»   » ವಿಜಯ್ ಚಿನ್ನದಂಥ ಹುಡ್ಗ : ಗೆಳೆಯರ ಸರ್ಟೀಫಿಕೇಟ್

ವಿಜಯ್ ಚಿನ್ನದಂಥ ಹುಡ್ಗ : ಗೆಳೆಯರ ಸರ್ಟೀಫಿಕೇಟ್

Posted By:
Subscribe to Filmibeat Kannada

ಜೀವನದಲ್ಲಿ ಆಶಾಕಿರಣ ಅನ್ನುವುದು ಬಹುದೊಡ್ಡ ಅಂಗ. ಪ್ರತಿ ದಿನವು ನಾವು ಆಶಾಕಿರಣದೊಂದಿಗೆ ಆರಂಭಿಸಲು ಇಚ್ಛಿಸುತ್ತೇವೆ. ಕೆಲವೊಮ್ಮೆ ಅದು ಕೈಗೂಡಿದರೆ, ಮತ್ತೆ ಕೆಲ ದಿನಗಳು ಕೈ ಚೆಲ್ಲುತ್ತದೆ, ಇದೊಂದು ಜೀವನದ ಮಹತ್ ಸತ್ಯಾಂಶವೆಂದು ತಿಳಿಸಲ್ಛಿಸುವೆ...

ನಿಮ್ಮ ನಲ್ಮೆಯ ಹಾಗೂ ಸದಾ ಆಶಾಕಿರಣದೊಂದಿಗೆ ಕೂಡಿರುವ
-ವಿಜಿ

ಇದು ದುನಿಯಾ ವಿಜಯ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿದ ಸ್ಟೇಟಸ್ ಮೆಸೇಜ್.. ಮೊದಲಿಗೆ ಈ ರೀತಿ ವಿಜಿ ಯಾಕೆ ಹಾಕಿದ್ದರೆ ಎಂಬುದು ಅಭಿಮಾನಿಗಳಿಗೆ ಅರ್ಥವಾಗಿರಲಿಲ್ಲ. ಆದರೆ, ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಸುದ್ದಿ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳಲ್ಲಿ ಅನೇಕರು ವಿಜಯ್ ಪರ ಪ್ರತಿಕ್ರಿಯೆಗಳನ್ನು ಹರಿಸಿದರು.

ನಾನು ಪತ್ನಿಗೆ ಯಾವತ್ತು ಕಿರುಕುಳ ನೀಡಿಲ್ಲ. ಪತ್ನಿ ಸಾವಿರ ಕಾರಣ ಕೊಡಬಹುದು. ನನಗೆ ಇರೋದು ಒಂದೇ ಕಾರಣ ನನ್ನ ತಾಯಿ ಆರೋಗ್ಯ ಹದಗೆಟ್ಟಿದೆ. ನಾನು ತಪ್ಪು ಮಾಡಿದರೆ ಸಾಬೀತು ಮಾಡಲಿ ಎಂದು ವಿಜಯ್ ಮತ್ತೊಮ್ಮೆ ಹೇಳಿದ ಡೈಲಾಗ್ ಅನ್ನೇ ಹೇಳಿದ್ದಾರೆ.

ವಿಜಯ್ ಚಿನ್ನದಂಥ ಹುಡ್ಗ : ಗೆಳೆಯರ ಸರ್ಟೀಫಿಕೇಟ್

ನನ್ನ ತಾಯಿಗೆ ಅವಳು(ಪತ್ನಿ ನಾಗರತ್ನ) ಕೇಳಬಾರದ್ದು ಕೇಳಿಬಿಟ್ಟಳು.. ಹಾದರದ ಪದ ಬಳಕೆ ಮಾಡಿದ್ದಾಳೆ. ನಾನು ಹೇಗೆ ಸುಮ್ಮನಿರಲು ಹೇಗೆ ಸಾಧ್ಯ ಎಂದು ವಿಜಿ ಟಿವಿ ಚಾನೆಲ್ ಗಳೊಡನೆ ಮಾತನಾಡುತ್ತಾ ಪ್ರಶ್ನಿಸಿದ್ದಾರೆ. Please keep her in observation do mental study for 6 months, ನನ್ನನ್ನು ಬೇಕಾದರೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ. ಇದು ನನ್ನ ಕಟ್ಟ ಕಡೆಯ ನಡೆ. I m not a womaniser, rapist, I m a human being I want peace ಎಂದು ಮತ್ತೆ ಮತ್ತೆ ಕೇಳಿಕೊಂಡರು.

ವಿಜಯ್ ಚಿನ್ನದಂಥ ಹುಡ್ಗ : ಗೆಳೆಯರ ಸರ್ಟೀಫಿಕೇಟ್

ಸುಷ್ಮಾ ಹೇಳಿಕೆ : ಜನಶ್ರೀ ನಂತರ ಸುವರ್ಣ ವಾಹಿನಿಯಲ್ಲಿ ಚರ್ಚಾ ವೇದಿಕೆ ಹತ್ತಿದ್ದ ನಟಿ, ನಿರ್ದೇಶಕಿ ಸುಷ್ಮಾ ವೀರ್ ಅವರು ಈ ಸಂದರ್ಭದಲ್ಲಿ ವಿಜಯ್ ಅವರನ್ನು ಸಮರ್ಥಿಸಿಕೊಂಡರು. ಬರೀ ಹೆಣ್ಮಕ್ಕಳ ಸಮಸ್ಯೆ ಎಂದು ನೋಡಬೇಡಿ. ವಿಜಯ್ ಗೂ ತನ್ನ ಜವಾಬ್ದಾರಿಯ ಅರಿವಿದೆ. ದಿಢೀರ್ ಎಂದು ಈ ಮಟ್ಟಕ್ಕೆ ಬಂದಿಲ್ಲ. ಕಷ್ಟದಿಂದ ಆತ ಬೆಳೆದವನು.

ವಿಜಯ್ ಚಿನ್ನದಂಥ ಹುಡ್ಗ : ಗೆಳೆಯರ ಸರ್ಟೀಫಿಕೇಟ್

ಯಾರೇ ಆಗಲಿ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಕೋಪ ಬರುವುದು ಸಹಜ. ಹೆಣ್ಣಾದ ನನ್ನ ತಾಯಿ(ಬಿ. ಜಯಶ್ರೀ) ಗೆ ಯಾರಾದರೂ ಬೈದರೆ ಕೆಂಡದಂಥ ಕೋಪ ಬರುತ್ತೆ. ಇನ್ನೂ ವಿಜಿಗೆ ಕೋಪ ಬಂದಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ವಿಜಯ್ ಚಿನ್ನದಂಥ ಹುಡ್ಗ : ಗೆಳೆಯರ ಸರ್ಟೀಫಿಕೇಟ್

ನಮ್ಮ ಕೈಲಾಗುವ ಪ್ರಯತ್ನ ಮಾಡುತ್ತೇವೆ. ನಮ್ಮ ಸ್ನೇಹಿತ ಖುಷಿಯಾಗಿರುವುದು ಮುಖ್ಯ. ಯಾವತ್ತಿಗೂ ಇಷ್ಟು ದೊಡ್ಡ ಮಟ್ಟಕ್ಕೆ ಪ್ರಕರಣ ಬೆಳೆಯುತ್ತೆ ಅಂದುಕೊಂಡಿರಲಿಲ್ಲ. ನನ್ನ ಪ್ರಕಾರ ಇವನ ಕಡೆಯಿಂದ ತಪ್ಪಾಗಿರಲು ಸಾಧ್ಯವಿಲ್ಲ.

ವಿಜಯ್ ಚಿನ್ನದಂಥ ಹುಡ್ಗ : ಗೆಳೆಯರ ಸರ್ಟೀಫಿಕೇಟ್

ಯಾವುದೋ ಚಾನೆಲ್ ನಲ್ಲಿ ನೋಡಿದೆ. ವಿಜಿ ರೌಡಿಗಳನ್ನು ಕರೆಸಿ ಗಲಾಟೆ ಮಾಡುತ್ತಿದ್ದಾನೆ ಎನ್ನುತ್ತಿದ್ದರು. ನಾವು ರೌಡಿಗಳಲ್ಲ. ಕಲಾವಿದರು. ಈ ರೀತಿ ಮಾಹಿತಿಗಳನ್ನು ಮಾಧ್ಯಮಗಳಲ್ಲಿ ಹಾಕುವುದನ್ನು ಬಿಡಿ. ಅಲ್ಲಿ ಇದ್ದವರೆಲ್ಲ ವಿಜಿ ಸ್ನೇಹಿತರು. ಮಾಧ್ಯಮದಲ್ಲಿ ಸುಮ್ಮನೆ ಏನೇನೊ ತೋರಿಸಬೇಡಿ ಎಂದರು.

ವಿಜಯ್ ಚಿನ್ನದಂಥ ಹುಡ್ಗ : ಗೆಳೆಯರ ಸರ್ಟೀಫಿಕೇಟ್

ಜೊತೆಗೆ ನಟಿಸಿದವರೆಲ್ಲರ ಜೊತೆ ಸಂಬಂಧ ಕಲ್ಪಿಸುತ್ತಿರಲ್ಲ ಯಾಕ್ರಿ? ಚಿತ್ರರಂಗದವರು ದೇವರ ಮಕ್ಕಳಲ್ಲ. ನಾವು ನಿಮ್ಮಂತೆ ಮನುಷ್ಯರು. ಏನೇ ಸಂಬಂಧ ಇದ್ದರೂ ಸರಿಯಾದ ಮಾಹಿತಿ, ಸಾಕ್ಷಿ ಇಲ್ಲದೆ ಅನೈತಿಕ ಸಂಬಂಧ ಇದೆ ಅನ್ನೋದು ಸರಿಯಲ್ಲ. ನಮಗೂ ಖಾಸಗಿ ಬದುಕಿದೆ ಎಂಬುದನ್ನು ಮರೆಯಬೇಡಿ ಎಂದಿದ್ದಾರೆ.

ವಿಜಯ್ ಚಿನ್ನದಂಥ ಹುಡ್ಗ : ಗೆಳೆಯರ ಸರ್ಟೀಫಿಕೇಟ್

ಪ್ರೇಮ್ ಉವಾಚ: ನಿನ್ನೆ ಗಲಾಟೆ ನಂತರ ನೆನಪಿರಲಿ ಪ್ರೇಮ್ ಸೇರಿದಂತೆ ವಿಜಯ್ ಗೆಳೆಯರು ಆತನ ಬೆನ್ನ ಹಿಂದೆ ನಿಂತಿದ್ದಾರೆ. ಕೋರ್ಟ್ ತೀರ್ಮಾನ ಏನೇ ಬಂದರೂ ಮನುಷ್ಯರ ಸಂಬಂಧ ಸುಲಭವಾಗಿ ಕಡಿದುಕೊಳ್ಳಲು ಸಾಧ್ಯವಿಲ್ಲ. ಕೋರ್ಟ್ ಮೆಟ್ಟಿಲೇರಿ ವಿಚ್ಛೇದನ ಪಡೆದರೂ ನಂತರ ಒಂದಾಗಿ ಬಾಳಿರುವ ಜನರ ಉದಾಹರಣೆಗಳಿದೆ. ವಿಜಯ್ ಜೀವನ ಸರಿ ಹೋಗಲಿ ಎಂಬುದು ನಮ್ಮ ಹಾರೈಕೆ

ವಿಜಯ್ ಚಿನ್ನದಂಥ ಹುಡ್ಗ : ಗೆಳೆಯರ ಸರ್ಟೀಫಿಕೇಟ್

ಗೆಳೆಯ ಬುಲೆಟ್ ಪ್ರಕಾಶ್ ಹೇಳಿಕೆ: 'ಅವನು ಆ ರೀತಿ ವ್ಯಕ್ತಿ ಇಲ್ಲ. ಹೆಂಡ್ತಿ, ತಾಯಿ, ಅಕ್ಕ, ತಂಗಿ, ಮಕ್ಕಳಿಗೆ ಎಂದಿಗೂ ಕಿರುಕುಳ ನೀಡಿಲ್ಲ. ಈಗ ಪ್ರಕರಣ ನ್ಯಾಯಾಲಯದಲ್ಲಿದೆ. ಅವನ ಕ್ಯಾರೆಕ್ಟರ್ ಅಂಥದ್ದು ಸ್ವಲ್ಪ ರಫ್.. ಅದರೆ ಹತ್ತು ನಿಮಿಷಕ್ಕೆ ಬದಲಾಗುತ್ತೆ. ಅವನು ಸದ್ಯಕ್ಕೆ ಆಘಾತದಲ್ಲಿದ್ದಾನೆ.

ವಿಜಯ್ ಚಿನ್ನದಂಥ ಹುಡ್ಗ : ಗೆಳೆಯರ ಸರ್ಟೀಫಿಕೇಟ್

ಸುಮ್ಮನೆ ಚಾನೆಲ್ ನಿಂದ ಚಾನೆಲ್ ಗೆ ವಿಷಯ ಸ್ಥಳಾಂತರಗೊಳಿಸಿಕೊಂಡು ಮಾತನಾಡುವುದರಲ್ಲಿ ಅರ್ಥವಿಲ್ಲ. ಸೆಲೆಬ್ರಿಟಿ ವಿಚ್ಛೇದನ ಸಮಸ್ಯೆ ಬಗ್ಗೆ ಚರ್ಚೆ ಹೆಸರಿನಲ್ಲಿ ವ್ಯಕ್ತಿಯ ಖಾಸಗಿ ಬದುಕು ಕೆದಕುವುದರಲ್ಲಿ ಅರ್ಥವಿಲ್ಲ. ಟಿವಿ ಮಾಧ್ಯಮಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸುಷ್ಮಾ ಕಿವಿಮಾತು ಹೇಳಿದರು.

ವಿಜಯ್ ಚಿನ್ನದಂಥ ಹುಡ್ಗ : ಗೆಳೆಯರ ಸರ್ಟೀಫಿಕೇಟ್

ದುನಿಯಾ ವಿಜಯ್ ಅವರ ವಿಚ್ಛೇದನ ಪ್ರಕರಣದ ವಿಚಾರಣೆ ಟಿವಿ ಮಾಧ್ಯಮಗಳಲ್ಲಿ ನಡೆಯದೆ, ದಾಂಪತ್ಯದಲ್ಲಿ ಉಂಟಾಗಿರುವ ಬಿರುಕು ಆದಷ್ಟು ಬೇಗ ಸರಿ ಹೋಗಲಿ. ಅವರ ವೈಯಕ್ತಿಕ ಜೀವನ ಮನರಂಜನೆಯ ವಸ್ತುವಾಗುವುದು ಬೇಡ. ವೃತ್ತಿ ಜೀವನಕ್ಕೆ ವಿಜಯ್ ವಿದಾಯ ಹೇಳುವ ಚಿಂತನೆ ಅವರ ಮನಸ್ಸಿನಿಂದ ದೂರಾಗಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.

English summary
Duniya Vijay hinted in FB Staus about his personal problem before applying for Divorce. Vijay said he has never tortured his wife and only reason is mother. Actor Bullet Prakash and Nenapirali Prem defended Vijay and said he never made mistake in his personal life.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada