»   » ದುನಿಯಾ ವಿಜಯ್ 'ಸಿಂಹಾದ್ರಿ' ಗರ್ಜಿಸಲು ರೆಡಿ

ದುನಿಯಾ ವಿಜಯ್ 'ಸಿಂಹಾದ್ರಿ' ಗರ್ಜಿಸಲು ರೆಡಿ

Posted By:
Subscribe to Filmibeat Kannada

ಕನ್ನಡದಲ್ಲಿ ಬಹಳವಾಗಿ ಯಶಸ್ವಿ ಆದ 'ತವರಿಗೆ ಬಾ ತಂಗಿ' ಅಲ್ಲದೆ ಇನ್ನೂ ಅನೇಕ ಸಿನಿಮಾಗಳನ್ನು ನಿರ್ಮಿಸುತ್ತ ಬಂದಿರುವ ನಿರ್ಮಾಪಕರು ಆರ್.ಎಸ್.ಗೌಡ. ಈಗವರು ಮತ್ತೊಂದು ಸಾಹಸ ಹಾಗೂ ಮನೆ ಮಂದಿಗೆಲ್ಲ ಇಷ್ಟವಾಗುವ 'ಸಿಂಹಾದ್ರಿ' ಚಿತ್ರವನ್ನು ಮೇಘ ಹಿಟ್ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಈ ಸಿನೆಮಕ್ಕೆ ಅವರದೇ ಆದ ಕಥೆ ಇದೆ.

ಸಾಹಸ ಸಿನಿಮಾಗಳ ನಿರ್ದೇಶಕರೆಂದೇ ಮೆಚ್ಚುಗೆ ಗಳಿಸಿರುವ ಶಿವಮಣಿ ಅವರು 'ಜೋಶ್' ನಂತರ ಮತ್ತೆ ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ. ಸಾಹಸಮಯ ಸನ್ನಿವೇಶಗಳು, ಪ್ರೀತಿ, ಕಾಮಿಡಿ, ಮನಮಿಡಿಯುವ ದೃಶ್ಯಗಳು ಈ ಸಿನೆಮಾದ ಜೀವಾಳ ಎನ್ನುತ್ತಾರೆ ಶಿವಮಣಿ. [ದುನಿಯಾ ವಿಜಯ್ ಉಚಿತ ಕಾಲ್ ಶೀಟ್]


ಅರ್ಜುನ್ ಜನ್ಯ ಅವರ ಸಂಗೀತ, ಆರ್ ಗಿರಿ ಅವರ ಛಾಯಾಗ್ರಹಣ, ಅಭಿಷೇಕ್ ಅವರ ಚಿತ್ರಕಥೆ ಇದೆ. ನಟ, ನಿರ್ದೇಶಕ, ಬರಹಗಾರ ಮೋಹನ್ ಅವರ ಸಂಭಾಷಣೆ, ಮಾಸ್ ಮಾದ ಅವರ ಸಾಹಸ ಇರುವ ಈ ಚಿತ್ರಕ್ಕೆ ಡಿಸೆಂಬರ್ 12ರಿಂದ ಚಿತ್ರೀಕರಣ ಪ್ರಾರಂಭ. ಆರ್ ಎಸ್ ಗೌಡ ಅವರು ನಿರ್ಮಿಸಿರುವ 'ಗೌಡರ ಮನೆ'ಯಲ್ಲಿ 10 ದಿವಸಗಳ ಚಿತ್ರೀಕರಣ ನಡೆಯಲಿದೆ.

ಮೊದಲ ಬಾರಿಗೆ ದುನಿಯ ವಿಜಯ್ ಅವರ ಜೊತೆ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಜನಪ್ರಿಯತೆ ಪಡೆದಿರುವ ಮೇಘನಾ ರಾಜ್ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 'ದಾಸ್ವಾಳ' ಚಿತ್ರದ ಐಶ್ವರ್ಯಾ, ಸುಚೇಂದ್ರಪ್ರಸಾದ್, ಮಳವಳ್ಳಿ ಸಾಯಿ ಕೃಷ್ಣ, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಹಾಗೂ ಇನ್ನಿತರರು ಪಾತ್ರವರ್ಗದಲ್ಲಿ ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Duniya Vijay's new movie titled as 'Simhadri' directed by Shivamani and produced by R.S. Gowda. Meghana Raj playing female lead in the film. Arjun Janya composing music while R Giri handling camera for the movie.
Please Wait while comments are loading...