Just In
Don't Miss!
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೆಜಿಎಫ್ ಟೀಸರ್ ಸೂಪರ್: ಆದ್ರೂ ಆ ವಿಚಾರಕ್ಕೆ ಬೇಸರಗೊಂಡ ಅಭಿಮಾನಿಗಳು!
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿದ್ದು, ಬಹಳ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ರಿಲೀಸ್ ಆದ 49 ನಿಮಿಷದಲ್ಲಿ 5 ಮಿಲಿಯನ್ ವೀಕ್ಷಣೆ ಕಾಣುವ ಮೂಲಕ ದಾಖಲೆ ಸೃಷ್ಟಿಸಿತ್ತು. 12 ಗಂಟೆಯಲ್ಲಿ 25 ಮಿಲಿಯನ್ ವೀಕ್ಷಣೆ ಕಾಣುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ.
ತಮಿಳು, ಹಿಂದಿ, ತೆಲುಗು ಹೀಗೆ ಎಲ್ಲ ಚಿತ್ರರಂಗ ದಿಗ್ಗಜರು ಕೆಜಿಎಫ್ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಇಷ್ಟು ದಿನ ಪರಭಾಷೆಗೆ ಪೈಪೋಟಿ, ಬಾಲಿವುಡ್‌ಗೆ ಪೈಪೋಟಿ ಎನ್ನುತ್ತಿದ್ದ ಕನ್ನಡ ಮಂದಿ ಈಗ ಹಾಲಿವುಡ್‌ಗೆ ಪೈಪೋಟಿ ಎಂದು ಬೀಗುವಂತಾಗಿದೆ. ಇಷ್ಟೆಲ್ಲ ಸಂಭ್ರಮ, ಖುಷಿಯಲ್ಲಿರುವ ಅಭಿಮಾನಿಗಳು ಆ ಒಂದು ವಿಚಾರಕ್ಕೆ ಬಹಳ ನಿರಾಸೆಯಾಗುತ್ತಿದ್ದಾರೆ. ಆ ಒಬ್ಬ ಕಲಾವಿದನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಓದಿ....
ಕೆಜಿಎಫ್ 2 ಟೀಸರ್ ವಿಶ್ವದಾಖಲೆ: ಧೂಳಿಪಟವಾದ 'ಮಾಸ್ಟರ್', 'ಅವೇಂಜರ್ಸ್'

ಟೀಸರ್‌ಗೆ ಇರಬೇಕಿತ್ತು ಅನಂತ್ ನಾಗ್ ಧ್ವನಿ
ಕೆಜಿಎಫ್ ಚಾಪ್ಟರ್ 1 ಟೀಸರ್ ಮೊದಲ ವೀಕ್ಷಣೆಯಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದು ಅನಂತ್ ಅವರ ಹಿನ್ನೆಲೆ ಧ್ವನಿಯಿಂದ. ಅದ್ಭುತವಾದ ಟೀಸರ್‌ಗೆ ಅನಂತ್ ನಾಗ್ ಅವರ ವಾಯ್ಸ್ ಶಕ್ತಿ ತುಂಬಿತ್ತು. ಸಿನಿಮಾದಲ್ಲೂ ಅನಂತ್ ಅವರ ನಿರೂಪಣೆ ಬಹಳ ಮೆಚ್ಚುಗೆ ಪಡೆದುಕೊಂಡಿತ್ತು. ಆದರೆ, ಚಾಪ್ಟರ್ 2 ಟೀಸರ್‌ನಲ್ಲಿ ಅನಂತ್ ನಾಗ್ ವಾಯ್ಸ್ ಇರುತ್ತದೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳು ಬಹಳ ನಿರಾಸೆಯಾಗಿದ್ದಾರೆ. (ಚಿತ್ರಕೃಪೆ: Troll Hudugru)

ಅನಂತ್ ನಾಗ್ ಅವರಿಂದ ಕೊಡಿಸಿ
ಟೀಸರ್ ಸೂಪರ್, ಹಿನ್ನೆಲೆ ಸಂಗೀತ ಸೂಪರ್ ಆದ್ರೆ ಅನಂತ್ ಸರ್ ಧ್ವನಿ ಇಲ್ಲ ಎಂದು ಬೇಸರವಾಗಿದ್ದಾರೆ. ಚಾಪ್ಟರ್ 2 ಟೀಸರ್ ಇನ್ನೊಂದು ಲೆವೆಲ್‌ಗೆ ಹೋಗ್ಬೇಕು ಅಂದ್ರೆ ಅನಂತ್ ನಾಗ್ ಅವರಿಂದ ವಾಯ್ಸ್ ಕೊಡಿಸಿ, ಮತ್ತೆ ಬಿಡುಗಡೆ ಮಾಡಿಸಿ. ಅನಂತ್ ವಾರ ಧ್ವನಿಯನ್ನು ನಾವು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ.
ಕೆಜಿಎಫ್ 2 ಟೀಸರ್ ಬಿಡುಗಡೆ: ರಾಕಿ ಭಾಯ್ ಗತ್ತಿಗೆ ಯಾರಿಲ್ಲ ಸಾಟಿ

ಚಾಪ್ಟರ್ 2ರಲ್ಲಿ ಅನಂತ್ ನಾಗ್ ಇಲ್ಲ
ಕೆಜಿಎಫ್ ಚಾಪ್ಟರ್ 2ರಲ್ಲಿ ಅನಂತ್ ನಾಗ್ ಇರುವುದಿಲ್ಲ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಇದು ಬಹಳ ವಿರೋಧಕ್ಕೂ ಕಾರಣವಾಗಿತ್ತು. ಅನಂತ್ ನಾಗ್ ಅಲಭ್ಯತೆ ಬಗ್ಗೆ ಚಿತ್ರತಂಡವೂ ಅಧೀಕೃತವಾಗಿ ಎಲ್ಲಿಯೂ ಹೇಳಿರಲಿಲ್ಲ. ಆದ್ರೀಗ, ಕೆಜಿಎಫ್ ಸಿನಿಮಾದ ಅಧಿಕೃತ ದಾಖಲೆಗಳಲ್ಲಿ ಎಲ್ಲಿಯೂ ಅನಂತ್ ನಾಗ್ ಹೆಸರಿಲ್ಲ. ಚಾಪ್ಟರ್ 2ರಲ್ಲಿ ಅನಂತ್ ಅವರಿಲ್ಲ ಎನ್ನುವುದನ್ನು ಖಚಿತಪಡಿಸಿದೆ.

ಅನಂತ್ ನಾಗ್ ಬದಲು ಪ್ರಕಾಶ್ ರಾಜ್
ಕೆಜಿಎಫ್ ಚಾಪ್ಟರ್ 2ರಲ್ಲಿ ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರಾಜ್ ಎಂಟ್ರಿಯಾಗಿದೆ. ಪ್ರಕಾಶ್ ರಾಜ್ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಪ್ರಶಾಂತ್ ನೀಲ್ ಸ್ಪಷ್ಟನೆ ಸಹ ನೀಡಿದ್ದರು. ಪ್ರಕಾಶ್ ರಾಜ್ ಹೊಸ ಪಾತ್ರ ಎಂದು ಹೇಳಿದ್ದ ನಿರ್ದೇಶಕ ಅನಂತ್ ನಾಗ್ ಇರುವುದಿಲ್ಲ ಎಂದು ಮಾಹಿತಿ ನೀಡಿರಲಿಲ್ಲ. ಇಷ್ಟೆಲ್ಲ ಬೆಳವಣಿಗೆಯ ನಡುವೆಯೂ ಅಭಿಮಾನಿಗಳು ಅನಂತ್ ನಾಗ್ ಅವರ ಇರುವಿಕೆ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರು.