»   » ಇದೇ ಮೊದಲ ಬಾರಿಗೆ 'ಕರಿಚಿರತೆ'ಗೆ ಭಟ್ ಆಕ್ಷನ್ ಕಟ್

ಇದೇ ಮೊದಲ ಬಾರಿಗೆ 'ಕರಿಚಿರತೆ'ಗೆ ಭಟ್ ಆಕ್ಷನ್ ಕಟ್

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯ ಮೋಡಿ ಎಲ್ಲರಿಗೂ ಗೊತ್ತು. ಹಾಗೇ, 'ದುನಿಯಾ' ಸೂರಿ ಮತ್ತು ದುನಿಯಾ ವಿಜಯ್ ಕಾಂಬಿನೇಷನ್ ಕಮಾಲ್ ಗೂ ಸಾಕ್ಷಿಯಾಗಿದ್ದು ನಿಮ್ಮಂಥ ಅಭಿಮಾನಿ ದೇವರುಗಳೇ.

ಸೂಪರ್ ಹಿಟ್ ಜೋಡಿಗಳ ಬಗ್ಗೆ ನಾವೀಗ ಹೇಳುತ್ತಿರುವುದಕ್ಕೆ ಕಾರಣ, ನಿರ್ದೇಶಕ ಯೋಗರಾಜ್ ಭಟ್ ಜೊತೆ ದುನಿಯಾ ವಿಜಯ್ ಅಭಿನಯಿಸುವುದಕ್ಕೆ ಒಪ್ಪಿಕೊಂಡಿರುವ ಹೊಸ ಸಿನಿಮಾ! ಭಟ್ರು ಮಾತಿಗೆ ಫೇಮಸ್ಸು, ವಿಜಯ್ ಹೊಡಿಬಡಿಯುವುದಕ್ಕೆ ಫೇಮಸ್ಸು. ಎರಡು ತದ್ವಿರುದ್ಧ ಅದ್ಭುತಗಳು ಮೊದಲ ಬಾರಿಗೆ ಒಂದಾಗುವುದಕ್ಕೆ ನಿರ್ಧರಿಸಿರುವುದು ಗಾಂಧಿನಗರದ ಹೊಸ ಅಚ್ಚರಿ.

Duniya Vijay new movie with Director Yogaraj Bhat

ಯೋಗರಾಜ್ ಭಟ್ ಒಂದು ಆಕ್ಷನ್ ಲವ್ ಸ್ಟೋರಿ ಚಿತ್ರಕಥೆಯನ್ನ ರೆಡಿಮಾಡಿದ್ದಾರೆ. ಅದಕ್ಕೆ ದುನಿಯಾ ವಿಜಯ್ ಸೂಕ್ತ ಅಂತ ಸೆಲೆಕ್ಟ್ ಮಾಡಿದ್ದಾರೆ. ಭಟ್ರ ಜೊತೆ ಕೆಲಸ ಮಾಡುವುದಕ್ಕೆ ವಿಜಯ್ ಕೂಡ ಹಿಂದು ಮುಂದು ನೋಡದೇ ಒಪ್ಪಿಕೊಂಡಿದ್ದಾರೆ. [ಹೊಸ ಸಾಹಸಕ್ಕೆ ಕೈಹಾಕಿದ ಯೋಗರಾಜ್ ಭಟ್ರು]

ಆದ್ದರಿಂದ ಇಲ್ಲಿ ಇಬ್ಬರ ಇಮೇಜ್ ಗೂ ಸಮವಾಗಿ ಪ್ರಾಮುಖ್ಯತೆ ನೀಡಲಾಗುತ್ತದೆ. ಭಟ್ರು-ವಿಜಯ್ ಕಾಂಬಿನೇಷನ್ ನಲ್ಲಿ ತಯಾರಾಗುವ ಚಿತ್ರದಲ್ಲಿ ಮಾತೂ ಇದೆ. ಭರ್ಜರಿ ಆಕ್ಷನ್ ಕೂಡ ಇದೆ. ಅಂದ್ಹಾಗೆ ಚಿತ್ರಕ್ಕೆ 'ಮಾಮರ' ಅಥವಾ '407' ಅನ್ನುವ ಟೈಟಲ್ ಇಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. [ದುನಿಯಾ ವಿಜಯ್ ಚಿನ್ನದ ಕಿರೀಟದ ಹಿಂದಿನ ಕಥೆ]

ಬಿ.ಸುರೇಶ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಹಾಗೆ ನೋಡಿದ್ರೆ, ಭಟ್ರು-ಗಣೇಶ್ ಕಾಂಬಿನೇಷನ್ ನಲ್ಲಿ ಇದೇ ತಿಂಗಳು ಹೊಸ ಚಿತ್ರ ಸೆಟ್ಟೇರಬೇಕಿತ್ತು. ಆದ್ರೆ, ಗೋಲ್ಡನ್ ಸ್ಟಾರ್ 'ZOOಮ್' ಮತ್ತು 'ಸ್ಟೈಲ್ ಕಿಂಗ್' ಚಿತ್ರಗಳಲ್ಲಿ ಬಿಜಿಯಾಗಿರುವ ಕಾರಣ ಈ ಚಿತ್ರವನ್ನ ಮುಂದಕ್ಕೆ ತಳಿ ದುನಿಯಾ ವಿಜಯ್ ಜೊತೆಗಿನ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ ಭಟ್ರು. ಮುಂದಿನ ತಿಂಗಳು ಸಿನಿಮಾ ಸೆಟ್ಟೇರಲಿದೆ.

English summary
Sandalwood is witnessing a New Combo. Director Yogaraj Bhat and Duniya Vijay is pairing up for the first time in B.Suresh Productional venture, which will be launched in next month.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada