For Quick Alerts
  ALLOW NOTIFICATIONS  
  For Daily Alerts

  ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಚುನಾವಣೆ ಅಧಿಕಾರಿಗಳು ದಾಳಿ

  |
  ದರ್ಶನ್ ಗೆ ಐಟಿ ಶಾಕ್ | ಮೈಸೂರಿನ ಫಾರ್ಮ್ ಹೌಸ್ ಮೇಲೆ ಐಟಿ ದಾಳಿ | FILMIBEAT KANNADA

  ಇತ್ತೀಚಿಗಷ್ಟೆ ಸಚಿವ ಪುಟ್ಟರಾಜು ಅವರ ಮನೆ ಹಾಗೂ ಕೆಲವು ಗುತ್ತಿಗೆದಾರರ ಕಚೇರಿ ಮೇಲೆ ಐಟಿ ರೈಡ್ ಆಗಿತ್ತು. ಈಗ, ದರ್ಶನ್ ಅವರ ಫಾರ್ಮ್ ಹೌಸ್ ಮೇಲೂ ಕೂಡ ಕೆಲವು ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಆರಂಭದಲ್ಲಿ ಐಟಿ ರೈಡ್ ಎಂದು ಹೇಳಲಾಗಿತ್ತಾದರೂ, ಅವರು ಐಟಿ ಅಧಿಕಾರಿಗಳಲ್ಲ, ಚುನಾವಣೆ ಅಧಿಕಾರಿಗಳು ಎಂದು ತಿಳಿದು ಬಂದಿದೆ.

  ಈ ಬಗ್ಗೆ ಸ್ವತಃ ದರ್ಶನ್ ಅವರೇ ಮಾತನಾಡಿದ್ದು, ''ಐಟಿ ರೈಡ್ ಆಗಿಲ್ಲ, ಚುನಾವಣೆ ಅಧಿಕಾರಿಗಳು ಬಂದಿದ್ದರಂತೆ. ನಾನು ಪ್ರಚಾರದಲ್ಲಿದ್ದೇನೆ. ದುಡ್ಡು ಹಂಚುತ್ತಿದ್ದಾರೆ ಎಂಬ ದೂರು ಹೋಗಿರಬಹುದು. ಅದಕ್ಕೆ ಬಂದಿರುತ್ತಾರೆ. ಅಲ್ಲಿ ಏನೂ ಇಲ್ಲ. ಪ್ರಾಣಿಗಳಿಗೆ ತಿಂಡಿ, ಬೂಸಾ ಇದೆ'' ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

  ಮಂಡ್ಯ ಕೊನೆ ದಿನದ ಪ್ರಚಾರದಲ್ಲಿ ರಜನಿಕಾಂತ್?

  ಇದೇ ಸಂಧರ್ಭದಲ್ಲಿ ಮಾತನಾಡಿದ ದರ್ಶನ್ 'ಐಟಿಗೆ ಸಂಬಂಧಪಟ್ಟಂತೆ ನಾನು ಎಲ್ಲ ತೆರಿಗೆಯನ್ನ ಪಾವತಿಸಿದ್ದೇನೆ. ಅದರ ಬಗ್ಗೆ ನನಗೆ ಆತಂಕವಿಲ್ಲ' ಎಂದು ತಿಳಿಸಿದ್ದಾರೆ.

  ಅಂದ್ಹಾಗೆ, ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ದರ್ಶನ್ ಅವರ ಫಾರ್ಮ್ ಹೌಸ್ ಇದ್ದು, ಓರ್ವ ಪೊಲೀಸ್ ಪೇದೆ ಜೊತೆ ಇಬ್ಬರು ಅಧಿಕಾರಿಗಳು ಬಂದಿದ್ದರಂತೆ. ಕೇವಲ ಅರ್ಧಗಂಟೆಯಲ್ಲೇ ಪರಿಶೀಲನೆ ನಡೆಸಿ, ವಾಪಸ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

  ನಟ ದರ್ಶನ್ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದು, ಕಳೆದ ಹದಿನೈದು ದಿನಗಳಿಂದ ಮಂಡ್ಯದಲ್ಲಿ ಸತತವಾಗಿ ಮತಯಾಚನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರ ಫಾರ್ಮ್ ಹೌಸ್ ಪರಿಶೀಲನೆ ನಡೆಸಿರಬಹುದು.

  English summary
  Election Officers raid on Challenging star darshan farmhouse in mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X