»   » ವೈಮನಸು ಮರೆತು ಒಂದಾದ ವಿಜಯ್ - ನಾಗರತ್ನ

ವೈಮನಸು ಮರೆತು ಒಂದಾದ ವಿಜಯ್ - ನಾಗರತ್ನ

Posted By:
Subscribe to Filmibeat Kannada

ಕಾರ್ಮೋಡ ಕವಿದಿದ್ದ ದುನಿಯಾ ವಿಜಿ ದಾಂಪತ್ಯದಲ್ಲಿ ಕಡೆಗೂ 'ಬೆಳ್ಳಿ' ಬೆಳಕು ಮೂಡಿದೆ. ದಾಂಪತ್ಯ ವೈಮನಸ್ಸಿನ್ನಿಂದ ಕಂಗೆಟ್ಟಿದ್ದ 'ಕರಿಯ' ವಿಜಿ ಮುಖದಲ್ಲಿ ಮತ್ತೆ ಮಂದಹಾಸ ಮೂಡಿದೆ. ದೂರವಾಗಿದ್ದ ವಿಜಿ-ನಾಗರತ್ನ ಇಂದು ಮತ್ತೆ ಒಂದಾಗಿ, ಕೂಡಿ ಬಾಳೋಕೆ ನಿರ್ಧರಿಸಿದ್ದಾರೆ.

ಹೌದು, ಕಳೆದ ಒಂದು ವರ್ಷದಿಂದ ಕೋರ್ಟ್ ನಲ್ಲಿದ್ದ ದುನಿಯಾ ವಿಜಿ-ನಾಗರತ್ನ ವಿವಾಹ ವಿಚ್ಛೇದನ ಪ್ರಕರಣ ಇಂದು ಸುಖಾಂತ್ಯ ಕಂಡಿದೆ. ಕೌಟುಂಬಿಕ ನ್ಯಾಯಾಲಯಕ್ಕೆ ಮಧ್ಯಾಹ್ನ ಹಾಜರಾದ ದುನಿಯಾ ವಿಜಿ ಮತ್ತು ನಾಗರತ್ನ, ಮಧ್ಯಸ್ತಿಕೆ ಕೇಂದ್ರದಲ್ಲಿ ತಾವು ಹೂಡಿದ್ದ ದಾವೆಯನ್ನ ಹಿಂಪಡೆಯಲು ಸಮ್ಮಿತಿ ಸೂಚಿಸಿದ್ದಾರೆ. [ವಿಚ್ಛೇದನಕ್ಕೆ ದುನಿಯಾ ವಿಜಿ ಕೊಟ್ಟ 25 ಕಾರಣಗಳು]


Duniya Vijay and Nagaratna are back together again

ಮಧ್ಯಸ್ತಿಕೆ ಕೇಂದ್ರದ ಒಂದೇ ಕೂಠಡಿಯಲ್ಲಿ ವಿಜಿ ಮತ್ತು ನಾಗರತ್ನ ಜೊತೆ ಮಾತುಕತೆ ನಡೆಸಿದ ನಿರ್ದೇಶಕರು, ಇಬ್ಬರನ್ನು ಒಂದು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳ ಭವಿಷ್ಯವನ್ನ ಮುಂದಿಟ್ಟುಕೊಂಡು ಎಂದಿನಂತೆ ಜೀವನ ಸಾಗಿಸುವುದಕ್ಕೆ ಒಪ್ಪಿ, ವಿವಾಹ ವಿಚ್ಛೇದನ ಮತ್ತು ದಾಂಪತ್ಯ ಪುನರ್ ಸ್ಥಾಪನೆ ಪ್ರಕರಣವನ್ನ ಹಿಂಪಡೆಯುವುದಕ್ಕೆ ಪರಸ್ಪರ ಒಪ್ಪಿಗೆ ನೀಡಿದ್ದಾರೆ. [ದುನಿಯಾ ವಿಜಿ-ನಾಗರತ್ನ ದಾಂಪತ್ಯಕ್ಕೆ ತಾರ್ಕಿಕ ಅಂತ್ಯ]

ಇನ್ನೂ, ದುನಿಯಾ ವಿಜಿ ಕುಟುಂಬವನ್ನ ಚೆನ್ನಾಗಿ ನೋಡಿಕೊಳ್ಳುವುದಾಗಿ ನಾಗರತ್ನ ಭರವಸೆ ನೀಡಿದ್ದಾರೆ. ಆ ಮೂಲಕ ಇಬ್ಬರ 'ದುನಿಯಾ' ಡ್ರಾಮಾ ಸುಖಾಂತ್ಯ ಕಂಡಿದೆ. 'ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ' ಅನ್ನುವ ಕಾರಣ ಕೊಟ್ಟು ನಾಗರತ್ನರಿಂದ ವಿಚ್ಛೇದನ ಪಡೆಯುವುದಕ್ಕೆ ದುನಿಯಾ ವಿಜಿ ಕಳೆದ ವರ್ಷ ಕೋರ್ಟ್ ಮೆಟ್ಟಿಲೇರಿದ್ದರು.

English summary
Duniya Vijay divorce case ends on a happy note. The couple decided to withdraw the cases filed and agreed to stay together.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada