»   » ವಿನಯ್ ಈಗ 'ಮೆಗಾ 3G ಪವರ್ ಸ್ಟಾರ್'

ವಿನಯ್ ಈಗ 'ಮೆಗಾ 3G ಪವರ್ ಸ್ಟಾರ್'

Posted By:
Subscribe to Filmibeat Kannada

ಒಂದು ಸಿನಿಮಾ ರಿಲೀಸ್ ಆದ್ಮೇಲೆ 'ಹೀರೋ'ಗಳಿಗೆ ಬಿರುದು ಸಿಗುವುದು ಸರ್ವೇ ಸಾಮಾನ್ಯ. ಅಭಿಮಾನಿಗಳು ಅಭಿಮಾನದಿಂದ ಕೊಡುವ ಈ ಬಿರುದು 'ಹೀರೋ'ಗಳಿಗೆ ಪ್ರಶಸ್ತಿ ಸ್ವೀಕರಿಸಿದಷ್ಟೇ ಸಮ.

ಬೇಕಾದ್ರೆ ಸ್ವಲ್ಪ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ, ರಾಜಣ್ಣನಿಗೆ ತಮ್ಮ ಅಭಿಮಾನಿಗಳಿಂದ ಸಿಕ್ಕಿರುವ ಹಿರಿಮೆಯ ಗರಿಗಳು ಒಂದಾ ಎರಡಾ...? 'ನಟಸಾರ್ವಭೌಮ', 'ವರನಟ', 'ಕನ್ನಡಿಗರ ಆರಾಧ್ಯಧೈವ', 'ಗಾನ ಗಂಧರ್ವ'...ಹೀಗೆ ಅಪ್ಪಾಜಿಯನ್ನ ಒಂದೊಂದು ರೀತಿಯಲ್ಲಿ ಎಲ್ಲರೂ ಕರೆಯುತ್ತಿದ್ದರು. [ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ವಿಶೇಷ ಸಂದರ್ಶನ]

Fans addressing Vinay Rajkumar

'ಹ್ಯಾಟ್ರಿಕ್ ಹೀರೋ', 'ಸೆಂಚುರಿ ಸ್ಟಾರ್', 'ಕರುನಾಡ ಚಕ್ರವರ್ತಿ', 'ನಾಟ್ಯ ಸಾರ್ವಭೌಮ'...ಇದೆಲ್ಲವೂ ಶಿವಣ್ಣನಿಗೆ ಸಿಕ್ಕಿರುವ ಪದವಿಗಳು. ಅಪ್ಪು 'ಪವರ್ ಸ್ಟಾರ್' ಅಂತ ನಿಮ್ಗೆಲ್ಲಾ ಗೊತ್ತಿದೆ. ಎಲ್ಲಾ ನಾಯಕರಿಗೂ ಒಂದೊಂದು 'ಸ್ಟಾರ್' ನೇಮ್ ಇದ್ದೇ ಇದೆ..! ['ಸಿದ್ದಾರ್ಥ' ವಿಮರ್ಶೆ: ಅಣ್ಣಾವ್ರ ಹೆಸರುಳಿಸಿದ ಮೊಮ್ಮಗ]

ಹೀಗಿರುವಾಗ ಮೊನ್ನೆಮೊನ್ನೆಯಷ್ಟೇ ಬೆಳ್ಳಿತೆರೆ ಮೇಲೆ ಪದಾರ್ಪಣೆ ಮಾಡಿರುವ ವಿನಯ್ ರಾಜ್ ಕುಮಾರ್ ಗೆ ಒಂದು 'ಸ್ಟಾರ್' ಪಟ್ಟ ಬೇಡ್ವಾ..! 'ಸಿದ್ದಾರ್ಥ' ರಿಲೀಸ್ ಆದ ಮಾರನೇ ದಿನವೇ ಅಭಿಮಾನಿಗಳು ವಿನಯ್ ರಾಜ್ ಕುಮಾರ್ ಗೆ 'ಸ್ಟಾರ್ ಕಿರೀಟ' ತೊಡಿಸಿದ್ದಾರೆ. ['ಸಿದ್ದಾರ್ಥ'ನಿಗಾಗಿ ಫಿನ್ ಲ್ಯಾಂಡ್ ನಿಂದ ಬಂದ ಮಿ.ಹೆರ್ರಿ!]

Fans addressing Vinay Rajkumar

ಅದೇನಪ್ಪಾ ಅಂದ್ರೆ, ''ಮೆಗಾ 3G ಪವರ್ ಸ್ಟಾರ್''..! ರಾಜ್ ಕುಟುಂಬದ ಕಿರಿಯ ಕುಡಿ ವಿನಯ್ ಆಗಿರುವುದರಿಂದ 'ಮೆಗಾ', ಮೂರನೇ ತಲೆಮಾರು ಆದ್ದರಿಂದ '3G', ಆಕ್ಷನ್ ನಲ್ಲಿ ವಿನಯ್ ಅಬ್ಬರಿಸಿರುವುದರಿಂದ 'ಪವರ್',..ಈ ಮೂರನ್ನೂ ಮಿಕ್ಸ್ ಮಾಡಿ ಅಭಿಮಾನಿಗಳು ''ಮೆಗಾ 3G ಪವರ್ ಸ್ಟಾರ್'' ಅಂತ ನಾಮಕರಣ ಮಾಡಿದ್ದಾರೆ. [ವಿಮರ್ಶಕರು 'ಸಿದ್ದಾರ್ಥ'ನನ್ನ ಮೆಚ್ಚಿದ್ದಾರಾ? ಇಲ್ಲಿ ಓದಿ..]

ಈಗಾಗಲೇ ಫೇಸ್ ಬುಕ್ ನಲ್ಲಿ ''ಮೆಗಾ 3G ಪವರ್ ಸ್ಟಾರ್'' ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ನಿರ್ದೇಶಕ ಆರ್.ಚಂದ್ರು ಕೂಡ ಹಾಗೇ ಕರೆದಿದ್ದಾರೆ.

Post by R chandru.

ಒಟ್ನಲ್ಲಿ ವಿನಯ್ ರಾಜ್ ಕುಮಾರ್ ಗೆ ಹೊಸ ಟೈಟಲ್ ಸಿಕ್ಕಿದೆ. ಇನ್ಮುಂದೆ ಯಾರಾದರೂ ''3G ಸ್ಟಾರ್'' ಅಂದರೆ ತಕ್ಷಣ ಅಣ್ಣಾವ್ರ ಮೊಮ್ಮಗನನ್ನ ನೆನಪಿಸಿಕೊಳ್ಳಿ. (ಫಿಲ್ಮಿಬೀಟ್ ಕನ್ನಡ)

English summary
Vinay Rajkumar who recently made debut with 'Siddhartha' has got a title 'Mega 3G Power Star' from Fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada