»   » 'ಕೆಂಪಮ್ಮನ ಕೋರ್ಟ್ ಕೇಸ್'ನಲ್ಲಿ 'ಎಡಕ್ಕಲ್ಲು' ಚಂದ್ರಶೇಖರ್

'ಕೆಂಪಮ್ಮನ ಕೋರ್ಟ್ ಕೇಸ್'ನಲ್ಲಿ 'ಎಡಕ್ಕಲ್ಲು' ಚಂದ್ರಶೇಖರ್

Posted By:
Subscribe to Filmibeat Kannada

ಚಂದ್ರಶೇಖರ್ ನೆನಪಿದ್ಯಾ? ಅದೇ...'ಎಡಕ್ಕಲ್ಲು ಗುಡ್ಡದ ಮೇಲೆ' ಚಿತ್ರದ ಹಾಟ್ ಅಂಡ್ ಹ್ಯಾಂಡ್ಸಮ್ ನಟ. ''ಸಂತೋಷ....ಸಂಗೀತ...'' ಅಂತ ಹಾಡ್ತಾ ಜಾಲಿಯಾಗಿ ಅಂದು ಬೈಕ್ ರೈಡ್ ಮಾಡಿದ್ದ ಈ ನಟ ಇದೀಗ ಲಾಂಗ್ ಗ್ಯಾಪ್ ನಂತರ ಗಾಂಧಿನಗರದ ಕಡೆ ಮುಖ ಮಾಡಿದ್ದಾರೆ.

ಕೆಲ ವರ್ಷಗಳ ಹಿಂದೆಯಷ್ಟೆ 'ಪೂರ್ವಾಪರ' ಚಿತ್ರದ ನಿರ್ದೇಶಿಸಿದ್ದ ಚಂದ್ರಶೇಖರ್, ಇದೀಗ 'ಕೆಂಪಮ್ಮನ ಕೋರ್ಟ್ ಕೇಸ್' ಅನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

chandrashekar

ಶೀರ್ಷಿಕೆ ಕೇಳಿದ ತಕ್ಷಣ 'ಕೆಂಪಮ್ಮನ ಕೋರ್ಟ್ ಕೇಸ್' ಕಲಾತ್ಮಕ ಸಿನಿಮಾ ಅಂತ ಭಾವಿಸಬೇಕಿಲ್ಲ. ಇದರಲ್ಲಿ ಕಮರ್ಶಿಯಲ್ ಅಂಶಗಳು ಕೂಡ ಇವೆ. ಹೀಗಾಗಿ ಇದನ್ನ ಬ್ರಿಡ್ಜ್ ಸಿನಿಮಾ ವರ್ಗಕ್ಕೆ ಸೇರಿಸಬಹುದು.

ನಟ 'ಸಿಹಿ ಕಹಿ' ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಈ ಚಿತ್ರದ ನಾಯಕಿ. ನೀನಾಸಂ ಸಿದ್ದಾರ್ಥ್, ತಾನಿಯಾ ಚಂದ್ರಶೇಖರ್, ರಾಧಾ ರಾಮಚಂದ್ರ, ಶ್ರೀನಾಥ್, ಜೈಜಗದೀಶ್ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಚಂದ್ರಶೇಖರ್ ಬಿಜಿಯಾಗಿದ್ದಾರೆ.

English summary
Kannada Actor Chandrashekar of 'Edakallu Guddada Mele' fame has directed a film called 'Kempammana Court Case'. The film stars Hita Chandrashekar, Srinath and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada