»   » ದುನಿಯಾ ವಿಜಯ್ ಹುಟ್ಟುಹಬ್ಬ: ಬಡವರಿಗೆ 'ಕನಕ'ನ ಕಾಣಿಕೆ

ದುನಿಯಾ ವಿಜಯ್ ಹುಟ್ಟುಹಬ್ಬ: ಬಡವರಿಗೆ 'ಕನಕ'ನ ಕಾಣಿಕೆ

Posted By:
Subscribe to Filmibeat Kannada

ದುನಿಯಾ ವಿಜಯ್ ಕೇವಲ ತೆರೆಮೇಲೆ ಮಾತ್ರ ನಾಯಕನಲ್ಲ, ಆಫ್ ಸ್ಕ್ರೀನ್ ನಲ್ಲೂ ರಿಯಲ್ ಹೀರೋ. ಇದಕ್ಕೆ ತಾಜಾ ನಿದರ್ಶನವನ್ನ ಇಂದು ನಾವು ನಿಮ್ಮ ಮುಂದೆ ಇಡ್ತೀವಿ...

ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಕನಕ' ಚಿತ್ರದಲ್ಲಿ ದುನಿಯಾ ವಿಜಯ್ ನಾಯಕನಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರದಲ್ಲಿ ವಿಜಿ ಅವರು, ಆಟೋ ಡ್ರೈವರ್ ಪಾತ್ರವನ್ನ ನಿರ್ವಹಿಸುತ್ತಿದ್ದು, ಡಾ.ರಾಜ್ ಕುಮಾರ್ ಅವರ ಅಭಿಮಾನಿಯಾಗಿ ಬಣ್ಣ ಹಚ್ಚಿದ್ದಾರೆ.[ಆರ್ ಚಂದ್ರು ಚಿತ್ರದಲ್ಲಿ 'ರಾಜ್ ಕುಮಾರ್ ಫ್ಯಾನ್' ಯಾರು ಗೊತ್ತಾ?]

Duniya Vijay Donates Two Autos

ತೆರೆಮೇಲೆ ಆಟೋ ಡ್ರೈವರ್ ಆಗಿ ಅಭಿಮಾನಿಗಳನ್ನ ರಂಜಿಸಲು ತಯಾರಾಗುತ್ತಿರುವ ದುನಿಯಾ ವಿಜಯ್ ಈ ಮಧ್ಯೆ ನಿಜವಾಗಲೂ ಆಟೋ ಡ್ರೈವರ್ ಗಳ ಪಾಲಿಗೆ ಆರಾಧ್ಯದೈವವಾಗಿದ್ದಾರೆ. ಹೌದು, ಇಬ್ಬರು ಬಡ ವ್ಯಕ್ತಿಗಳಿಗೆ ಆಟೋ ಕೊಡಿಸುವ ಮೂಲಕ ಅವರ ಜೀವನಕ್ಕೆ ವಿಜಿ ಆಸರೆಯಾಗಿದ್ದಾರೆ. ಈ ಇಬ್ಬರಲ್ಲಿ ಒಬ್ಬರು ಅಂಗವಿಕಲರಾಗಿದ್ದರೇ, ಮತ್ತೊಬ್ಬರು ವಯಸ್ಸಾದವರು. ಇಷ್ಟು ದಿನ ಬಾಡಿಗೆ ಆಟೋವನ್ನ ಓಡಿಸುತ್ತಿದ್ದ ಇಬ್ಬರಿಗೂ ವಿಜಿ, ಸ್ವಂತ ಆಟೋವನ್ನ ಕಲ್ಪಿಸಿಕೊಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಉತ್ತಮ ಕಾರ್ಯಕ್ಕೆ ದುನಿಯಾ ವಿಜಯ್ ಅವರ ಪತ್ನಿ ಕೀರ್ತಿ ಅವರು ಕೂಡ ಕೈಜೋಡಿಸಿರುವುದು ಗಮನಾರ್ಹ.[ಅಣ್ಣಾವ್ರ ಅಭಿಮಾನಿ 'ಕನಕ' ಸಾಂಗ್ ರೆಕಾರ್ಡಿಂಗ್ ಆರಂಭ]

Duniya Vijay Donates Two Autos

ಅಂದ್ಹಾಗೆ, ಜನವರಿ 20 ರಂದು ದುನಿಯಾ ವಿಜಯ್ ಅವರ ಹುಟ್ಟುಹಬ್ಬ. ಈ ಸಂತಸದ ಸಂಭ್ರಮದಲ್ಲಿರುವ ವಿಜಿ, ಮಾನವೀಯತೆಯ ದೃಷ್ಠಿಯಿಂದ ಎರಡು ಬಡ ಕುಟುಂಬಕ್ಕೆ ಸಹಾಯ ಮಾಡಿರುವುದಕ್ಕೆ ನಿಜಕ್ಕೂ ಹ್ಯಾಟ್ಸ್ ಅಪ್ ಹೇಳಲೇಬೇಕು.[ವಿಜಯ್ ನಟನೆಯ 'ಕನಕ'ನಿಗೆ ಮಹಾರಾಷ್ಟ್ರದ ಎಮ್ಮೆಗಳು]

Duniya Vijay Donates Two Autos

'ಕನಕ' ಒಬ್ಬ ಆಟೋ ಡ್ರೈವರ್ ನ ನೈಜಕಥೆಯಾಗಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. 'ಲೂಸಿಯಾ' ಸಿನಿಮಾದ ಮೂಲಕ ಗಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾದ ನವೀನ್ ಸಜ್ಜು, 'ಕನಕ' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಸಂಗೀತ ನಿರ್ದೇಶನ ಮಾಡುತ್ತಿರುವುದು ಈ ಸಿನಿಮಾದ ಮತ್ತೊಂದು ವಿಶೇಷ.

English summary
Actor 'Duniya' Vijay who is playing the role of an auto driver in his new film 'Kanaka' has decided to donate two autos to a physically handicapped and an orphan respectively

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada