For Quick Alerts
  ALLOW NOTIFICATIONS  
  For Daily Alerts

  ಮಹಾಶಿವರಾತ್ರಿಯಂದು ಕೆಣಕಿದ್ರೆ ಹುಷಾರ್ ಎಂದ 'ಭೀಮ'

  |

  ಸ್ಯಾಂಡಲ್‌ವುಡ್ ನಿಜಕ್ಕೂ ಶಿವರಾತ್ರಿ ಹಬ್ಬ ಮಾಡುತ್ತಿದೆ. ಸಿನಿಮಾ ಮಂದಿ ಹೊಸ ಹೊಸ ಸಿನಿಮಾಗಳನ್ನು ಘೋಷಣೆ ಮಾಡುತ್ತಿದೆ. 'ಜೇಮ್ಸ್' ಹಾಗೂ 'ವೀರಂ' ತಂಡ ಸಾಂಗ್ ರಿಲೀಸ್ ಮಾಡಿದರೆ, ಇನ್ನು ಕೆಲವು ತಂಡ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಇತ್ತ ದುನಿಯಾ ವಿಜಯ್ ತಮ್ಮ 28ನೇ ಸಿನಿಮಾ ಟೈಟಲ್ ರಿವೀಲ್ ಮಾಡಿದ್ದಾರೆ. 'ಸಲಗ' ಸಿನಿಮಾದ ಯಶಸ್ಸಿನಲ್ಲಿ ತೇಲಾಡುತ್ತಿರುವ ವಿಜಯ್ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ.

  ದುನಿಯಾ ವಿಜಯ್ ನಿರ್ದೇಶಿಸಿದ್ದ ಮೊದಲ ಸಿನಿಮಾ 'ಸಲಗ'ಗೆ ಸಿನಿಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ರೌಡಿಸಂ ಕಥೆಯನ್ನು ತೆರೆಮೇಲೆ ತಂದಿದ್ದ ವಿಜಯ್ ನಟನಷ್ಟೇ ಅಲ್ಲ. ಒಬ್ಬ ಉತ್ತಮ ನಿರ್ದೇಶಕ ಎನ್ನುವುದನ್ನೂ ಸಾಬೀತು ಮಾಡಿದ್ದರು. ಇದೇ ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ವಿಜಯ್‌ಗೆ ಮತ್ತೆ ಯಶಸ್ಸು ಸಿಕ್ಕಿತ್ತು. ಈಗ ಇದೇ ಖುಷಿಯಲ್ಲಿ ಎರಡನೇ ಸಿನಿಮಾಗೆ ಕೈ ಹಾಕಿದ್ದಾರೆ. ಶಿವರಾತ್ರಿಯ ವಿಶೇಷ ದಿನದಂದು ವಿಜಯ್ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾದ ಟೈಟಲ್ ರಿವೀಲ್ ಮಾಡಿದ್ದಾರೆ.

  'ಜಯಮ್ಮನ ಮಗ' ಸಿನಿಮಾ ವೇಳೆನೇ ವಿಜಯ್ ಒಳ್ಳೆ ಡೈರೆಕ್ಟರ್ ಆಗ್ತೀಯಾ ಅಂದಿದ್ದೆ: ಭವಿಷ್ಯ ನುಡಿದಿದ್ದ ನಿರ್ದೇಶಕ ?'ಜಯಮ್ಮನ ಮಗ' ಸಿನಿಮಾ ವೇಳೆನೇ ವಿಜಯ್ ಒಳ್ಳೆ ಡೈರೆಕ್ಟರ್ ಆಗ್ತೀಯಾ ಅಂದಿದ್ದೆ: ಭವಿಷ್ಯ ನುಡಿದಿದ್ದ ನಿರ್ದೇಶಕ ?

   'ಸಲಗ' ಈಗ 'ಭೀಮ'

  'ಸಲಗ' ಈಗ 'ಭೀಮ'

  'ಸಲಗ' ಗೆದ್ದ ಖುಷಿಯಲ್ಲಿ ದುನಿಯಾ ವಿಜಯ್ ಇದ್ದರು. ಆದರೆ, ಮುಂದಿನ ನಡೆಯ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಕೆಲವೇ ದಿನಗಳ ಹಿಂದಷ್ಟೇ ದುನಿಯಾ ವಿಜಯ್ ಹೊಸ ಸಿನಿಮಾದ ಟೈಟಲ್ ಅನೌನ್ಸ್‌ಮೆಂಟ್ ಮಾಡುವುದಾಗಿ ಪೋಸ್ಟರ್ ಒಂದನ್ನು ಬಿಟ್ಟಿದ್ದರು. ಅದರಂತೆ ಮಹಾಶಿವರಾತ್ರಿಯಂದು ವಿಜಯ್ ತಮ್ಮ ಸಿನಿಮಾ ಟೈಟಲ್ ಅನ್ನು ರಿವೀಲ್ ಮಾಡಿದ್ದಾರೆ. ಅದುವೇ 'ಭೀಮ'. ಈ ಹಿಂದೆ ಕೂಡ 'ಸಲಗ'ದಂತಹ ಪವರ್‌ಫುಲ್ ಟೈಟಲ್ ಅನ್ನೇ ದುನಿಯಾ ವಿಜಯ್ ಆಯ್ಕೆ ಮಾಡಿಕೊಂಡಿದ್ದರು. ಈಗ 'ಭೀಮ' ಅನ್ನೋ ಮತ್ತೊಂದು ಪವರ್‌ಫುಲ್ ಟೈಟಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

   'ಭೀಮ' ಚಿತ್ರಕ್ಕೆ ವಿಜಯ್ ಡೈರೆಕ್ಟರ್

  'ಭೀಮ' ಚಿತ್ರಕ್ಕೆ ವಿಜಯ್ ಡೈರೆಕ್ಟರ್

  'ಭೀಮ' ಟೈಟಲ್ ದುನಿಯಾ ವಿಜಯ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಸಿನಿಮಾವನ್ನು ಕೂಡ ದುನಿಯಾ ವಿಜಯ್ ನಿರ್ದೇಶನ ಮಾಡುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ದುಪ್ಪಟ್ಟಾಗಿದೆ. ಸದ್ಯ ದುನಿಯಾ ವಿಜಯ್ ಟೈಟಲ್ ಅಷ್ಟೇ ರಿವೀಲ್ ಮಾಡಿದ್ದಾರೆ. ಆದರೆ, ಸಿನಿಮಾದ ಕಥೆ ಬಗ್ಗೆ, ಪಾತ್ರಗಳ ಬಗ್ಗೆ, ನಾಯಕಿಯ ಬಗ್ಗೆ ಸುಳಿವು ನೀಡಿಲ್ಲ. ಶಿವರಾತ್ರಿ ಶುಭ ದಿನದಂದು ಶೀರ್ಷಿಕೆಯನ್ನಷ್ಟೇ ಬಿಟ್ಟುಕೊಟ್ಟಿದ್ದಾರೆ. ಅಂದ ಹಾಗೆ ಇದು ವಿಜಯ್ ಅಭಿನಯದ 28ನೇ ಸಿನಿಮಾ.

  ದುನಿಯಾ ವಿಜಯ್ 48ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ ಬಾಲಕೃಷ್ಣ ಸಿನಿಮಾದ ನಿರ್ದೇಶಕದುನಿಯಾ ವಿಜಯ್ 48ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ ಬಾಲಕೃಷ್ಣ ಸಿನಿಮಾದ ನಿರ್ದೇಶಕ

   'ಕೆಣಕಿದ್ರೆ ಕ್ಷೇಮ' ಟ್ಯಾಗ್ ಲೈನ್ ಕಥೆಯೇನು?

  'ಕೆಣಕಿದ್ರೆ ಕ್ಷೇಮ' ಟ್ಯಾಗ್ ಲೈನ್ ಕಥೆಯೇನು?

  'ಭೀಮ' ಮೋಷನ್ ಪೋಸ್ಟರ್ ವಿಡಿಯೋದಲ್ಲಿ ಚಿಕ್ಕದೊಂದು ಟ್ಯಾಗ್ ಲೈನ್ ಇಡಲಾಗಿದೆ. ಇದಕ್ಕೆ 'ಕೆಣಕಿದ್ರೆ ಕ್ಷೇಮ' ಅನ್ನುವ ಟ್ಯಾಗ್ ಲೈನ್ ಅನ್ನು ಇಡಲಾಗಿದೆ. ಇದು ವಿಜಯ್ ಅಭಿನಯದ 28ನೇ ಸಿನಿಮಾದ ಹೈಲೈಟ್. ಇನ್ನೊಂದು ಕಡೆ ಮಾಸ್ಕ್ ತೊಟ್ಟ ವಿಜಯ್ ಫೋಟೊ ಕೂಡ ಇದೆ. ಆದರೆ, ಮುಖವನ್ನು ತೋರಿಸಿಲ್ಲ. ಹೀಗಾಗಿ ವಿಜಯ್ ಗೆಟಪ್ ಹೇಗಿರುತ್ತೆ? ಅನ್ನುವುದು ಇನ್ನೂ ಕುತೂಹಲ. ಕೃಷ್ಣ ಸಾರ್ಥಕ್​ ಹಾಗೂ ಜಗದೀಶ್​ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಹಾಗೂ ಮಾಸ್ತಿ ಡೈಲಾಗ್ ಬರೆಯುತ್ತಿದ್ದಾರೆ.

  ಶಿವಣ್ಣನ ಸಿನಿಮಾ ರೀಮೇಕ್‌ನಲ್ಲಿ ಬಾಲಕೃಷ್ಣ, ದುನಿಯಾ ವಿಜಯ್‌ ಪಾತ್ರವೇನು?ಶಿವಣ್ಣನ ಸಿನಿಮಾ ರೀಮೇಕ್‌ನಲ್ಲಿ ಬಾಲಕೃಷ್ಣ, ದುನಿಯಾ ವಿಜಯ್‌ ಪಾತ್ರವೇನು?

   ಬಾಲಕೃಷ್ಣ ಬಳಿಕ 'ಭೀಮ'

  ಬಾಲಕೃಷ್ಣ ಬಳಿಕ 'ಭೀಮ'

  'ಸಲಗ' ಬಳಿಕ ದುನಿಯಾ ವಿಜಯ್ ಟಾಲಿವುಡ್ ಲೆಜೆಂಜ್ ಬಾಲಕೃಷ್ಣ ನಟಿಸುತ್ತಿರುವ 107ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಐದಾರು ತಿಂಗಳು ವಿಜಯ್ ಈ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ. ಹೀಗಾಗಿ ದುನಿಯಾ ವಿಜಯ್ ತೆಲುಗು ಮುಗಿದ ಬಳಿಕವೇ 'ಭೀಮ' ಸಿನಿಮಾವನ್ನು ಕೈಗೆತ್ತಿಗೊಳ್ಳಲಿದ್ದಾರೆ. ಅಲ್ಲಿವರೆಗೂ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ವಿಜಯ್ ನಿರತರಾಗಿದ್ದಾರೆ. ತೆಲುಗು ಸಿನಿಮಾದಲ್ಲಿ ನಟನೆ ಹಾಗೂ 'ಭೀಮ' ಚಿತ್ರದ ಸ್ಕ್ರಿಪ್ಟಿಂಗ್ ಒಟ್ಟೊಟ್ಟಿಗೆ ನಡೆಯಲಿದೆ.

  English summary
  Duniya Vijay Starrer and directed new movie Bheema Motion poster released.
  Wednesday, March 2, 2022, 9:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X