For Quick Alerts
  ALLOW NOTIFICATIONS  
  For Daily Alerts

  ಇಂಗ್ಲೆಂಡ್‌ನ ಖ್ಯಾತ ಕ್ರಿಕೆಟಿಗನಿಂದ ಬ್ಯಾಟ್ ಉಡುಗೊರೆಯಾಗಿ ಪಡೆದ ಸುದೀಪ್

  |

  ಕಿಚ್ಚ ಸುದೀಪ್‌ಗೆ ಸಿನಿಮಾ ಬಗ್ಗೆ ಇರುವ ಫ್ಯಾಷನ್ ಕ್ರಿಕೆಟ್ ಬಗ್ಗೆಯೂ ಇದೆ. ಅವರೊಬ್ಬ ಅದ್ಭುತ ಕ್ರಿಕೆಟ್ ಆಟಗಾರ ಮತ್ತು ಆ ಆಟದ ಅಡ್ಮೈರರ್ ಸಹ.

  ಸಿನಿಮಾ ಬಿಟ್ಟರೆ ಕ್ರಿಕೆಟ್‌ ಅನ್ನು ಅತಿಯಾಗಿ ಪ್ರೀತಿಸುವ ಸುದೀಪ್‌ಗೆ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಹಲವು ಗೆಳೆಯರಿದ್ದಾರೆ. ಭಾರತ ತಂಡದ ಕ್ರಿಕೆಟಿಗರು ಮಾತ್ರವಲ್ಲ ವಿದೇಶಿ ಕ್ರಿಕೆಟಿಗರು ಸಹ ಸುದೀಪ್‌ಗೆ ಅತ್ಯಾಪ್ತ.

  ಇದೀಗ ವಿದೇಶಿ ಖ್ಯಾತ ಕ್ರಿಕೆಟಿಗರೊಬ್ಬರು ಸುದೀಪ್‌ ಹಾಗೂ ಅವರ ಕ್ರಿಕೆಟ್‌ ಪ್ರೀತಿಯ ಗೌರವಾರ್ಥ ತಮ್ಮ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

  ಹೌದು, ಇಂಗ್ಲೆಂಡ್‌ನ ಅತ್ಯುತ್ತಮ ಆಟಗಾರ ಜೋಶ್ ಬಟ್ಲರ್ ಕಿಚ್ಚ ಸುದೀಪ್‌ಗೆ ತಮ್ಮ ಕ್ರಿಕೆಟ್ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಸುದೀಪ್ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಜೋಶ್‌ ಬಟ್ಲರ್‌ಗೆ ಧನ್ಯವಾದ ಸಹ ಹೇಳಿದ್ದಾರೆ.

  ಬ್ಯಾಟ್ ಉಡುಗೊರೆ ನೀಡಿದ ಬಟ್ಲರ್

  ಬ್ಯಾಟ್ ಉಡುಗೊರೆ ನೀಡಿದ ಬಟ್ಲರ್

  ''ಇದೊಂದು ಅದ್ಭುತವಾದ ಅನಿರೀಕ್ಷಿತ ಆಶ್ಚರ್ಯ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಜೋಶ್ ಬಟ್ಲರ್‌, ನಿಮಗೆ ಬಹಳ ಧನ್ಯವಾದ. ನೀವು ಖುದ್ದಾಗಿ ಸಹಿ ಮಾಡಿ ನಿಮ್ಮ ಬ್ಯಾಟ್‌ ಅನ್ನು ಕಳಿಸಿಕೊಟ್ಟಿದ್ದೀರಿ. ಈ ಬ್ಯಾಟ್ ಅನ್ನು ಬಹಳ ಖುಷಿಯಿಂದ, ಸಂತೋಶದಿಂದ ನಾನು ಸ್ವೀಕರಿಸಿದ್ದೀನಿ'' ಎಂದಿದ್ದಾರೆ ಸುದೀಪ್. ಜೋಶ್ ಬಟ್ಲರ್ ಕಳಿಸಿದ ಬ್ಯಾಟ್ ಅನ್ನು ಸುದೀಪ್ ಪ್ರದರ್ಶಿಸಿದ್ದಾರೆ ಸಹ.

  ಕಾರಿಯಪ್ಪಗೆ ಧನ್ಯವಾದ ಹೇಳಿದ ಸುದೀಪ್

  ಕಾರಿಯಪ್ಪಗೆ ಧನ್ಯವಾದ ಹೇಳಿದ ಸುದೀಪ್

  ''ನಾನು ಮೊದಲಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಧನ್ಯವಾದ ಹೇಳಬೇಕು. ರಾಜಸ್ಥಾನ ರಾಯಲ್ಸ್‌ ಹಾಗೂ ನನ್ನ ಗೆಳೆಯ ಕಾರಿಯಪ್ಪ ಅವರಿಂದ ಇದು ಸಾಧ್ಯವಾಗಿದೆ. ಈ ವಿಡಿಯೋ ವಿಶೇಷವಾಗಿ ಜೋಶ್ ಬಟ್ಲರ್‌ಗೆ, ಸರ್, ಬಹಳ ಧನ್ಯವಾದ, ಖುದ್ದಾಗಿ ಈ ಬ್ಯಾಟ್‌ ಕಳಿಸಿದ್ದಕ್ಕೆ. ಮತ್ತು ಅದ್ಭುತವಾದ ಐಪಿಎಲ್ ಸೀಸನ್‌ ನಿಮ್ಮದಾಗಿತ್ತು, ಅದಕ್ಕೆ ಅಭಿನಂದನೆಗಳು, ಬಹಳ ಧನ್ಯವಾದ. ನಾನು ಈ ಬ್ಯಾಟ್‌ ಅನ್ನು ಬಹಳ ಜಾಗೂಕತೆಯಿಂದ ಸಂಗ್ರಹಿಸಿಟ್ಟುಕೊಳ್ಳುತ್ತೇನೆ'' ಎಂದಿದ್ದಾರೆ ಸುದೀಪ್.

  ರಾಜಸ್ಥಾನ ರಾಯಲ್ಸ್‌ ಉತ್ತಮ ಬಾಂಧವ್ಯ ಇದೆ ಸುದೀಪ್‌ಗೆ

  ರಾಜಸ್ಥಾನ ರಾಯಲ್ಸ್‌ ಉತ್ತಮ ಬಾಂಧವ್ಯ ಇದೆ ಸುದೀಪ್‌ಗೆ

  ಇಂಗ್ಲೆಂಡ್‌ನ ಖ್ಯಾತ ಕ್ರಿಕೆಟಿಗ ಜಾಶ್ ಬಟ್ಲರ್‌ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಆಡುತ್ತಾರೆ. ರಾಜಸ್ಥಾನ ರಾಯಲ್ಸ್ ಹಾಗೂ ಸುದೀಪ್‌ಗೂ ಒಂದೊಳ್ಳೆ ಬಾಂಧವ್ಯ ಇದೆ. ಸುದೀಪ್‌ರ ಕಳೆದ ಹುಟ್ಟುಹಬ್ಬಕ್ಕೆ ರಾಜಸ್ಥಾನ ರಾಯಲ್ಸ್ ತಂಡ ತಮ್ಮ ಸಮವಸ್ತ್ರದ ಟಿ-ಶರ್ಟ್ ಉಡುಗೊರೆ ನೀಡಿತ್ತು. ಈ ಬಾರಿ ಐಪಿಎಲ್‌ನಲ್ಲಿಯೂ ರಾಜಸ್ಥಾನ ತಂಡವು ಸುದೀಪ್‌ ಜೊತೆ ಚಿಟ್‌-ಚಾಟ್ ನಡೆಸಿತ್ತು. ರಾಯಲ್ಸ್ ತಂಡದ ಸದಸ್ಯರಾಗಿದ್ದಾರೆ ಸುದೀಪ್.

  ಜುಲೈ 28 ಕ್ಕೆ ಸಿನಿಮಾ ಬಿಡುಗಡೆ

  ಜುಲೈ 28 ಕ್ಕೆ ಸಿನಿಮಾ ಬಿಡುಗಡೆ

  ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ನಿಧಾನಕ್ಕೆ ಪ್ರಚಾರ ಆರಂಭಸಿದೆ. ಈಗಾಗಲೇ ಸಿನಿಮಾದ 'ರಾ ರಾ ರಕ್ಕಮ್ಮ' ಹಾಡು ಸಖತ್ ವೈರಲ್ ಆಗಿದೆ. ಸಿನಿಮಾವು ಮುಂದಿನ ತಿಂಗಳು 28 ಕ್ಕೆ ಬಿಡುಗಡೆ ಆಗಲಿದ್ದು, ಈ ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಸಿನಿಮಾದ ಪೋಸ್ಟರ್‌, ಟೀಸರ್‌ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ಕುತೂಹಲ ಮೂಡಿಸಿವೆ. ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಸುದೀಪ್ ಜೊತೆಗೆ ನಿರುಪ್ ಭಂಡಾರಿ, ಶ್ರದ್ಧಾ ಶ್ರೀನಾಥ್, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿದ್ದಾರೆ.

  English summary
  England cricketer Jos Buttler who is playing for Rajastan Royals in IPL giffted bat to Kichcha Sudeep.
  Friday, June 10, 2022, 10:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X