನ್ನುವ ಸುಳಿವು ಸಿಗುತ್ತಿದೆ. ಚಿತ್ರದಲ್ಲಿ ರುದ್ರ ಎನ್ನುವ ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿಷೇಕ್ ಅಂಬರೀಶ್ ಮಿಂಚಿದ್ದಾರೆ. ಸುಧೀರ್ ಕೆ. ಎಂ ನಿರ್ಮಾಣ ಈ ಚಿತ್ರದಲ್ಲಿ ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ಸೇರಿದಂತೆ ಸಾಕಷ್ಟು ಅನುಭವಿ ಕಲಾವಿದರು ನಟಿಸಿದ್ದಾರೆ.

ಪಕ್ಕಾ ಮಾಸ್ ಎಂಟರ್‌ಟೈನರ್
ಚರಣ್ ರಾಜ್ ಮ್ಯೂಸಿಕ್ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಮತ್ತೊಂದು ಹೈಲೆಟ್. ಸೂರಿ ರಾ ಮೇಕಿಂಗ್, ಶಾಡೋ ಶಾಟ್ಸ್ ಮಾಸ್ ಪ್ರೇಕ್ಷಕರಿಗೆ ಕಿಕ್ ಕೊಡಲಿದೆ. ಇನ್ನು ಚಿತ್ರ ವಿಚಿತ್ರ ಪಾತ್ರಗಳು, ಅವರಿಗೆ ವಿಚಿತ್ರ ಹೆಸರುಗಳನ್ನಿಟ್ಟು ಸೂರಿ ಮಾರ್ಕ್ ತೋರಿಸಲಿದ್ದಾರೆ. ಫೆಬ್ರವರಿ 16ಕ್ಕೆ ತೆರೆಮೇಲೆ 'ಬ್ಯಾಡ್ ಮ್ಯಾನರ್ಸ್' ಅಸಲಿ ಕಹಾನಿ ರಿವೀಲ್ ಆಗಲಿದೆ.