For Quick Alerts
  ALLOW NOTIFICATIONS  
  For Daily Alerts

  "ನನ್ನ ಸಿನಿಮಾ ಕಲೆಕ್ಷನ್ ನನಗೆಷ್ಟು ಅಭಿಮಾನಿಗಳಿದ್ದಾರೆ ಅಂತ ಹೇಳುತ್ತೆ"- ಕಿಚ್ಚ ಸುದೀಪ್!

  |

  ಕಿಚ್ಚ ಸುದೀಪ್ ಈಗ 'ವಿಕ್ರಾಂತ್ ರೋಣ' ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಉತ್ತರದಿಂದ ದಕ್ಷಿಣದವರೆಗೂ ಕಿಚ್ಚ ಮತ್ತ ಅವರ ತಂಡ ಪ್ರಚಾರ ಮಾಡುತ್ತಿದೆ. ಎಲ್ಲಾ ಭಾಷೆಯ ಮಾಧ್ಯಮಗಳಿಗೂ ಸುದೀಪ್ ಸಂದರ್ಶನ ನೀಡುತ್ತಿದ್ದಾರೆ.

  ಕನ್ನಡದ ಮಾಧ್ಯಮಗಳಿಗೂ ಸುದೀಪ್ ಕೆಲವು ದಿನಗಳಿಂದ ಸಂದರ್ಶನ ನೀಡುತ್ತಲೇ ಇದ್ದಾರೆ. ಈ ವೇಳೆ ಸುದೀಪ್ ತನ್ನ ಅಭಿಮಾನಿಗಳು ಹಾಗೂ ಸಿನಿಮಾದ ಕಲೆಕ್ಷನ್ ವಿಚಾರಕ್ಕೆ ಸಂಬಂಧಿಸಿದಂತೆ ಮನಬಿಚ್ಚು ಮಾತಾಡಿದ್ದಾರೆ.

  13 ವರ್ಷದ ಬಳಿಕ ದೆಹಲಿಗೆ ಸುದೀಪ್: ಕೇಂದ್ರ ಸಚಿವರ ಭೇಟಿ13 ವರ್ಷದ ಬಳಿಕ ದೆಹಲಿಗೆ ಸುದೀಪ್: ಕೇಂದ್ರ ಸಚಿವರ ಭೇಟಿ

  ಫ್ಯಾನ್ ಫಾಲೋವಿಂಗ್ ಸಿನಿಮಾದ ಕಲೆಕ್ಷನ್ ಆಗಿ ಬದಲಾಗಬೇಕು ಎಂದು ಹೇಳಿದ್ದಾರೆ. ಅಭಿಮಾನಗಳು ನನಗೆ ಯಾಕೆ ಫ್ಯಾನ್ ಆದರು? ಯಾವ ಕಾರಣಕ್ಕೆ ಫ್ಯಾನ್ ಆದರು? ಅನ್ನುವುದು ಆಲೋಚನೆ ಬರುತ್ತೆ. ಇಷ್ಟು ದೊಡ್ಡ ಅಭಿಮಾನಿ ಬಳಗವನ್ನಿಟ್ಟುಕೊಂಡು ನಾನೇನು ಮಾಡಲಿ? ನಾನು ನನ್ನ ಅಭಿಮಾನಿಗಳನ್ನು ಸಿನಿಮಾ ಮೂಲಕ ಭೇಟಿಯಾಗುತ್ತೇನೆ. ಆ ಸಿನಿಮಾದ ಕಲೆಕ್ಷನ್ ನನಗೆ ಎಷ್ಟು ಅಭಿಮಾನಿ ಬಳಗವಿದೆ ಅನ್ನೋದನ್ನು ಹೇಳುತ್ತೆ ಎಂದು ಸುದೀಪ್ ಸಂದರ್ಶನದಲ್ಲಿ ಹೇಳಿದ್ದಾರೆ. ಆ ಸಂದರ್ಶನದ ಸಾರಾಂಶ ಇಲ್ಲಿದೆ.

  ಸಿನಿಮಾ ಕಲೆಕ್ಷನ್ ಮುಖ್ಯ

  ಸಿನಿಮಾ ಕಲೆಕ್ಷನ್ ಮುಖ್ಯ

  " ಕೊನೆಯಲ್ಲಿ ನಾನು ಯೋಚನೆ ಮಾಡುವುದು ನನ್ನ ಸಿನಿಮಾ ಕಲೆಕ್ಷನ್ ಎಷ್ಟು ಆಯ್ತು ಅಂತ. ಫ್ಯಾನ್ಸ್ ಇದ್ದಾರಲ್ಲ ಯಾಕೆ ಇಷ್ಟೇ ಕಲೆಕ್ಷನ್ ಆಯ್ತು. ಅವರು ನನ್ನ ಪರ್ಸನಾಲಿಟಿಗೆ ಫ್ಯಾನ್ಸ್ ಆದ್ರಾ? ಬಿಗ್ ಬಾಸ್ ಮೂಲಕ ಫ್ಯಾನ್ಸ್ ಆದ್ರಾ? ಇತರ ಹೇಳಿಕೆ ಕೊಡುತ್ತಾ ಇರುತ್ತೇನಲ್ಲ ಅದಕ್ಕೆ ಫ್ಯಾನ್ಸ್ ಆದ್ರಾ? ಇಲ್ಲ ನನ್ನ ಸಿನಿಮಾಗೆ ಫ್ಯಾನ್ಸ್ ಆದ್ರಾ? ನನ್ನ ಆಲೋಚನೆ ಅಲ್ಲಿಗೆ ಹೋಗುತ್ತೆ. ಹೀಗಿದ್ದರೂ ಇವೆಲ್ಲಾ ಸಿನಿಮಾ ಕಲೆಕ್ಷನ್ ಆಗಿ ಹೇಗೆ ಬದಲಾಗುತ್ತೆ? ಇದು ಪ್ರೀತಿಯಾಗಿ ಹೇಗೆ ಬದಲಾಗುತ್ತೆ. " ಎಂದು ಸಂದರ್ಶನದಲ್ಲಿ ಕಿಚ್ಚ ಸುದೀಪ್ ಹೇಳಿದ್ದಾರೆ.

  ಇಷ್ಟು ದೊಡ್ಡ ಬಳಗದಿಂದ ಏನು ಮಾಡಲಿ?

  ಇಷ್ಟು ದೊಡ್ಡ ಬಳಗದಿಂದ ಏನು ಮಾಡಲಿ?

  "ಈ ಬಳಗ ಎಷ್ಟು ದೊಡ್ಡದಿದೆ ಎಂದು ಗೊತ್ತಾದಾಗಾ ಅದರಿಂದ ಏನು ಮಾಡಲಿ ನಾನು? ಗಲಾಟೆ ಮಾಡಿಸಲಾ? ಅಥವಾ ಯಾರಾದರೂ ಮುಟ್ಟುವುದಕ್ಕೆ ಬಂದರೆ ಏನಾಗುತ್ತೆ ಗೊತ್ತಾ ಅನ್ನಲಾ? ನನಗೆ ಗೊತ್ತಿಲ್ಲ. ಇದು ತಮಾಷೆಯಲ್ಲ. ಇದನ್ನಿಟ್ಟುಕೊಂಡು ನಾನೇನು ಮಾಡಲಿ. ಉದಾಹರಣೆಗೆ ಎಲ್ಲರೂ ಒಟ್ಟಿಗೆ ಬಂದರೆ ಆಗ ಏನು ಮಾಡಲಿ ನಾನು? ಒಬ್ಬೊಬ್ಬರಿಗೂ ಮೀಟ್ ಮಾಡಿಕೊಂಡು ಕೂರಲಾ? ಇದನ್ನು ಹೇಗೆ ಸಂಭಾಳಿಸಬೇಕು ಅನ್ನೋದು ನನಗೆ ಗೊತ್ತಿಲ್ಲ. ನನಗೆ ಕೇವಲ ನನ್ನ ಸಿನಿಮಾ ಬಗ್ಗೆ ಮಾತ್ರ ಗಮನ ಹರಿಸಬೇಕು ಅಂತ ಅನಿಸುತ್ತೆ." ಎಂದಿದ್ಧಾರೆ ಸುದೀಪ್.

  ಸಿನಿಮಾ ಮೂಲಕ ಭೇಟಿ ಮಾಡುತ್ತೇನೆ

  ಸಿನಿಮಾ ಮೂಲಕ ಭೇಟಿ ಮಾಡುತ್ತೇನೆ

  "ನಾನು ನನ್ನ ಅಭಿಮಾನಿಗಳನ್ನು ನನ್ನ ಸಿನಿಮಾ ಮೂಲಕ ಭೇಟಿ ಮಾಡುತ್ತೇನೆ. ಆ ಸಿನಿಮಾ ಕಲೆಕ್ಷನ್ ನನಗೆ ಎಷ್ಟು ಅಭಿಮಾನಿ ಬಳಗವಿದೆ ಎಂದು ಹೇಳುತ್ತೆ. ಅದೇ ನನಗೆ ಅದ್ಭುತ ಅಂತ ಅನಿಸುತ್ತೆ." ಎಂದು ಕಿಚ್ಚ ಸುದೀಪ್ ಅಭಿಮಾನಿಗಳ ಬಗ್ಗೆ ಅವರಿಗಿರುವ ಅನಿಸಿಕೆಗಳನ್ನು ಹೇಳಿದ್ದಾರೆ.

  ನನಗನ್ನಿಸಿದನ್ನು ಹೇಳುತ್ತೇನೆ

  "ನಾನು ಏನು ಹೇಳ್ಬೇಕೋ ಅದನ್ನು ಹೇಳುತ್ತಾ ಇರುತ್ತೇನೆ. ಸ್ಟೇಟಸ್ ಆಗಲಿ ಅಂತ ಹೇಳುವುದಿಲ್ಲ. ಸ್ಟೇಟಸ್ ಹಾಕಿದ ಮೇಲೆ ನಾನು ಯೋಚನೆ ಮಾಡಬೇಕಾಗುತ್ತೆ. ಯಾಕಿಷ್ಟು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರಲ್ಲಾ ಅಂತ. ನನಗೆ ಗೊತ್ತಿಲ್ಲ. ನಾನು ಹೀಗೆ ಇರೋದು. ಆನ್‌ಲೈನ್ ವಿಮರ್ಶೆಗಳಗಾಲಿ, ಯಾರದ್ದೇ ಸ್ಟೇಟಸ್ ಆಗಲಿ, ನನ್ನ ಮೊಬೈಲ್ ಫೋನ್ ಅನ್ನು ಇಂತಹದ್ದಕ್ಕೆ ಬಳಸುವುದಿಲ್ಲ. ಕೇವಲ ಸಂವಹನಕ್ಕೆ ಮಾತ್ರ ಬಳಸುತ್ತೇನೆ." ಎಂದು ಸುದೀಪ್ ಹೇಳಿದ್ದಾರೆ.

  English summary
  Fan Following Should Convert In to Tickets Says Kichcha Sudeep In Vikrant Rona Interview, Know More.
  Saturday, July 16, 2022, 19:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X