»   » 'ಈಗ' ಭಾಗ-2 ಗೆ ರಾಜಮೌಳಿ ವೇಗ: ನಾನಿ ಉವಾಚ

'ಈಗ' ಭಾಗ-2 ಗೆ ರಾಜಮೌಳಿ ವೇಗ: ನಾನಿ ಉವಾಚ

By: ಸೋನು ಗೌಡ
Subscribe to Filmibeat Kannada

'ಭಲೇ ಭಲೇ ಮಗಾಡಿವೊಯ್' ಚಿತ್ರದ ಭರ್ಜರಿ ಯಶಸ್ಸಿನಲ್ಲಿರುವ 'ಈಗ' ಖ್ಯಾತಿಯ ನಾನಿ ಅವರು 'ಈಗ' 'ಭಾಗ-2' ಮಾಡುವ ಉತ್ಸಾಹವನ್ನು ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ಹೊಂದಿದ್ದಾರೆ ಎಂದು ನುಡಿದಿದ್ದಾರೆ.

ಆದರೆ ಎಸ್ ಎಸ್ ರಾಜಮೌಳಿ ಅವರ 'ಬಾಹುಬಲಿ' 'ಭಾಗ -2' ಚಿತ್ರ ಮುಗಿದ ನಂತರ 2012 ರಲ್ಲಿ ತೆರೆ ಕಂಡ ಬ್ಲಾಕ್ ಬಸ್ಟರ್ ಹಿಟ್ ಚಿತ್ರ 'ಈಗ' 'ಭಾಗ 2' ಪ್ರಾಜೆಕ್ಟ್ ಕೈಗೆತ್ತಿಕೊಳ್ಳಬಹುದು ಎಂದು ನಾನಿ ಹೇಳಿಕೊಂಡಿದ್ದಾರೆ.[ಸಬ್ ಟೈಟಲ್ ಲ್ಲಿ ಸುದೀಪ್ ತೆಲುಗು ಚಿತ್ರ 'ಈಗ']

'Eega 2' To Happen Post 'Baahubali 2'

ನೊಣವೊಂದು ಪುನರ್ಜನ್ಮ ತಾಳಿ ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕಥೆಯನ್ನಾಧರಿಸಿದ 'ಈಗ' 2012 ರಲ್ಲಿ ತೆರೆಕಂಡು ಬಾಕ್ಸಾಪೀಸ್ ಕೊಳ್ಳೆ ಹೊಡೆದಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು.

ಈ ಚಿತ್ರ ಹಿಂದಿ ಭಾಷೆಗೂ ಡಬ್ ಆಗಿತ್ತು ಬಿಟೌನ್ ನಲ್ಲೂ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಈ ಚಿತ್ರದ ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ ಕನ್ನಡಿಗರಿಗೆ ಈ ಚಿತ್ರದಲ್ಲಿ ಹೆಚ್ಚಿನ ಪಾಲಿತ್ತು. ಅದ್ಯಾಕೆ ಅಂತೀರಾ?,[ಮಾರ್ಚ್ ನಲ್ಲಿ ತೆರೆಗೆ ನಲ್ಲ ಸುದೀಪ್ ತೆಲುಗು ಚಿತ್ರ ಈಗ]

ಯಾಕೆಂದರೆ ಕನ್ನಡ ಚಿತ್ರರಂಗದ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡುವ ಮೂಲಕ ಮುಖ್ಯ ಪಾತ್ರ ವಹಿಸಿ ಕನ್ನಡ ಸೇರಿದಂತೆ ತೆಲುಗು ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದ್ದರು.

ಇನ್ನು ಗ್ಲಾಮರ್ ಬೊಂಬೆ ಸಮಂತಾ ರುತು ಪ್ರಭು ಅವರು ಈ ಚಿತ್ರದಲ್ಲಿ ಅದ್ಭುತ ಅಭಿನಯದಿಂದ ತಮ್ಮ ನಟನಾ ಪ್ರತಿಭೆಯನ್ನು ತೋರಿಸುವ ಮೂಲಕ ಪ್ರೇಕ್ಷಕ ವರ್ಗಕ್ಕೆ ಹಾಗು ಅಭಿಮಾನಿಗಳಿಗೆ ಹತ್ತಿರವಾದರು.

ಅದೇನೇ ಇರಲಿ ಒಟ್ನಲ್ಲಿ ಗ್ರಾಫಿಕ್ಸ್ ಬಳಸಿ ವಿಭಿನ್ನವಾಗಿ ಸಿನಿಮಾಗಳನ್ನು ಮಾಡುವ ಮೂಲಕ ಫೇಮಸ್ ಡೈರೆಕ್ಟರ್ ಎಂದೇ ಫೇಮಸ್ ಆಗಿರುವ ಎಸ್ ಎಸ್ ರಾಜಮೌಳಿ ಅವರು ಮತ್ತೊಮ್ಮೆ 'ಈಗ' ಎನ್ನುವ ಚಿತ್ರವನ್ನು ತೆರೆ ಮೇಲೆ ತಂದರೆ ಪ್ರೇಕ್ಷಕರು ಫುಲ್ ಖುಷ್ ಆಗೋದು ಗ್ಯಾರಂಟಿ. ನೀವೇನಂತೀರಾ.

English summary
Nani, who is in the joy of Bhale Bhale Magadivoy success, says the plans are on for the sequel to Telugu blockbuster Eega, but the project may only materialize post the release of S.S. Rajamouli's second installment in the Baahubali franchise.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada